• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಲಸಿಗರ ನೆಚ್ಚಿನ ವಿಶ್ವದ ಆರು ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಸ್ಥಾನ

|
Google Oneindia Kannada News

ಸಿಲಿಕಾನ್ ಸಿಟಿ, ಭಾರತದ ಸ್ಟಾರ್ಟ್ ಅಪ್ ಕ್ಯಾಪಿಟಲ್ ಎಂದೇ ಕರೆಯಲ್ಪಡುವ ಬೆಂಗಳೂರಿನ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ವಿಶ್ವದ ಆರು ಅತ್ಯುತ್ತಮ ನಗರಗಳಲ್ಲಿ ಬೆಂಗಳೂರು ಕೂಡ ಸ್ಥಾನ ಪಡೆದಿದೆ. ಬೆಂಗಳೂರು ವಲಸಿಗರಿಗೆ ನೆಚ್ಚಿನ ತಾಣವಾಗಿದೆ. ಸ್ಟಾರ್ಟ್ ಅಪ್‌ಗಳನ್ನು ಶುರು ಮಾಡುವ ನವ ಉದ್ಯಮಿಗಳ ನೆಚ್ಚಿನ ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ.

ಭಾರತದ ಸ್ಟಾರ್ಟ್ ಅಪ್ ಕ್ಯಾಪಿಟಲ್‌ ಬೆಂಗಳೂರಿಗೆ ಹೆಚ್ಚಿನ ವಿದೇಶಿ ಬಂಡವಾಳ ಹರಿದುಬರುತ್ತಿದೆ. ಸಿಕ್ವೊಯಾ ಕ್ಯಾಪಿಟಲ್ ಮತ್ತು ಗೋಲ್ಡ್‌ಮನ್ ಸ್ಯಾಚ್ಸ್ ವೆಂಚರ್ ಕ್ಯಾಪಿಟಲ್ ನಂತಹ ಕಂಪನಿಗಳು ಬೆಂಗಳೂರಿನಲ್ಲಿ ಹೆಚ್ಚಿನ ಬಂಡವಾಳ ಹೂಡುತ್ತಿವೆ. ಅಂದಾಜಿನ ಪ್ರಕಾರ ಲಂಡನ್ ಅಥವಾ ಸ್ಯಾನ್ ಫ್ರಾನ್ಸಿಸ್ಕೋ ನಗರಗಳಿಗಿಂತ ಬೆಂಗಳೂರಿಗೆ ವಿದೇಶಿ ಬಂಡವಾಳದ ಹರಿವು ಹೆಚ್ಚಿದೆ. 2016ರಲ್ಲಿ ಬೆಂಗಳೂರಿಗೆ 1.3 ಶತಕೋಟಿ ಡಾಲರ್ ಬಂಡವಾಳ ಹರಿದು ಬಂದಿದ್ದರೆ, 2020ರಲ್ಲಿ ಅದು 7.2 ಶತಕೋಟಿ ಡಾಲರ್ ಗೆ ಹೆಚ್ಚಳವಾಗಿದೆ ಎಂದು ಹೇಳಿದೆ.

ಶಿವಾನಂದ ಸರ್ಕಲ್ ಉಕ್ಕಿನ ಸೇತುವೆ ಒಂದು ಭಾಗ ಸಂಚಾರಕ್ಕೆ ಮುಕ್ತಶಿವಾನಂದ ಸರ್ಕಲ್ ಉಕ್ಕಿನ ಸೇತುವೆ ಒಂದು ಭಾಗ ಸಂಚಾರಕ್ಕೆ ಮುಕ್ತ

ವಲಸಿಗರಿಗೆ ಅತ್ಯಂತ ಹೆಚ್ಚಿನ ನೆಚ್ಚಿನ ನಗರಗಳ ಪಟ್ಟಿಯಲ್ಲಿ ಕೌಲಾಲಂಪುರ್, ಲಿಸ್ಬನ್, ದುಬೈ, ಮೆಕ್ಸಿಕೊ ಸಿಟಿ ಮತ್ತು ರಿಯೊ ಡಿ ಜನೈರೊ ಸೇರಿವೆ.

