ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವಕರು ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಬೇಕು

|
Google Oneindia Kannada News

ಬೆಂಗಳೂರು, ಸೆ.3 : ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಭಾರತ ಬೇರೆ ದೇಶಗಳಿಗೆ ಹೋಲಿಸಿದಾಗ ಹಿಂದುಳಿದಿದೆ. ದೇಶದ ಯುವಕರು ಈ ಕ್ಷೇತ್ರಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರೆ ಭಾರತ ಇತರ ದೇಶಗಳಿಗೆ ಪೈಪೋಟಿ ನೀಡಲು ಸಾಧ್ಯವಾಗುತ್ತದೆ ಎಂದು ಭಾರತರತ್ನ ಪ್ರಶಸ್ತಿ ವಿಜೇತ ವಿಜ್ಞಾನಿ ಪ್ರೊ.ಸಿ.ಎನ್‌.ಆರ್.ರಾವ್ ಹೇಳಿದ್ದಾರೆ.

ಬೆಂಗಳೂರಿನ ಕೆಎಲ್‌ಇ ಸಂಸ್ಥೆಯ ಎಸ್.ನಿಜಲಿಂಗಪ್ಪ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದ ಸಿ.ಎನ್.ಆರ್‌.ರಾವ್ ಅವರು, ಇತರ ದೇಶಗಳಿಗೆ ಹೋಲಿಕೆ ಮಾಡಿ ನೋಡಿದರೆ, ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಭಾರತ ಹಿಂದುಳಿದಿದೆ ಎಂದು ಹೇಳಿದರು. [ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ದುಡಿಯುವೆ : ರಾವ್]

ಇಂದಿನ ದಿನಗಳಲ್ಲಿ ವೈಜ್ಞಾನಿಕ ಕ್ಷೇತ್ರಗಳಲ್ಲಿ ಸಾಕಷ್ಟು ಸಂಶೋಧನೆಗಳು ಆಗುತ್ತಿಲ್ಲ. ಇಂದಿನ ಯುವಕರು ಈ ಕ್ಷೇತ್ರಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರೆ ಬೇರೆ ದೇಶಗಳಿಗೆ ನಾವು ಪೈಪೋಟಿ ನೀಡಲು ಸಾಧ್ಯವಾಗುತ್ತದೆ ಎಂದು ಸಿ.ಎನ್.ಆರ್.ರಾವ್ ಅಭಿಪ್ರಾಯಪಟ್ಟರು. [ಸಿ.ಎನ್.ಆರ್.ರಾವ್ ಸಂದರ್ಶನ ಓದಿ]

ಅಮೆರಿಕಾ ವಿಶ್ವದಲ್ಲೇ ಶೇ 64ರಷ್ಟು ಕೊಡುಗೆಯನ್ನು ವಿಜ್ಞಾನ ಕ್ಷೇತ್ರಕ್ಕೆ ನೀಡಿದೆ. ಆದರೆ, ಭಾರತ ಶೇ 2.5ರಷ್ಟು ಮಾತ್ರ ಕೊಡುಗೆ ನೀಡಲು ಸಾಧ್ಯವಾಗಿದೆ. ಕೆಲವು ದಶಕಗಳ ಹಿಂದೆ ಭಾರತ ಮತ್ತು ಚೀನಾ ವಿಜ್ಞಾನ ಕ್ಷೇತ್ರಕ್ಕೆ ಶೇ 2.5ರಷ್ಟು ಕೊಡುಗೆ ನೀಡಿದ್ದವು. ಆದರೆ, ಈಗ ಚೀನಾ ತನ್ನ ಕೊಡುಗೆಯನ್ನು ಶೇ 15ರಷ್ಟು ವಿಸ್ತರಿಸಿಕೊಂಡಿದೆ ಎಂದು ರಾವ್ ಹೇಳಿದರು.

ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಇದು ಸರಿಯಾದ ಸಮಯವಾಗಿದ್ದು, ದೇಶದ ಯುವಕರು ಈ ಕ್ಷೇತ್ರಗಳಲ್ಲಿ ಹೆಚ್ಚಾಗಿ ತೊಡಿಸಿಕೊಳ್ಳಬೇಕು ಎಂದು ರಾವ್ ಕರೆ ನೀಡಿದರು. ದೇಶದಲ್ಲಿ ಹಲವಾರು ವ್ಯಕ್ತಿಗಳು ವೈಯಕ್ತಿವಾಗಿ ಸಾಧನೆ ಮಾಡಿದ್ದಾರೆ. ಆದರೆ, ದೇಶವಾಗಿ ನಾವು ಸಾಧನೆ ಮಾಡುವುದಲ್ಲಿ ಹಿಂದುಳಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

C.N.R.Rao

ನಮ್ಮ ದೇಶದ ಯುವಕರು ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದುವ ಮೂಲಕ ಸ್ಫೂರ್ತಿ ಪಡೆದುಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದುವುದರಿಂದ ಸ್ಫೂರ್ತಿ ಪಡೆಯಬಹುದು ಎಂದು ರಾವ್ ಸಲಹೆ ನೀಡಿದರು.

ಮಾಜಿ ರಾಜ್ಯಪಾಲ ಎಂ.ಪಿ.ರಾಮಜೋಯಿಸ್ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಪ್ರೊ.ಸಿ.ಎನ್.ಆರ್.ರಾವ್ ದಂಪತಿಯನ್ನು ಸನ್ಮಾನಿಸಲಾಯಿತು.

English summary
India is way behind other countries in the field of science and scientific research. It is high time the Indian youth came out of their comfort zones and carried out tasks with determination said, Bharath Ratna Awardees Prof C N R Rao. Rao deliveried a lecture at KLE Society’s S Nijalingappa College as part of its golden jubilee celebrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X