ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಟ್ಟಿಕೊಂಡ ಪೊಲೀಸ್ ಹೆಂಡತಿಯಿಂದ ಸೈನಿಕನಿಗೆ ಇದೆಂತಾ ಮೋಸ..!

|
Google Oneindia Kannada News

ಬೆಂಗಳೂರು, ಜನವರಿ 31: ಭಾರತೀಯ ಸೇನೆಯ ಯೋಧನೊಬ್ಬ, ಪೊಲೀಸ್ ಪೇದೆಯಾಗಿರುವ ತನ್ನ ಪತ್ನಿ ಪರಪುರುಷನೊಂದಿಗೆ ಸಂಬಂಧ ಹೊಂದಿ, ತನಗೆ ಮೋಸ ಮಾಡುತ್ತಿದ್ದಾಳೆ, ನ್ಯಾಯ ಕೊಡಿಸಿ ಎಂದು ಕಣ್ಣೀರಿಡುತ್ತಿದ್ದಾರೆ.

Recommended Video

Bengaluru's traffic is the worst in the world | Bangalore | Traffic | No 1 | World

ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಮೂಲತಃ ಕೊಡಗು ಜಿಲ್ಲೆಯ ಯೋಧನಾಗಿರುವ ಪ್ರಶಾಂತ್ ಯು ಸಿ ಎನ್ನುವರು ತಮ್ಮ ಹೆಂಡತಿ ಪೂರ್ಣಿಮಾ ಎಂಬಾಕೆ ತಮಗೆ ಮೋಸ ಮಾಡಿದ್ದಾಳೆ, ನನಗೆ ನ್ಯಾಯ ಕೊಡಿಸಿ ಎಂದು ಗೃಹ ಸಚಿವರ ಮೊರೆ ಹೋಗಿದ್ದಾರೆ.

ಕತ್ತಲೆಯಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿದ ಓಲಾ ಚಾಲಕ..!ಕತ್ತಲೆಯಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿದ ಓಲಾ ಚಾಲಕ..!

ಪೊಲೀಸ್ ಇಲಾಖೆಯಲ್ಲಿ ಕಾನ್​ಸ್ಟೇಬಲ್​ ಆಗಿರುವ ತನ್ನ ಹೆಂಡತಿ ಪೂರ್ಣಿಮಾ ಪರ ಪುರುಷನೊಂದಿಗೆ ಅನೈತಿಕ‌ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ನ್ಯಾಯಕ್ಕಾಗಿ ಗೃಹ ಸಚಿವರ ಭೇಟಿಯಾಗಿ ಗುರುವಾರ ದೂರು ನೀಡಿದ್ದಾರೆ. ಸಮವಸ್ತ್ರ ಧರಿಸಿಯೇ ಗೃಹ ಸಚಿವರ ಮುಖೇನ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಂ.ಎಂ ವಿಜಯ್ ಭಾಸ್ಕರ್​ಗೆ ದೂರು ನೀಡಿದ್ದಾರೆ.

ಪೂರ್ಣಿಮಾರೊಂದಿಗೆ ಮದುವೆಯಾಗಿದ್ದರು

ಪೂರ್ಣಿಮಾರೊಂದಿಗೆ ಮದುವೆಯಾಗಿದ್ದರು

ಮಡಿಕೇರಿ‌ ಮೂಲದ ಪ್ರಶಾಂತ್ ಆರು ತಿಂಗಳ ಹಿಂದೆ ಗುರು ಹಿರಿಯರ ಸಮ್ಮುಖದಲ್ಲಿ ಕೊಡಗಿನ ಗೋಣಿಕೊಪ್ಪಲು ಠಾಣೆಯ ಪೇದೆಯಾಗಿ ಕೆಲಸ ಮಾಡುತ್ತಿದ್ದ ಪೂರ್ಣಿಮಾರೊಂದಿಗೆ ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ನಂತರ ಕರ್ತವ್ಯಕ್ಕಾಗಿ ಜಮ್ಮು ಕಾಶ್ಮೀರಕ್ಕಾಗಿ ಪ್ರಶಾಂತ್ ಹೋಗಿದ್ದರಂತೆ.

