ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ ಲಾಕ್ ಡೌನ್: ಬೆಂಗಳೂರಿನಲ್ಲೇ ಔಷಧಿಗಳಿಗೆ ಅಭಾವ!

|
Google Oneindia Kannada News

ಬೆಂಗಳೂರು, ಏಪ್ರಿಲ್.14: ಕೊರೊನಾ ವೈರಸ್ ವಿರುದ್ಧ ಹೋರಾಡುವುದಕ್ಕಾಗಿ ಭಾರತ ಲಾಕ್ ಡೌನ್ ಮಾಡಲಾಗಿದೆ. ಸರ್ಕಾರ ಆಗತ್ಯ ವಸ್ತುಗಳಲ್ಲಿ ಯಾವುದೇ ಲೋಪದೋಷಗಳಿಲ್ಲದೇ ಸೂಕ್ತ ರೀತಿಯಲ್ಲಿ ಪೂರೈಕೆ ಮಾಡುತ್ತದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಬೆಂಗಳೂರಿನಲ್ಲೇ ನಡೆದಿರುವ ಘಟನೆ ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಾಗಿದೆ.

ಬೆಂಗಳೂರು ಆಸ್ಪತ್ರೆಯ ಮತ್ತು ಹೊರ ರೋಗಿಗಳ ಪಾಡು ನರಕವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ವರ್ಗಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದ್ದಾರೆ. ವ್ಯವಸ್ಥೆಯ ಮೂಲಕ ಸಹಕಾರದಿಂದ ರೋಗಿಗಳಿಗೆ ಬೇಕಾಗುವ ಅಗತ್ಯ ಔಷಧಿಗಳೂ ಸಿಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್. ವೆಂಕಟರಾಮಯ್ಯ ದೂರಿದ್ದಾರೆ.

ಸೀಲ್ ಡೌನ್ ಆದ್ರೂ ಕೇರ್ ಮಾಡಲಿಲ್ಲ ಬಾಪೂಜಿ ನಗರದ ಜನಸೀಲ್ ಡೌನ್ ಆದ್ರೂ ಕೇರ್ ಮಾಡಲಿಲ್ಲ ಬಾಪೂಜಿ ನಗರದ ಜನ

ದೇಶದ ಜನತೆಯ ಆರೋಗ್ಯ ಕಾಪಾಡಲು ನಿಟ್ಟಿನಲ್ಲಿ ಅಗತ್ಯವಿರುವ ಔಷಧೀಯ ಸರಕುಗಳು ರಾಜ್ಯ ರಾಜಧಾನಿಯಲ್ಲಿಯೇ ಲಭ್ಯವಿಲ್ಲ. ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

 India Lockdown: Lack Of Essential Drug Supply In Bangalore

ಪ್ರತಿಷ್ಠಿತ ಆಸ್ಪತ್ರೆಯಲ್ಲಿಯೇ ಸಿಗುತ್ತಿಲ್ಲ ಔಷಧಿ:

ಕಳೆದ ಮಾರ್ಚ್.11ರಂದು ನಾನು ನಮ್ಮ ತಾಯಿ ಶ್ರೀಮತಿ ಯಶೋಧ (68) ಡೀಸ್ನ್ಟೀರಿ ಎಂದು ವಿಠ್ಠಲ ಮಲ್ಯ ಆಸ್ಪತ್ರೆ ರಸ್ತೆಯಲ್ಲಿರುವ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಮಾರ್ಚ್.16ರಂದು ಡಿಸ್ಚಾರ್ಜ್ ಮಾಡಿಸಿ ಮನೆಗೆ ಕರೆದುಕೊಂಡು ಬರಲಾಗಿದ್ದು, ಮನೆಯಲ್ಲೇ ನೀಡುವುದಕ್ಕೆ ಔಷಧಿಗಳನ್ನು ಬರೆದುಕೊಡಲಾಗಿತ್ತು. ಮೊದಲು ಖರೀದಿಸಿದ ಔಷಧಿಗಳೆಲ್ಲ ಮುಗಿದಿದ್ದು ಮತ್ತೆ ತೆಗೆದುಕೊಳ್ಳಲು ಹೋದರೆ ಎಲ್ಲಿಯೂ ಈ ಔಷಧಿಗಳೇ ಸಿಗುತ್ತಿಲ್ಲ.

ಈ ಹಿನ್ನೆಲೆ ಮಲ್ಯ ಆಸ್ಪತ್ರೆಗೆ ಹೋಗಿ ಇದಕ್ಕೆ ಬೇರೆ ಮೆಡಿಸಿನ್ ನೀಡುವಂತೆ ಮನವಿ ಮಾಡಿಕೊಂಡೆವು. ಅದಕ್ಕೆ ವೈದ್ಯರು ಹಿಂದಿನ ಮೆಡಿಸಿನ್ ಬರೆದು ಕೊಟ್ಟರು ಆಸ್ಪತ್ರೆಯ ಮೆಡಿಕಲ್ ಸ್ಟೋರ್ ನಲ್ಲಿಯೇ ಈ ಔಷಧಿಗಳು ಸಿಗುತ್ತಿಲ್ಲ. ಇನ್ನೊಂದೆಡೆ ಬೆಂಗಳೂರಿನ ಪ್ರಮುಖ ಔಷಧಿ ಅಂಗಡಿಗಳಲ್ಲಿಯೂ ಔಷಧವನ್ನು ಲಭ್ಯವಿಲ್ಲ. ಕೆಲವು ಔಷಧಿ ಅಂಗಡಿಯವರು ಇನ್ನು ಮುಂದೆ ಈ ಔಷಧಿಯು ಸಿಗುವುದಿಲ್ಲ ಸರ್ ಎಲ್ಲವನ್ನು ರಫ್ತು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ರಾಜಕೀಯ ದೃಷ್ಟಿಕೋನ ಒಳಗೊಂಡ ಭಾಷಣ, ಗಂಟೆ ಹೊಡಿರಿ ಚಪ್ಪಾಳೆ ತಟ್ಟಿ ಮತ್ತು ದೀಪ ಹಚ್ಚಿ ಇವನ್ನೆಲ್ಲ ಬಿಟ್ಟು ಮೊದಲು ಆಸ್ಪತ್ರೆ ಹೊರ ರೋಗಿಗಳಿಗೆ ಚಿಕಿತ್ಸೆ ಅವಶ್ಯ ಔಷಧ ಇಲ್ಲ ಅಂದರೆ ಇತರೆ ಸಾಮಾನ್ಯ ಜನರು ಆರೋಗ್ಯಕ್ಕೆ ತುತ್ತಾದರೆ ದೇವರೆ ಗತಿ. ಸಮಸ್ಯೆ ಬಗೆಹರಿಸುವ ಮತ್ತು ಸೂಕ್ತ ಪರಿಹಾರ ಕಂಡು ಕೊಂಡು ಔಷಧೀಯ ವ್ಯವಸ್ಥೆಯ ಸಿಗುವಂತಹ ಯೋಜನೆ ರೂಪಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

English summary
India Lockdown: Lack Of Essential Drug Supply In Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X