ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂದೂ ಮಹಾಸಾಗರ ವಲಯದ ರಾಷ್ಟ್ರಗಳಿಗೆ ಲಘು ಯುದ್ಧ ವಿಮಾನಗಳನ್ನು ಪೂರೈಸಲು ಭಾರತ ಸಿದ್ಧ:ರಾಜನಾಥ್ ಸಿಂಗ್

|
Google Oneindia Kannada News

ಬೆಂಗಳೂರು,ಫೆಬ್ರವರಿ 04: ಹಿಂದೂ ಮಹಾಸಾಗರ ವಲಯದ ರಾಷ್ಟ್ರಗಳಿಗೆ ಲಘು ಯುದ್ಧ ವಿಮಾನಗಳನ್ನು ಪೂರೈಸಲು ಭಾರತ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಹಿಂದೂ ಮಹಾಸಾಗರ ವಲಯದ ವಿದೇಶಿ ರಾಷ್ಟ್ರಗಳಿಗೆ ಕ್ಷಿಪಣಿಗಳು, ಹೆಲಿಕಾಪ್ಟರ್ ಗಳು, ಟ್ಯಾಂಕ್ ಗಳು, ಗನ್ ಗಳು ಸೇರಿದಂತೆ ವಿವಿಧ ಪ್ರಕಾರದ ಕ್ಷಿಪಣಿ ವ್ಯವಸ್ಥೆಗಳು, ಲಘು ಯುದ್ಧ ವಿಮಾನಗಳನ್ನು ಪೂರೈಸಲು ಭಾರತ ಸಿದ್ಧವಿದೆ ಎಂದು ಹೇಳಿದ್ದಾರೆ..

ಏರೋ ಇಂಡಿಯಾ: ಲಘು ಯುದ್ಧ ವಿಮಾನ ತೇಜಸ್ ಜತೆ ಅಮೆರಿಕ ಹೆವಿ ಬಾಂಬರ್ B-1B ಹಾರಾಟಏರೋ ಇಂಡಿಯಾ: ಲಘು ಯುದ್ಧ ವಿಮಾನ ತೇಜಸ್ ಜತೆ ಅಮೆರಿಕ ಹೆವಿ ಬಾಂಬರ್ B-1B ಹಾರಾಟ

ಹಿಂದೂ ಮಹಾಸಾಗರ ವಲಯದ ರಾಷ್ಟ್ರಗಳೊಂದಿಗೆ ವ್ಯಾಪಾರ, ಪ್ರವಾಸೋದ್ಯಮ ಪ್ರೋತ್ಸಾಹಕ್ಕಾಗಿ ಭಾರತದಿಂದ ಏಷ್ಯಾ ಆಫ್ರಿಕಾ ಬೆಳವಣಿಗೆ ಕಾರಿಡಾರ್, ಸಾಗರ ಮಾಲಾ ಮತ್ತು ಮೌಸಾಮ್ ನಂತಹ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ನೆರೆಹೊರೆಯ ರಾಷ್ಟ್ರಗಳ ಕಡಲಿನಲ್ಲಿ ಮಾನವೀಯ ನೆರವು

ನೆರೆಹೊರೆಯ ರಾಷ್ಟ್ರಗಳ ಕಡಲಿನಲ್ಲಿ ಮಾನವೀಯ ನೆರವು

ನೆರೆಹೊರೆಯ ರಾಷ್ಟ್ರಗಳ ಕಡಲಿನಲ್ಲಿ ಮಾನವೀಯ ನೆರವು, ರಕ್ಷಣೆ ಮತ್ತು ಹುಡುಕಾಟ ಕಾರ್ಯಾಚರಣೆಯಲ್ಲಿ ಭಾರತ ಮುಂಚೂಣಿಯಲ್ಲಿ ನಿಲ್ಲುತ್ತದೆ. ಈ ವಲಯದಲ್ಲಿ ನೈಸರ್ಗಿಕ ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲಿ ಎಲ್ಲರಿಗಿಂತ ಮೊದಲು ಪ್ರತಿಕ್ರಿಯಿಸುದಕ್ಕೆ ನಮಗೆ ಹೆಮ್ಮೆಯಾಗುತ್ತದೆ ಎಂದರು.