ಮೋಹನ್ ಎಂಬ ಪೇದೆ ಜೊತೆ ಸಂಬಂಧ

ಮೋಹನ್ ಎಂಬ ಪೇದೆ ಜೊತೆ ಸಂಬಂಧ

ಮದುವೆಯಾದ ಕೆಲ ತಿಂಗಳ ಬಳಿಕ ತನ್ನ ಹೆಂಡತಿಯು ಅದೇ ಠಾಣೆಯಲ್ಲಿ ಕೆಲಸ‌ ಮಾಡುತ್ತಿದ್ದ ಮೋಹನ್ ಎಂಬ ಪೇದೆ ಜೊತೆ ಸಂಬಂಧ ಹೊಂದಿರುವುದು ಗೊತ್ತಾಗಿದೆ‌. ಈ ವಿಚಾರ ತಿಳಿದು ಸಾಕಷ್ಟು ಬಾರಿ ಹೆಂಡತಿಗೆ ಮನವೊಲಿಸಿದರೂ ನನ್ನ ಹೆಂಡತಿ ಕೇಳೋಕೆ ತಯಾರಾಗಿಲ್ಲ ಎಂದು ಯೋಧ ಪ್ರಶಾಂತ್ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು: ಹೆಂಡತಿಗಾಗಿ ಇಬ್ಬರು ಗಂಡಂದಿರ ಕಿತ್ತಾಟ ಕೊಲೆಯಲ್ಲಿ ಅಂತ್ಯಬೆಂಗಳೂರು: ಹೆಂಡತಿಗಾಗಿ ಇಬ್ಬರು ಗಂಡಂದಿರ ಕಿತ್ತಾಟ ಕೊಲೆಯಲ್ಲಿ ಅಂತ್ಯ

ಅಣ್ಣ-ತಂಗಿ ಎಂದು ಹೆಂಡತಿ ನಂಬಿಸಿದ್ದಳಂತೆ

ಅಣ್ಣ-ತಂಗಿ ಎಂದು ಹೆಂಡತಿ ನಂಬಿಸಿದ್ದಳಂತೆ

ಪ್ರಶಾಂತ್, ಪತ್ನಿ ಬಳಿ ಮೋಹನ್ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನಿಸಿದಕ್ಕೆ ಮೊದಲು ನಾವು ಅಣ್ಣ-ತಂಗಿ ಎಂದು ಹೆಂಡತಿ ನಂಬಿಸಿದ್ದಳಂತೆ. ಕೂಲಂಕುಷವಾಗಿ ವಿಚಾರಿಸಿದಾಗ ಮೋಹನ್, ಪೂರ್ಣಿಮಾಗೆ ವಿಡಿಯೋ ಕಾಲ್ ಹಾಗೂ ಮೆಸೇಜ್ ಮಾಡುತ್ತಿರುವುದು ಗೊತ್ತಾಗಿದೆ. ಈ ಕುರಿತು ಪತ್ನಿಗೆ ಪ್ರಶ್ನಿಸಿದಾಗ ಅಕ್ರಮ ಸಂಬಂಧದ ಬಗ್ಗೆ ತಪ್ಪು ಒಪ್ಪಿಕೊಂಡು ಮತ್ತೆ ಸಂಸಾರ ನಡೆಸೋದಾಗಿ ಭರವಸೆ ನೀಡಿದ್ದಳು ಎಂದು ದೂರಿನಲ್ಲಿ ಹೇಳಿದ್ದಾರೆ.

ಅವಕಾಶ ಕೊಟ್ಟರೂ ಬದಲಾಗಲಿಲ್ಲ

ಅವಕಾಶ ಕೊಟ್ಟರೂ ಬದಲಾಗಲಿಲ್ಲ

ನನ್ನ ಪತ್ನಿ ಐದು ಬಾರಿ ತಪ್ಪು ತಿದ್ದಿಕೊಳ್ಳೋಕೆ ಅವಕಾಶ ಕೊಟ್ಟರೂ ಬದಲಾಗಲಿಲ್ಲ ಎಂದು ಯೋಧ ಪ್ರಶಾಂತ್ ಅಳಲು ತೋಡಿಕೊಂಡಿದ್ದಾರೆ. ಮೋಹನ್​ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಪ್ರಶಾಂತ್ ದೂರು ನೀಡಿದ್ದಾರೆ.

English summary
Indian Army Soldier, Named Prashant Complaint against His Wife to Home Minister in Bengaluru on thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X