• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇತಿಹಾಸ ನಿರ್ಮಾಣಕ್ಕೆ ಭಾರತಕ್ಕೆ ಬೇಕಿರುವುದು 7 ವಿಕೆಟ್

|

ಕೊಲಂಬೋ, ಆಗಸ್ಟ್. 31: ಭಾರತದ 22 ವರ್ಷಗಳ ಕನಸು ನನಸಾಗುವ ಸಂದರ್ಭ ಹತ್ತಿರ ಬರುತ್ತಿದೆ. ಮಳೆ ಅಡ್ಡಿ ಮಾಡುತ್ತಿದ್ದರೂ ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟೆಸ್ಟ ಪಂದ್ಯ ರೋಚಕ ಘಟ್ಟ ತಲುಪಿದ್ದು ಭಾರತ ಗೆದ್ದರೆ ಇತಿಹಾಸ ನಿರ್ಮಾಣವಾಗಲಿದೆ.

ಶ್ರೀಲಂಕಾಕ್ಕೆ ಗೆಲ್ಲಲು ಭಾರತ 386 ರನ್‌ ಗುರಿ ನೀಡಿದ್ದು, ಲಂಕಾ 67 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಲಂಕಾ, ಉಪುಲ್‌ ತರಂಗ 0, ದಿಮೂತ್‌ ಕರುಣರತ್ನೆ 0, ದಿನೇಶ್‌ ಚಂಡೀಮಾಲ್‌ 18 ವಿಕೆಟ್ ಕಳೆದುಕೊಂಡಿದೆ. ಏಳು ವಿಕೆಟ್ ಗಳು ಭಾರತದ ಬುಟ್ಟಿಗೆ ಬಿದ್ದರೆ ಇತಿಹಾಸ ನಿರ್ಮಾಣವಾಗಲಿದೆ.[ಇಶಾಂತ್ ಶರ್ಮಾರನ್ನು ಪ್ರಸಾದ್ ಅಟ್ಟಿಸಿಕೊಂಡು ಹೋಗಿದ್ದೇಕೆ?]

ಏಂಜಲೋ ಮ್ಯಾಥ್ಯೂಸ್‌ 22 ಮತ್ತು ಕೌಶಲ್‌ ಸಿಲ್ವಾ 24 ರನ್‌ ನಾಳೆಗೆ ಆಟ ಕಾಯ್ದುಕೊಂಡಿದ್ದಾರೆ. ಭಾರತದ ಪರ ಇಶಾಂತ್‌ ಶರ್ಮಾ 2 ಮತ್ತು ಉಮೇಶ್‌ ಯಾದವ್‌ 1 ವಿಕೆಟ್‌ ಕಿತ್ತು ಲಂಕಾಕ್ಕೆ ಒತ್ತಡ ಹೇರಿದರು.

ನಾಲ್ಕನೇ ದಿನದಲ್ಲಿ ಸ್ಟುವರ್ಟ್‌ ಬಿನ್ನಿ 49 ರನ್‌, ನಮನ್‌ ಓಝಾ 35, ಅಮಿತ್‌ ಮಿಶ್ರಾ 39 ಮತ್ತು ರವಿಚಂದ್ರನ್‌ ಅಶ್ವಿ‌ನ್‌ 58 ರನ್ ಕೊಡುಗೆ ನೀಡಿದರು. ಇದರ ಪರಿಣಾಮ ಪ್ರಮುಖ ಬ್ಯಾಟ್ಸಮನ್ ಗಳ ವೈಫಲ್ಯದ ನಡುವೆಯೂ ಭಾರತ ಉತ್ತಮ ಮೊತ್ತ ಕಲೆಹಾಕಿ ಲಂಕಾ ಮೇಲೆ ಒತ್ತಡ ಹೇರಲು ಸಾಧ್ಯವಾಯಿತು.

1993 ರಲ್ಲಿ ಎಂ ಅಜರುದ್ದೀನ್ ನೇತೃತ್ವದಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಜಯಿಸಿದ್ದು ಹಿಂದಿನ ದಾಖಲೆ. ಒಂದು ವೇಳೆ ಭಾರತ ವಿಜಯ ದಾಖಲು ಮಾಡಿದರೆ ವಿರಾಟ್ ಕೊಹ್ಲಿ ಹೊಸ ಭಾರತದ ಪರ ಹೊಸ ಶ್ರೇಯ ಪಡೆದುಕೊಳ್ಳಲಿದ್ದಾರೆ. ಪಿಚ್ ಸ್ಪಿನ್ ಗೆ ನೆರವು ನೀಡುತ್ತಿದ್ದು ಅಶ್ವಿನ್ ಮತ್ತು ಮಿಶ್ರಾ ಅವರು ದಾಳಿ ಸಂಘಟಿಸಿದರೆ ಭಾರತಕ್ಕೆ ಜಯ ಬಹಳ ದೂರವಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India were eyeing their first series win on Sri Lankan soil in 22 years by reducing the hosts to a shaky 67/3 after setting a daunting victory target of 386 in the third and final Test here today. Resuming at the precarious overnight score of 21 for 3, India did well to score 274 in their second innings and then leave the islanders miserably placed on an eventful penultimate day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more