ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲೇ ಮೌಂಟ್ ಎವರೆಸ್ಟ್ ಹತ್ತೋಣ ಬನ್ನಿ

By Rajendra
|
Google Oneindia Kannada News

ಬೆಂಗಳೂರು, ಜೂ.12: ಬೆಂಗಳೂರಿನಲ್ಲೇ ನೀವು ಮೌಂಟ್ ಎವರೆಸ್ಟ್ ನಷ್ಟೇ ಎತ್ತರಕ್ಕೆ ಹತ್ತಿ ಇಳಿಯಬೇಕೆ? ಹಾಗಿದ್ದರೆ ಇಲ್ಲಿದೆ ನೋಡಿ ಒಂದು ಸುವರ್ಣಾವಕಾಶ. 850 ಮೆಟ್ಟಿಲು - 70 ಬಾರಿ ಹತ್ತಿ ಇಳಿಯುವುದು. ಇದರಿಂದ ಸಾಧಿಸಬಹುದು ಮೌಂಟ್ ಎವರೆಸ್ಟ್ ಎತ್ತರ!

ಭಾರತದಲ್ಲಿ ಮೌಂಟ್ ಎವರೆಸ್ಟ್ ಹತ್ತುವುದನ್ನು ಕೇಳಿದ್ದೇವೆ, ದೂರದ ಓಟವನ್ನು ಕೇಳಿದ್ದೇವೆ, ಹತ್ತು ಹಲವಾರು ವಾಕಥಾನ್ ಗಳನ್ನೂ ಕೇಳಿದ್ದೇವೆ. ಇದರಲ್ಲಿ ಭಾಗವಹಿಸಿದ್ದೂ ಇದೆ. ಅದೇರೀತಿ ಎತ್ತರದ ಕಟ್ಟಡವನ್ನು ಹತ್ತಬಹುದು. ಆದರೆ, ಎತ್ತರದ ಕಟ್ಟಡದ ಮೆಟ್ಟಿಲುಗಳನ್ನು ಓಡುತ್ತಾ ಹತ್ತುವುದೆಂದರೆ? ಭಯಪಡಬೇಡಿ, ಗಾಬರಿಯಾಗಬೇಡಿ. ಇಂತಹದ್ದೂ ಒಂದು ಸ್ಪರ್ಧೆ ಇದೆ.

Skyscraper Dash at WTC
ಈ ಸ್ಪರ್ಧೆಗೆ 'ಸ್ಕೈಸ್ಕ್ರಾಪರ್ ಡ್ಯಾಶ್' ಎಂದು ಹೆಸರು. ಇದೇ ಜೂನ್ 15 ರಂದು ದೇಹದ ಸಾಮರ್ಥ್ಯವನ್ನು ಪರೀಕ್ಷಿಸುವಂತಹ ಈ ಸ್ಕೈಸ್ಕ್ರಾಪರ್ ಡ್ಯಾಶ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅಂದು ಬ್ರಿಗೇಡ್ ವಲ್ರ್ಡ್ ಟ್ರೇಡ್ ಸೆಂಟರ್ ನಲ್ಲಿ (ಡಬ್ಲ್ಯೂಟಿಸಿ) ಈ ಸ್ಪರ್ಧೆ ನಡೆಯಲಿದೆ.

ಸ್ಕೈಸ್ಕ್ರಾಪರ್ ಡ್ಯಾಶ್ ನಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಬ್ರಿಗೇಡ್ ಕ್ಯಾಂಪಸ್, ಶೆರಿಟನ್ ಮತ್ತು ಒರಯಾನ್ ಮಾಲ್ ಆವರಣ ಸೇರಿದಂತೆ ಒಟ್ಟು 2.5 ಕಿಲೋಮೀಟರ್ ಓಡಲಿದ್ದಾರೆ. ಈ ಓಟದ ಸ್ಪರ್ಧೆ ಬ್ರಿಗೇಡ್ ನ ವಲ್ರ್ಡ್ ಟ್ರೇಡ್ ಸೆಂಟರ್ ನ 31 ನೇ ಮಹಡಿಯಲ್ಲಿರುವ ಹೈ ಅಲ್ಟ್ರಾ ಲಾಂಜ್ ನಲ್ಲಿ ಕೊನೆಯಾಗಲಿದೆ.

