ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಬೈಯಪ್ಪನಹಳ್ಳಿ ಎಸಿ ಕೇಂದ್ರಿತ ರೈಲ್ವೆ ಟರ್ಮಿನಲ್ ಫೆಬ್ರವರಿಗೆ ಸಿದ್ಧ

|
Google Oneindia Kannada News

ಬೆಂಗಳೂರು, ಜನವರಿ 27: ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇಶದ ಮೊದಲ ಎಸಿ ಕೇಂದ್ರಿತ ರೈಲ್ವೆ ಟರ್ಮಿನಲ್ ಕಾರ್ಯ ಫೆಬ್ರವರಿಯಷ್ಟೊತ್ತಿಗೆ ಪೂರ್ಣಗೊಳ್ಳಲಿದೆ.

ನೈಋತ್ಯ ರೈಲ್ವೆ ಅಧಿಕಾರಿಗಳು ನೀಡಿರುವ ಪ್ರಕಾರ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಫೆಬ್ರವರಿ ಅಂತ್ಯದೊಳಗೆ ರೆಡಿಯಾಗಲಿದೆ. ಈ ರೈಲ್ವೆ ನಿಲ್ದಾಣಕ್ಕೆ ಬಂದರೆ ನಿಮಗೆ ವಿಮಾನ ನಿಲ್ದಾಣಕ್ಕೆ ಬಂದಿರುವ ಅನುಭವ ಸಿಗಲಿದೆ. ಎಸಿ ಟರ್ಮಿನಲ್, ವಿಶ್ರಾಂತಿ ಕೊಠಡಿಗಳಿರಲಿವೆ.

ಬಜೆಟ್ 2021; ಹೊಸ ಬುಲೆಟ್ ರೈಲು ಮಾರ್ಗಗಳ ಘೋಷಣೆ?ಬಜೆಟ್ 2021; ಹೊಸ ಬುಲೆಟ್ ರೈಲು ಮಾರ್ಗಗಳ ಘೋಷಣೆ?

ಮಧ್ಯಪ್ರದೇಶದ ರೈಲ್ವೆ ನಿಲ್ದಾಣ ಮಾದರಿ

ಮಧ್ಯಪ್ರದೇಶದ ರೈಲ್ವೆ ನಿಲ್ದಾಣ ಮಾದರಿ

ಇಂಡಿಯನ್ ರೈಲ್ವೆ ಸ್ಟೇಷನ್ ಡೆವಲಾಪ್‌ಮೆಂಟ್ ಕಾರ್ಪೊರೇಷನ್ ಮಧ್ಯ ಪ್ರದೇಶದ ಹಬೀಬ್‌ಗಂಜ್ ಹಾಗೂ ಗುಜರಾತ್‌ನ ಗಾಂಧಿನಗರದಲ್ಲಿರುವಂತೆ ಬೆಂಗಳೂರಿನ ರೈಲ್ವೆ ನಿಲ್ದಾಣವನ್ನು ಕೂಡ ಸಿದ್ಧಪಡಿಸುತ್ತಿದೆ. ಹಾಗೆಯೇ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅಭಿವೃದ್ಧಿಪಡಿಸಲಾಗುತ್ತಿದೆ.

ಎಷ್ಟು ರೈಲುಗಳು ಸಂಚರಿಸುತ್ತವೆ

ಎಷ್ಟು ರೈಲುಗಳು ಸಂಚರಿಸುತ್ತವೆ

ಕೆಎಸ್‌ಆರ್ ಬೆಂಗಳೂರು ಹಾಗೂ ಯಶವಂತಪುರ ಟರ್ಮಿನಲ್ ನಡುವೆ 164 ಎಕ್ಸ್‌ಪ್ರೆಸ್‌ ರೈಲುಗಳು ಹಾಗೂ 109 ಜೋಡಿ ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತಿವೆ. 2015-16ರಲ್ಲಿ ಯೋಜನೆಗೆ ಅನುಮತಿ ನೀಡಲಾಗಿತ್ತು, 2018ರಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು, ಆದರೆ ಸಾಕಷ್ಟು ಡೆಡ್‌ಲೈನ್‌ಗಳನ್ನು ಮಿಸ್ ಮಾಡಲಾಗಿದೆ.