 ವಲಸಿಗರಿಗೆ ನೆಚ್ಚಿನ ತಾಣ ಬೆಂಗಳೂರು

ವಲಸಿಗರಿಗೆ ನೆಚ್ಚಿನ ತಾಣ ಬೆಂಗಳೂರು

ವೇಗವಾಗಿ ಬೆಳೆಯುತ್ತಿರುವ ಟೆಕ್ ಹಬ್‌ಗಳಲ್ಲಿ ಒಂದಾಗಿ, ಬೆಂಗಳೂರು ಸಾವಿರಾರು ಯಶಸ್ವಿ ಸ್ಟಾರ್ಟ್‌ಅಪ್‌ಗಳು ಮತ್ತು ಐಟಿ ಕಂಪನಿಗಳಿಗೆ ನೆಲೆಯಾಗಿದೆ, ಹೆಚ್ಚು ಹೆಚ್ಚು ವಲಸಿಗರನ್ನು ಆಕರ್ಷಿಸುತ್ತಿದೆ. ಅದರೊಂದಿಗೆ, ಹೆಚ್ಚುತ್ತಿರುವ ವಲಸಿಗರ ಜನಸಂಖ್ಯೆಗೆ ಸೇವೆ ಸಲ್ಲಿಸಲು ಅಂತರರಾಷ್ಟ್ರೀಯ ಶಾಲೆಗಳು, ಬಾರ್‌ಗಳು ಮತ್ತು ಬಿಸ್ಟ್ರೋಗಳಲ್ಲಿ ಏರಿಕೆ ಕಂಡುಬಂದಿದೆ.

ಹೆಚ್ಚಿನ ಸಂಬಳ ನೀಡುವ ಉದ್ಯೋಗಗಳು ಮತ್ತು ಕೈಗೆಟುಕುವ ಐಷಾರಾಮಿ ಜೀವನಶೈಲಿಯೊಂದಿಗೆ ರೋಮಾಂಚಕ ಅಂತರರಾಷ್ಟ್ರೀಯ ಸಮುದಾಯವನ್ನು ನಿರ್ಮಿಸುವ ಮೂಲಕ ಬೆಂಗಳೂರು ಜಾಗತಿಕ ನಗರವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ಲೂಮ್‌ಬರ್ಗ್ ಹೇಳಿದೆ.

 ಬೆಂಗಳೂರಿಗರಿಗೆ ಕಲಿಯುವ ಹಸಿವು ಇದೆ

ಬೆಂಗಳೂರಿಗರಿಗೆ ಕಲಿಯುವ ಹಸಿವು ಇದೆ

"ಬೆಂಗಳೂರಿನಲ್ಲಿ ನೆಲೆಸುವ ಮೊದಲು ನಾವು ಫಿನ್‌ಲ್ಯಾಂಡ್, ಲ್ಯಾಟಿನ್ ಅಮೇರಿಕಾ ಮತ್ತು ಕೆನಡಾಗಳನ್ನು ಪರಿಗಣಿಸಿದ್ದೆವು" ಕಿಮ್ ಹೇಳಿದರು. ಬೆಂಗಳೂರಿನ ಜನರು ಕಲಿಯುವ ಹಸಿವನ್ನು ಹೊಂದಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

"ಬೆಂಗಳೂರಿನಲ್ಲಿ ರಸ್ತೆಗಳು ಮತ್ತು ಕಟ್ಟಡಗಳು ಸೇರಿದಂತೆ ಹಲವು ವಿಷಯಗಳು ಅಪೂರ್ಣವಾಗಿದೆ ಎಂದು ತೋರುತ್ತದೆ, ಮತ್ತು ಪ್ರತಿಯೊಬ್ಬರೂ ಕೂಡ ಧಾವಂತದಲ್ಲಿ ಬದುಕುತ್ತಿದ್ದಾರೆ." ಎಂದು ಅವರು ಹೇಳಿದರು. "ಆದರೆ ಬಹಳ ದಿನಗಳ ನಂತರ ನನಗೆ, ಏನಾದರು ಉಪಯುಕ್ತವಾದುದ್ದನ್ನು ಮಾಡುತ್ತಿದ್ದೇನೆ ಎಂದು ಬೆಂಗಳೂರಿಗೆ ಬಂದ ನಂತರ ಅನಿಸುತ್ತಿದೆ" ಎಂದು ಹೇಳುತ್ತಾರೆ.

 ಯುಎಸ್‌ ಸಿಲಿಕಾನ್ ವ್ಯಾಲಿ ಬಗ್ಗೆ ಅಸಮಾಧಾನ

ಯುಎಸ್‌ ಸಿಲಿಕಾನ್ ವ್ಯಾಲಿ ಬಗ್ಗೆ ಅಸಮಾಧಾನ

2020 ರಲ್ಲಿ ಭಾರತದಲ್ಲಿ ಗೇಮಿಂಗ್ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ, ಜೋಸೆಫ್ ಕಿಮ್ ಸ್ಯಾನ್‌ ಫ್ರಾನ್ಸಿಸ್ಕೋ ತೊರೆದು ಬೆಂಗಳೂರಿಗೆ ಬಂದರು. ಇಬ್ಬರು ಕೋ ಫೌಂಡರ್ ಗಳ ಜೊತೆಗೂಡಿ ಬೆಂಗಳೂರಿನ ಇಂದಿರಾ ನಗರದಲ್ಲಿ ಲೀಲಾ ಗೇಮ್ಸ್ ಪ್ರೈವೇಟ್ ಲಿಮಿಟೆಡ್ ಸ್ಥಾಪನೆ ಮಾಡಿದ್ದಾರೆ.

