• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ ಇಂಡಿಯಾ ಮೆಡ್ ಎಕ್ಸ್‌ಪೋ 2018ಕ್ಕೆಚಾಲನೆ

By Mahesh
|

ಬೆಂಗಳೂರು, ಜುಲೈ 06: ಇಂಡಿಯಾ ಮೆಡ್ ಎಕ್ಸ್‌ಪೋ 10ನೇ ಆವೃತ್ತಿಯ ಔಷಧ ಮತ್ತು ವೈದ್ಯಕೀಯ ವಲಯದ ವಸ್ತು ಪ್ರದರ್ಶನ ಜುಲೈ 5 ರಿಂದ 7ರ ವರೆಗೆ ಮಾನ್ಪೋ ಕನ್ವೆನ್ಷನ್ ಸೆಂಟರ್, ನಾಗವಾರ ರಿಂಗ್ ರೋಡ್, ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಇಂಡಿಯಾ ಮೆಡ್ ಎಕ್ಸ್‌ಪೋನಲ್ಲಿ ವೈದ್ಯಕೀಯ ಸಲಕರಣೆ, ವೈದ್ಯಕೀಯ ವಲಯಕ್ಕೆ ಮೀಸಲಾಗಿರುವ ಉತ್ಪನ್ನಗಳು, ಹೀಗೆ ಶಸ್ತ್ರಚಿಕಿತ್ಸಾ ಸಾಧನಗಲ್ಲಿ ಕ್ರಾಂತಿಕಾರಿ ನೂತನ ಉಪಕರಣಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನವಾಗಿದೆ.

ಇಂಡಿಯಾ ಮೆಡ್ ಎಕ್ಸ್‌ಪೋ 2018ರಲ್ಲಿ ವೈದ್ಯಕೀಯ ತಂತ್ರಜ್ಞಾನಕ್ಕೆ ಸಂಬಂಧಿಸಿದ ಏಕೈಕ ಅತಿದೊಡ್ಡ ಪ್ರದರ್ಶನವಾಗಿದ್ದು ತೈವಾನ್, ಮಲೇಷಿಯಾ, ಕೊರಿಯಾ, ಚೀನಾ, ಹಾಂಗ್‌ಕಾಂಗ್ ಸೇರಿದಂತೆ ಮೊದಲಾದ ದೇಶಗಳಿಂದ ಸುಮಾರು 200 ಕಂಪನಿಗಳಿಂದ ಅನೇಕ ಪರಿಕರಗಳು ಪ್ರದರ್ಶನಗೊಳ್ಳುತ್ತಿವೆ.

ಸರ್ಜಿಕಲ್ ಸಲಕರಣೆ, ಆಸ್ಪತ್ರೆ ಸಲಕರಣೆ, ಆಸ್ಪತ್ರೆ ಪೀಠೋಪಕರಣಗಳು, ಹೋಮ್ ಹೆಲ್ತ್‌ಕೇರ್ ಉತ್ಪನ್ನಗಳು, ವೈದ್ಯಕೀಯ ಗ್ಯಾಸ್ ಪೈಪ್ ಲೈನ್ ಪ್ರಯೋಗಾಲಯ ಸಾಧನ, ಡಯಾಗ್ನಾಸ್ಟಿಕ್ಸ್, ಫಿಸಿಯೋಥೆರಪಿ, ಆರ್ತ್ರೋಪೆಡಿಕ್ ತಂತ್ರಜ್ಞಾನದ ಸರಕುಗಳು, ರೇಡಿಯಾಲಜಿ, ಇಮೇಜಿಂಗ್, ಕಾರ್ಡಿಯಾಲಜಿ ಉಪಕರಣ ಹೀಗೆ 5000ಕ್ಕಿಂತ ಹೆಚ್ಚು ಸರಕುಗಳು ಒಂದೇ ಸೂರಿನಡಿ ಪ್ರದರ್ಶನಗೊಂಡಿವೆ.

ಉದ್ಟಾಟನಾ ಸಮಾರಂಭದಲ್ಲಿ ಮಾತನಾಡಿದ ಜಿ ಇಂಡಿಯಾ ಟೆಕ್ನಾಲಜಿ ನಿರ್ದೇಶಕ ಮತ್ತು ಇಂಡಿಯಾ ಮೆಡ್ ಎಕ್ಸ್ ಪೋ ಮುಖ್ಯ ಸಂಘಟಕ ಅರುಣ್ ಶರ್ಮಾ, 10ನೇ ಆವೃತ್ತಿಯನ್ನು ಬೆಂಗಳೂರಿನಲ್ಲಿ ನಡೆಯುತ್ತಿರುವ ಅತಿದೊಡ್ಡ ಎಕ್ಸ್ ಪೋ, ವೈದ್ಯಕೀಯ ತಂತ್ರಜ್ಞಾನ, ವೈದ್ಯಕೀಯ ಸೇವೆ ಹಾಗೂ ಆರೋಗ್ಯ ಸೇವೆ ಹೊಂದಿದೆ. ತಂತ್ರಜ್ಞಾನಕ್ಕೆ ಸಮೀಪವಾಗಿರುವ ಬೆಂಗಳೂರು ದಕ್ಷಿಣ ಭಾರತದಲ್ಲಿ ಸೂಕ್ತಸ್ಥಳ ಎಂದರು,

ತೈವಾನ್, ಮಲೇಷಿಯಾ, ಕೊರಿಯಾ, ಚೀನಾ, ಹಾಂಗ್‌ಕಾಂಗ್ ಸೇರಿದಂತೆ ಮೊದಲಾದ ದೇಶಗಳ ಕಂಪನಿಗಳು ಭಾಗವಹಿಸಿರುವುದು ಗಮನಿಸಬೇಕಾದ ಸಂಗತಿ ಎಂದರು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
“India Med Expo – 2018”, the Single Largest Exhibition & one of a kind exhibition featuring Medical Equipments & Surgical's, was inaugurated in Bengaluru. The event has showcased more than 5000+ Brands and is witnessing participation from companies from countries like Taiwan, Malaysia, Korea, China, Hong-Kong among others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more