ಈ ಸ್ಪರ್ಧೆಯನ್ನು ಸ್ಪೋರ್ಟ್ 365 ಸಂಸ್ಥೆ ಆಯೋಜನೆ ಮಾಡಿದೆ. ಬ್ರಿಗೇಡ್ ಗ್ರೂಪ್ ಮತ್ತು ವಲ್ರ್ಡ್ ಟ್ರೇಡ್ ಸೆಂಟರ್ ಗಳಲ್ಲದೇ ಐಎನ್ ಟಿಯುಐಟಿ-ಕ್ವಿಕ್ ಬುಕ್ಸ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ ಮತ್ತು ಹೈ ಅಲ್ಟ್ರಾ ಲಾಂಜ್ ಈ ಕಾರ್ಯಕ್ರಮದ ಸಹಯೋಗ ಪಡೆದಿವೆ. ಡ್ರೀಮ್ ಎ ಡ್ರೀಮ್ ಫೌಂಡೇಶನ್ ಇದರ ಚಾರಿಟಿ ಪಾರ್ಟ್ ನರ್ ಆಗಿದೆ.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಬ್ರಿಗೇಡ್ ಗ್ರೂಪ್, ಇದುವರೆಗೆ ಹಲವಾರು ವಿಚಾರದಲ್ಲಿ ಮೊದಲಿಗ ಎನಿಸಿಕೊಂಡಿದೆ. ಇದೀಗ ಸ್ಕೈಸ್ಕ್ರಾಪರ್ ಡ್ಯಾಶ್ ಆಯೋಜನೆ ಮಾಡುವ ಮೂಲಕ ದೇಶದಲ್ಲಿ ಇಂತಹ ಸ್ಪರ್ಧೆಗೆ ಆತಿಥ್ಯ ವಹಿಸಿದ ದೇಶದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಸ್ಪರ್ಧಿಗಳಿಗೆ ಏನೆಲ್ಲಾ ಇರಲಿದೆ? : ಸ್ಪರ್ಧೆಯನ್ನು ಆಯೋಜಿಸಿರುವ ಸ್ಪೋರ್ಟ್365ನ ಸಂಸ್ಥಾಪಕ ಅಜಯ್ ಗುಪ್ತಾ ಹೇಳುವಂತೆ, ಬೆಂಗಳೂರು ನಗರದ ಓಟಗಾರ ಸಮುದಾಯಕ್ಕೆ ಇದೊಂದು ಸವಾಲಿನ ಸ್ಪರ್ಧೆಯಾಗಿದೆ. ಬಹುತೇಕ ಸ್ಪರ್ಧಿಗಳು ಸ್ಪರ್ಧೆಯನ್ನು ಪೂರ್ಣಗೊಳಿಸುತ್ತಾರೆ. ಆದರೆ, ಇದೊಂದು ಸವಾಲಿನಿಂದ ಕೂಡಿರುತ್ತದೆ. ನಾವು ಪ್ರತಿಯೊಬ್ಬ ಸ್ಪರ್ಧಿಯ ಸುರಕ್ಷತೆಗೆ ಗಮನ ನೀಡುತ್ತೇವೆ. ಕಟ್ಟಡ ಹತ್ತುವಾಗ ಸ್ಪರ್ಧಿಗಳಿಗೆ ತೊಂದರೆ ಆದರೆ ಅವರಿಗೆ ಚಿಕಿತ್ಸೆ ನೀಡಲೆಂದು ನುರಿತ ಅರೆವೈದ್ಯಕೀಯ ಸಿಬ್ಬಂದಿ, ಔಷಧಿ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಗುರಿಯನ್ನು ಮೊದಲು ತಲುಪುವ ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ಸೇರಿದಂತೆ ಪಾಲ್ಗೊಳ್ಳುವ ಎಲ್ಲಾ ಸ್ಪರ್ಧಿಗಳಿಗೂ ಅವರು ಗುರಿ ತಲುಪಿದ ಸಮಯದ ಪ್ರಮಾಣ ಪತ್ರ ಮತ್ತು ಬಹುಮಾನವನ್ನು ನೀಡಲಾಗುತ್ತದೆ.

ಹೈ ಅಲ್ಟ್ರಾ ಲಾಂಜ್ ನಿರ್ದೇಶಕ (ಆಪರೇಷನ್) ಪ್ರವೇಶ್ ಪಾಂಡೆ ಅವರು ಮಾತನಾಡಿ, ಸ್ಪರ್ಧೆಯ ನಂತರ ಹೈ ಅಲ್ಟ್ರಾ ಲಾಂಜ್ ಸ್ಪರ್ಧಿಗಳಿಗೆ ದಕ್ಷಿಣ ಭಾರತೀಯ ತಿಂಡಿ, ತಾಜಾ ಹಣ್ಣುಗಳನ್ನೊಳಗೊಂಡ ಕರಾವಳಿ ಆಹಾರ, ಜ್ಯೂಸ್ ಸೇರಿದಂತೆ ಪೌಷ್ಠಿಕಾಂಶ ಇರುವ ಆಹಾರ ಪದಾರ್ಥಗಳನ್ನು ಪೂರೈಸಲಿದೆ ಎಂದು ತಿಳಿಸಿದರು.