ಬ್ಲೂಮ್‌ಬರ್ಗ್ ಜೊತೆ ಮಾತನಾಡಿರುವ ಜೋಸೆಫ್ ಕಿಮ್, "ಜನರು ಯುಎಸ್‌ನ ಟೆಕ್‌ ಕ್ಯಾಪಿಟಲ್ ಸಿಲಿಕಾನ್ ವ್ಯಾಲಿ, ಅದರ ರಾಜಕೀಯ, ಅಪರಾಧ ಮತ್ತು ಶಿಕ್ಷಣದ ನಿರಾಶಾದಾಯಕ ಸ್ಥಿತಿಯಿಂದ ಹೆಚ್ಚು ಅಸಮಾಧಾನಗೊಂಡಿದ್ದಾರೆ, ಇದರಿಂದ ಜನ ಅಲ್ಲಿಂದ ಸಾಮೂಹಿಕವಾಗಿ ವಲಸೆ ಹೋಗುತ್ತಿದ್ದಾರೆ" ಎಂದು ಹೇಳಿದರು.

 ನೆಚ್ಚಿನ ನಗರಗಳಲ್ಲಿ ಪಟ್ಟಿಯಲ್ಲಿ ಕೌಲಾಲಂಪುರ ಮೊದಲು

ನೆಚ್ಚಿನ ನಗರಗಳಲ್ಲಿ ಪಟ್ಟಿಯಲ್ಲಿ ಕೌಲಾಲಂಪುರ ಮೊದಲು

ಮಲೇಷಿಯಾದ ರಾಜಧಾನಿ ಕೌಲಾಲಂಪುರ ಜಾಗತಿಕ ವ್ಯವಹಾರಗಳಿಗೆ ಹೆಚ್ಚು ಆಕರ್ಷಕವಾಗುತ್ತಿದೆ, ಸರಾಗವಾಗಿ ಇಂಗ್ಲಿಷ್ ಮಾತನಾಡುವ ಅಲ್ಲಿನ ಉದ್ಯೋಗಿಗಳು, ಸುಲಭವಾದ ವಿಮಾನ ಸಂಪರ್ಕ, ಸಾರಿಗೆ ಸೌಲಭ್ಯಗಳು ಅದನ್ನು ನೆಚ್ಚಿನ ತಾಣವನ್ನಾಗಿಸಿವೆ. ವಿಶ್ವಾದ್ಯಂತ 12,000 ವಲಸಿಗರ ಸಮೀಕ್ಷೆಯಲ್ಲಿ ಕೌಲಾಲಂಪುರ ಮೊದಲ ಸ್ಥಾನದಲ್ಲಿದೆ.

ಯುರೋಪ್‌ನ ಅತ್ಯಂತ ಹಳೆಯ ನಗರಗಳಲ್ಲಿ ಒಂದಾದ ಲಿಸ್ಬನ್ ಕೂಡ ವಲಸಿಗರ ನೆಚ್ಚಿನ ತಾಣದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ದುಬೈ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕಳೆದ ಒಂದು ದಶಕದಿಂದ ಜಾಗತಿಕವಾಗಿ ವಲಸಿಗರ ಸಂಚಾರಕ್ಕೆ ಹಾಂಗ್ ಕಾಂಗ್ ಮತ್ತು ಸಿಂಗಾಪುರಕ್ಕೆ ಸವಾಲು ಹಾಕುತ್ತಿದೆ. ಕೋವಿಡ್ ಸಾಂಕ್ರಾಮಿಕವನ್ನು ದುಬೈ ನಿರ್ವಹಿಸಿದ ರೀತಿ ಅದನ್ನು ಮತ್ತಷ್ಟು ಜನಪ್ರಿಯಗೊಳಿಸಿದೆ. ಲ್ಯಾಟಿನ್ ಅಮೆರಿಕಾದ ಮೆಕ್ಸಿಕೊ ಮತ್ತು ರಿಯೋ ಡಿ ಜನೈರೊ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ.

Recommended Video

   ಇಷ್ಟುದ್ದದ ರೈಲು ನೀವು ಬಿಟ್ಟಿರೋಕೆ ಸಾಧ್ಯಾನೇ ಇಲ್ಲ | *India | OneIndia Kannada
   English summary
   Bengaluru is among the six best emerging cities for expats in the world. Bengaluru has become one of the world’s fastest-growing tech hubs, home to thousands of startups and software firms, fueled with money from global technology companies and blue-chip foreign investors such as Sequoia Capital and Goldman Sachs.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X