ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೂಗಲ್ ಭಾಷಾಂತರದಲ್ಲಿ ಪಾಲ್ಗೊಳ್ಳಿ ಆಂಡ್ರಾಯ್ಡ್ ಒನ್ ಫೋನ್ ಗೆಲ್ಲಿ!

By Mahesh
|
Google Oneindia Kannada News

ಬೆಂಗಳೂರು, ಡಿ.23: ಭಾರತದಲ್ಲಿ 22 ಅಧಿಕೃತ ಭಾಷೆಗಳಿವೆ. ಗೂಗಲ್ ಟ್ರಾನ್ಸ್ ಲೇಟ್ ಟೂಲ್ ಬಳಸಿ 9 ಭಾಷೆಗಳನ್ನು ಭಾಷಾಂತರಗೊಳಿಸಿ ಓದಬಹುದಾಗಿದೆ. ಭಾಷೆ ಬಗ್ಗೆ ಅಭಿಮಾನವುಳ್ಳ ಬೆಂಗಾಳಿ, ತೆಲುಗು, ತಮಿಳು ಭಾಷಿಕರು ಈ ಕಾರ್ಯವನ್ನು ಸಾಧಿಸಿದ್ದಾರೆ. ಈಗ ಕನ್ನಡ ಸೇರಿದಂತೆ ಮಿಕ್ಕ ಭಾಷಿಗರಿಗೆ ಅವಕಾಶ ಲಭ್ಯವಾಗಿದೆ.

ಗೂಗಲ್ ಭಾರತದಲ್ಲಿ ಎರಡನೇ ಟ್ರಾನ್ಸ್ಲೇಥನ್ ಆರಂಭಿಸಿದ್ದು, ಕನ್ನಡ, ಹಿಂದಿ, ಬೆಂಗಾಳಿ, ತೆಲುಗು, ತಮಿಳು, ಮರಾಠಿ, ಗುಜರಾತಿ, ಮಲೆಯಾಳಂ ಹಾಗೂ ಪಂಜಾಬಿ ಭಾಷೆಗೆ ಭಾಷಾಂತರ ಮಾಡುವ ಅವಕಾಶ ಸಿಕ್ಕಿದೆ.ವಿವಿಧ ಭಾಷೆಗಳಲ್ಲಿ ಸೇವೆಯನ್ನು ನೀಡುತ್ತಿರುವ ಗೂಗಲ್ ಭಾರತೀಯ ಬಳಕೆದಾರರಿಗೆ ಅವರ ಭಾಷೆಯಲ್ಲೇ ತನ್ನ ಸೇವೆಯನ್ನು ನೀಡುತ್ತಿದೆ.[ಕನ್ನಡ ಭಾಷಾಂತರಕಾರರಿಗೆ ಗೂಗಲ್ ನಿಂದ ಅನ್ಯಾಯ]

India’s second Translatathon needs you : Google

ನೀವು ನಿಮ್ಮ ಫೋನ್, ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಟೈಪ್ ಮಾಡಿ, ಸ್ವೈಪ್ ಅಥವಾ ಟಾಪ್ ಮಾಡಿ ನೀವು ಮಾತನಾಡುವ ಭಾಷೆಯ ಭಾಷಾಂತರ ಕಾರ್ಯಕ್ಕೆ ಮುಂದಾಗಬಹುದು.[ಭಾರತಕ್ಕಾಗಿ ಗೂಗಲ್, ಪಿಚ್ಚೈ ಹಂಚಿದ ಕನಸುಗಳೇನು?]

ಈಗಾಗಲೇ ಆರಂಭಗೊಂಡಿರುವ ಗೂಗಲ್ ಟ್ರಾನ್ ಲಾಥನ್ ಡಿಸೆಂಬರ್ 30ಕ್ಕೆ ಮುಕ್ತಾಯವಾಗಲಿದೆ. ಗೂಗಲ್ ಅಕೌಂಟಿನಿಂದ ಲಾಗಿನ್ ಆಗಿ ಗೂಗಲ್ ಟ್ರಾನ್ಸ್ಲೇಥನ್ ಕಮ್ಯೂನಿಟಿಗೆ ಹೋಗಿ ಅಲ್ಲಿ ನೀಡಲಾಗಿರುವ ಸರಳ ವಾಕ್ಯಗಳನ್ನು ಭಾಷಾಂತರ ಮಾಡಬೇಕು. ಅತಿ ಹೆಚ್ಚು ಕ್ರಿಯಾಶೀಲರಾದ 50 ಬಳಕೆದಾರರಿಗೆ ಆಂಡ್ರಾಯ್ಡ್ ಒನ್ ಫೋನ್ ಗೆಲ್ಲಬಹುದು.

ಕಳೆದ ವರ್ಷ ಸುಮಾರು 20 ಸಾವಿರ ಜನ ಲಕ್ಷಾಂತರ ಪದಗಳ ಭಾಷಾಂತರ ಕಾರ್ಯದಲ್ಲಿ ತೊಡಗಿದ್ದರು. ಇದರಿಂದ ಇಂಗ್ಲೀಷ್ ಭಾಷೆ ಗೊತ್ತಿಲ್ಲದೆ ಆನ್ ಲೈನ್ ಗೆ ಬಂದು ಮಾಹಿತಿ ಹುಡುಕುವ ಅನೇಕ ಮಂದಿಗೆ ನೆರವಾಗಲಿದೆ. ತಮ್ಮದೇ ಭಾಷೆ, ಪದ, ವಾಕ್ಯಗಳನ್ನು ಹುಡುಕಿಕೊಳ್ಳಬಹುದು.ಇನ್ನೇಕೆ ತಡ ಈಗಲೇ ನೋಂದಾಯಿಸಿ ಹಾಗೂ ತುರ್ಜುಮೆ ಕಾರ್ಯ ಮುಂದುವರೆಸಿ. ನೋಂದಾಯಿಸಿಕೊಳ್ಳಲು ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ

English summary
Google has just kicked off our second translatathon in India, this time for nine languages — Hindi, Bengali, Telugu, Marathi, Tamil, Gujarati, Kannada, Malayalam and Punjabi. You can use Google Translate Community on your phone, laptop or computer. Just type, swipe or tap translations in the languages you speak. You have the option to either translate phrases directly, or validate existing translations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X