ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೋಗ ನಿವಾರಣೆಗೂ ಉಪಗ್ರಹ ನೆರವು ಪಡೆಯಬಹುದು: ಡಾ ರಾಧಾಕೃಷ್ಣನ್

|
Google Oneindia Kannada News

ಬೆಂಗಳೂರು ಅಗಸ್ಟ್ 12: ಭಾರತೀಯ ಕೀಟ ನಿಯಂತ್ರಕರ ಸಂಘ (ಐಪಿಸಿಎ) ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ 'ಇಂಡಿಯಾ ಪೆಸ್ಟ್ 2019' ಎಂಬ 52ನೇ ವಾರ್ಷಿಕ ಸಭೆಯನ್ನು ಇಸ್ರೋ ಮಾಜಿ ನಿರ್ದೇಶಕ ಡಾ ರಾಧಾಕೃಷ್ಣನ್ ಅವರು ಉದ್ಘಾಟಿಸಿದರು.

ಮುಖ್ಯ ಅತಿಥಿ ಆಗಿ ಭಾಗವಹಿಸಿದ್ದ ಅವರು ಮಾತನಾಡಿ, ಸಂಕ್ರಾಮಿಕ ವಾಗಿ ಹರಡುವ ಕಾಯಿಲೆಗಳನ್ನು ಉಪಗ್ರಹ ಆಧಾರಿತ ವಾಗಿ ಅವುಗಳ ದಿಕ್ಕು ಹಾಗು ಚಲನೆಯ ವೇಗವನ್ನು ಕಂಡು ಹಿಡಿಯಬಹುದಗಿದೆ. ಇದರಿಂದಾಗಿ ಕಾಯಿಲೆಯನ್ನು ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಸುಲಭವಾಗಿ ಅಳವಡಿಸಬಹುದಾಗಿದೆ ಎಂದರು.

India Pest 2019: Dr. Radhakrishnan Satellites ca help cure disease

ಈ ಸಂದರ್ಭದಲ್ಲಿ 2019-20ನೇ ಸಾಲಿನ ಆಡಳಿತ ತಂಡವನ್ನು ಆಯ್ಕೆ ಮಾಡಲಾಯಿತು. ಮೂರು ದಿನಗಳ ಸಮಾವೇಶದಲ್ಲಿ ಸಂಘದ ಸದಸ್ಯರಿಗೆ ಹಲವು ತಾಂತ್ರಿಕ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿತ್ತು.

ಸಮ್ಮೇಳನಕ್ಕೆ ದೇಶದ ಮೂಲೆಮೂಲೆಯಿಂದ ಆಗಮಿಸಿದ ಸದಸ್ಯರಿಗೆ ಮನರಂಜನಾ ಕಾರ್ಯಕ್ರಮಗಳು ನಡೆದವು. ಜೊತೆಗೆ, ಹಲವು ಮಾಹಿತಿಪೂರ್ಣ ಪ್ರದರ್ಶನ ಮಳಿಗೆಗಳಿಗೂ ಅವಕಾಶ ಕಲ್ಪಿಸಲಾಗಿತ್ತು.

ಡೆಂಘೀ ಮಹಾಮಾರಿಯ ಆಕ್ರಮಣ, ನಿದ್ರೆಯಿಂದೇಳದ ಬಿಬಿಎಂಪಿ ಡೆಂಘೀ ಮಹಾಮಾರಿಯ ಆಕ್ರಮಣ, ನಿದ್ರೆಯಿಂದೇಳದ ಬಿಬಿಎಂಪಿ

ಸಮಾವೇಶದ ಮುಖ್ಯ ಅತಿಥಿಯಾಗಿ ಇಸ್ರೋದ ಮಾಜಿ ಅಧ್ಯಕ್ಷ ಡಾ.ರಾಧಾಕೃಷ್ಣನ್ ಪಾಲ್ಗೊಂಡಿದ್ದರು. ದಕ್ಷಿಣ ವಲಯದ ಆಡಳಿತ ಸಮಿತಿಯ ಸದಸ್ಯ ಗಿರೀಶ್ ನಾಯರ್, ಐಪಿಸಿಎ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶಶಿಧರನ್, ಐಪಿಸಿಎ ಅಧ್ಯಕ್ಷ ಜಾಲ್ದಿ ತ್ರಿವೇದಿ, ಉಪಾಧ್ಯಕ್ಷ ಉದಯ್ ಮೆಮನ್, ಐಪಿಸಿಎ ಹೆಚ್ಚುವರಿ ಕಾರ್ಯದರ್ಶಿ ವಿಜಯ್ ಶುಕ್ಲ, ದಕ್ಷಿಣ ವಲಯದ ವಲಯ ಕಾರ್ಯದರ್ಶಿ ಅಶೋಕ್ ಭಟ್ ಉಪಸ್ಥಿತರಿದ್ದರು.

English summary
India Pest 2019: Former chairman of ISRO Dr. Radhakrishnan said help of satellite mapping technology we can find out vector borne disease areas, so we can administer the treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X