ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ದೇಶದ ಪ್ರಥಮ ಉರ್ದು ಸಂಚಾರಿ ಗ್ರಂಥಾಲಯ

By Vanitha
|
Google Oneindia Kannada News

ಬೆಂಗಳೂರು, ಸೆಪ್ಟಂಬರ್, 28 : ರಾಜ್ಯದ ಉರ್ದು ಅಕಾಡೆಮಿಯು ದೇಶದಲ್ಲೇ ಮೊದಲ ಬಾರಿಗೆ ಸಂಚಾರಿ ಗ್ರಂಥಾಲಯ ಆರಂಭಿಸಿದೆ. ಇದರ ಮೂಲಕ ಪುಸ್ತಕಗಳನ್ನು ಮುಕ್ತವಾಗಿ ಮಾರಾಟ ಮಾಡಲು ಮುಂದಾಗಿದೆ.

ಉರ್ದು ಸಂಚಾರಿ ಗ್ರಂಥಾಲಯದ ಉದ್ಘಾಟನೆಯನ್ನು ಅಲ್ಪಸಂಖ್ಯಾತ ಸಚಿವ ಡಾ. ಖಮರುಲ್ಲಾ ಇಸ್ಲಾಂ ಅವರು ವಿಧಾನಸೌಧ ಆವರಣದಲ್ಲಿ ನೆರವೇರಿಸಿದ್ದು, ಈ ಗ್ರಂಥಾಲಯವು ಬೀದರ್ ನಿಂದ ಚಾಮರಾಜ ನಗರದವರೆಗೆ ರಾಜ್ಯಾದ್ಯಂತ ಸಂಚಾರ ಮಾಡಲಿದೆ ಎಂದು ತಿಳಿಸಿದರು.[ಅಂದು ಉಪನ್ಯಾಸಕಿ, ಇಂದು ಸಾಹಿತ್ಯ ಪ್ರಸಾರಕಿ]

India's First Urdu mobile library eshtablished in Bengaluru

ಈ ಸಂಚಾರಿ ಗ್ರಂಥಾಲಯವು ಉರ್ದು ಭಾಷಿಗರು ಹೆಚ್ಚಾಗಿರುವ ಕಡೆಯಲ್ಲಿ ಸಂಚರಿಸಲಿದೆ. ಇದರಲ್ಲಿ ಓದುಗರಿಗೆ ಪುಸ್ತಕ ಒದಗಿಸಲಾಗುತ್ತದೆ ಹಾಗೂ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದು ದೇಶದಲ್ಲೇ ಮೊದಲ ಉರ್ದು ಭಾಷೆಯ ಸಂಚಾರಿ ಗ್ರಂಥಾಲಯಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಎಂದು ಸಚಿವರು ತಿಳಿಸಿದರು.

ಈ ವ್ಯವಸ್ಥೆಯಿಂದ ಉರ್ದು ಮತ್ತು ಕನ್ನಡ ಸಾಹಿತ್ಯ ಪರಸ್ಪರ ಅನುವಾದಗೊಳ್ಳುವ ಸಾಧ್ಯತೆಗಳು ಇರುತ್ತದೆ. ಆಗ ಎರಡು ಸಮುದಾಯಕ್ಕೂ ವಿಭಿನ್ನ ಸಾಹಿತ್ಯದ ಅಭಿರುಚಿ ದೊರೆತಂತಾಗುತ್ತದೆ. ಎಂದು ಸಚಿವ ಖಮರುಲ್ಲಾ ಹೇಳಿದರು.

ಈ ಸಮಾರಂಭದಲ್ಲಿ ಉಪಸ್ಥಿತರಿದ್ದ ಅಕಾಡೆಮಿ ಅಧ್ಯಕ್ಷ ಡಾ. ಫೌಜಿಯಾ ಚೌಧರಿ ಮಾತನಾಡಿ, ೧೦.೦೦೦ ಪುಸ್ತಕಗಳು ಮಾರಾಟಕ್ಕೆ ಒದಗಿಸಲಾಗಿದೆ. ಪುಸ್ತಕ ಮಾರಾಟದಿಂದ ಬರುವ ಹಣವನ್ನು ಗ್ರಂಥಾಲಯ ವಾಹನ ಚಾಲಕರು, ಸಿಬ್ಬಂದಿ ವೇತನ ಭತ್ಯೆಗೆ ಬಳಸಲಾಗುತ್ತದೆ ಎಂದರು.

English summary
India's First Urdu mobile library eshtablished in Bengaluru on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X