ಕೊರೊನಾ ಸಂದರ್ಭದಲ್ಲಿ ಸಹಾಯ

ಕೊರೊನಾ ಸಂದರ್ಭದಲ್ಲಿ ಸಹಾಯ

ಕೊರೊನಾ ಸಂದರ್ಭದಲ್ಲಿ ನೆರೆಯ ರಾಷ್ಟ್ರಗಳಿಗೆ ಭಾರತದ ನೆರವಿನ ಬಗ್ಗೆ ಮಾತನಾಡಿದ ಸಚಿವರು, ಮಾರಿಷಿಯಷ್, ಮಾಲ್ಡೀವ್ಸ್, ಮಡಗಸ್ಕರ್ , ಸಿಯಾಚೆಲ್, ಕೊಮಾರಾಸ್ ರಾಷ್ಟ್ರಗಳಿಗೆ ಹೆಚ್ ಸಿಕ್ಯೂ, ರೆಮ್ಡಿಸಿವೀರ್, ಪ್ಯಾರಾಸಿಟಮೊಲ್ ನಂತಹ ಔಷಧಗಳು, ವೈದ್ಯಕೀಯ ತಂಡ ಹಾಗೂ ಮತ್ತಿತರ ವೈದ್ಯಕೀಯ ಸಲಕರಣೆಗಳನ್ನು ಪೂರೈಸಲಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

ತೇಜಸ್ ವಿಮಾನದ ಕೋ ಪೈಲಟ್ ತೇಜಸ್ವಿ ಸೂರ್ಯ

ತೇಜಸ್ ವಿಮಾನದ ಕೋ ಪೈಲಟ್ ತೇಜಸ್ವಿ ಸೂರ್ಯ

ತೇಜಸ್ ಯುದ್ಧ ವಿಮಾನದಲ್ಲಿ ಸಂಸದ ತೇಜಸ್ವಿ ಸೂರ್ಯ ಇಂದು ಹಾರಾಟ ನಡೆಸಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದರು. ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾದಲ್ಲಿ ಇಂದು 12.20ರಿಂದ 1.50ರವರೆಗೆಸುಮಾರು 30 ನಿಮಿಷಗಳ ಕಾಲ ತೇಜಸ್ ಕೋ ಪೈಲಟ್ ಆಗಿ ತೇಜಸ್ವಿ ಸೂರ್ಯ ವಿಹಾರ ನಡೆಸಿದರು.

ಅಮೆರಿಕ ಹೆವಿ ಬಾಂಬರ್ ಹಾರಾಟ

ಅಮೆರಿಕ ಹೆವಿ ಬಾಂಬರ್ ಹಾರಾಟ

ಏರೋ ಇಂಡಿಯಾದಲ್ಲಿ ಲಘು ಯುದ್ಧ ವಿಮಾನ ತೇಜಸ್ ಜತೆ ಅಮೆರಿಕದ ಹೆವಿ ಬಾಂಬರ್ B-1B ಹಾರಾಟ ನಡೆಸಿದೆ.

ಇಂಡೋ ಫೆಸಿಪಿಕ್ ವಲಯದಲ್ಲಿ ಭಾರತ ಮತ್ತು ಅಮೆರಿಕದ ರಕ್ಷಣಾ ಸಹಭಾಗಿತ್ವಕ್ಕೆ ಅಮೆರಿಕ ಒತ್ತು ನೀಡುವುದರ ಪ್ರತೀಕವಾಗಿ ಅಮೆರಿಕದ ವಿವಿಧ ವಿಭಾಗಗಳ ಉನ್ನತ ಅಧಿಕಾರಿಗಳೊಂದಿಗೆ 100 ಜನರ ನಿಯೋಗವು ಏರೋ ಇಂಡಿಯಾ 2021ರಲ್ಲಿ ಭಾಗವಹಿಸಿದೆ. B-1 28ನೇ ಬಾಂಬ್ ವಿಂಗ್ , ಎಲ್ಸ್ ವರ್ತ್ ಫೋರ್ಸ್ ಬೇಸ್,ಸೌತ್ ಡಕೋಟದ ವಿಮಾನವಾಗಿದ್ದು, ಈಗಿರುವ B-1B ಲ್ಯಾನ್ಸರ್ ಸೂಪರ್ ಸಾನಿಕ್ ಹೆವಿ ಬಾಂಬರ್ ಆಗಿದೆ

Recommended Video

ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಇಂದು ತೆರೆ | Oneindia Kannada

English summary
India is ready to supply various types of missile system, LCA and other weapons systems including missiles, helicopters, tanks and artillery guns to friendly foreign countries in the Indian Ocean Region Defence minister Rajnath Singh said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X