ಪಾರ್ಕಿಂಗ್ ವ್ಯವಸ್ಥೆ ಹೇಗಿದೆ?

ಪಾರ್ಕಿಂಗ್ ವ್ಯವಸ್ಥೆ ಹೇಗಿದೆ?

ರೈಲ್ವೆ ನಿಲ್ದಾಣದ ಪಾರ್ಕಿಂಗ್‌ನಲ್ಲಿ 250 ಕಾರುಗಳನ್ನು ನಿಲ್ಲಿಸಲು ಅವಕಾಶವಿದೆ. 900 ಸ್ವಿಚಕ್ರ ವಾಹನಗಳು, 50 ಆಟೋ ರಿಕ್ಷಾಗಳು, ಐದು ಬಿಎಂಟಿಸಿ ಬಸ್ ಹಾಗೂ 20 ಕ್ಯಾಬ್‌ಗಳನ್ನು ನಿಲ್ಲಿಸಬಹುದಾಗಿದೆ. ಎಸ್ಕಲೇಟರ್ಸ್ ಹಾಗೂ ಲಿಫ್ಟ್‌ಗಳು ಏಳು ಪ್ಲಾಟ್‌ಫಾರಂಗಳನ್ನು ಸಂಪರ್ಕಿಲಿದೆ. ರಾಜಧಾನಿಯ ಹೃದಯ ಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣದಲ್ಲಿನ ರೈಲು ಸಂಚಾರ ದಟ್ಟಣೆ ತಗ್ಗಿಸುವನಿಟ್ಟಿನಲ್ಲಿ ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಮೂರನೇ ಕೋಚಿಂಗ್ ಟರ್ಮಿನಲ್ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

Recommended Video

Sangolli Rayanna 190ನೇ ಪುಣ್ಯ ಸ್ಮರಣೆ ಅಂಗವಾಗಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ CM | Oneindia Kannada
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೋಲುತ್ತದೆ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೋಲುತ್ತದೆ

ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸಿರುವ ಈ ಟರ್ಮಿನಲ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿ ವಿನ್ಯಾಸ ಹೊಂದಿದೆ. ಪ್ಲಾಟ್‌ ಫಾರಂಗಳ ಶೆಲ್ಟರ್, ಒಳಾಂಗಣ ವಿನ್ಯಾಸ ಆಕರ್ಷಕವಾಗಿದೆ. ಕೆಫೆಟೇರಿಯಾ, ಫುಡ್ ಕೋರ್ಟ್, ಟಿಕೆಟ್ ಕೌಂಟರ್‌ಗಳು, ವಾಹನ ನಿಲುಗಡೆ, ಪ್ಲಾಟ್‌ಫಾರಂಗಳ ನಡುವೆ ಸಂಪರ್ಕ ಕಲ್ಪಿಸುವ ಸಬ್‌ವೇಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಟರ್ಮಿನಲ್‌ನ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಸಣ್ಣ ಪ್ರಮಾಣದ ಕೆಲಸಗಳು ನಡೆಯುತ್ತಿವೆ. ಅತ್ಯಾಧುನಿಕ ಟರ್ಮಿನಲ್‌ನಲ್ಲಿ ನೀರಿನ ಮಿತಬಳೆ ಹಾಗೂ ಮರುಬಳಕೆ ಮಾಡಲು ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಒಮ್ಮೆಗೆ ನಾಲ್ಕು ಲಕ್ಷ ಲೀಟರ್ ತ್ಯಾಜ್ಯ ನೀರು ಶುದ್ಧೀಕರಣ ಮರುಬಳಕೆ ಮಾಡಬಹುದಾಗಿದೆ.

English summary
The Country's first centralised AC railway terminal Is All set come up in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X