ಎವರೆಸ್ಟ್ ಸವಾಲು : ನಗರದ ಸ್ಪರ್ಧಿಗಳಿಗೆ ಇದೊಂದು ರೀತಿಯ ಎವರೆಸ್ಟ್ ಸವಾಲು. ಸ್ಪರ್ಧಿಗಳು 850 ಮೆಟ್ಟಿಲುಗಳನ್ನು 70 ಬಾರಿ ಹತ್ತಬೇಕು. ಆಗ ಅವರು ಕ್ರಮಿಸಿದ ದೂರ ಮೌಂಟ್ ಎವರೆಸ್ಟ್ (8848 ಮೀಟರ್)ನಷ್ಟಾಗುತ್ತದೆ. ಈ ಸ್ಪರ್ಧೆಯನ್ನು ಸ್ನೇಹಿತರು ಸೇರಿಕೊಂಡು ಆಸಕ್ತಿಕರವಾಗಿ ಹಂಚಿಕೆ ಮಾಡಿಕೊಳ್ಳಬಹುದು. ಅಂದರೆ, 10 ಮಂದಿ ಸ್ನೇಹಿತರು ಸೇರಿ ಇಂತಿಷ್ಟು ದೂರ ಇಂತಹವರಿಗೆ ಎಂದು ಹಂಚಿಕೊಂಡು ಓಡಬಹುದು.

ಮೆಟ್ಟಿಲು ಓಟ ಏಕೆ? : ಮೆಟ್ಟಿಲು ಓಟ ಎಂಬುದು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಸ್ಪರ್ಧೆಯಾಗಿದೆ. ವಿಶ್ವಕಪ್ ಸ್ಪರ್ಧೆಯನ್ನು ಏರ್ಪಡಿಸುವ ದಿ ವಲ್ರ್ಡ್ ಟವರ್ ರನ್ನಿಂಗ್ ಅಸೋಸಿಯೇಷನ್ ನಿಂದ ಮಾನ್ಯತೆ ಪಡೆದುಕೊಂಡು ಬ್ರಿಗೇಡ್ ವಲ್ರ್ಡ್ ಟ್ರೇಡ್ ಸೆಂಟರ್ ಈ ಸ್ಕೈಸ್ಕ್ರಾಪರ್ ಡ್ಯಾಶ್ ಆಯೋಜನೆ ಮಾಡಿದೆ.

ವಲ್ರ್ಡ್ ಟ್ರೇಡ್ ಸೆಂಟರ್ ಉಪಾಧ್ಯಕ್ಷ ಡಾ. ಬೋಸ್ ನಾಯರ್ ಮಾತನಾಡಿ, ಡಬ್ಲ್ಯೂಟಿಸಿ ಗುರುತ್ವಾಕರ್ಷಣೆಯ ಕೇಂದ್ರಬಿಂದುವೆನಿಸಿದೆ. ಹೀಗಾಗಿ ಈ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ತಿಳಿಸಿದರು.

ಯಶವಂತಪುರದ ಯಶವಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಡಾ.ನಾಗಾ ನಿಶ್ಚಲ್ ಅವರು ಮಾತನಾಡಿ, ಮೆಟ್ಟಿಲು ಹತ್ತುವುದು ಹೃದಯವನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗುತ್ತದೆ. ನೆಲಮಟ್ಟದಲ್ಲಿ ಓಡಿದಾಗ ದೇಹದ ಕೊಬ್ಬನ್ನು ಕರಗಿಸುವುದಕ್ಕಿಂತ ಮೆಟ್ಟಿಲ ಮೇಲೆ ಓಡಿದರೆ 3-4 ಪಟ್ಟು ಹೆಚ್ಚು ಕೊಬ್ಬು ಕರಗುತ್ತದೆ ಎಂದು ಹೇಳಿದರು.

ಲಿಫ್ಟ್ ಗಳನ್ನು ಬಳಸುವ ಬದಲು ಮೆಟ್ಟಿಲನ್ನು ಹತ್ತಿದರೆ ದೇಹಕ್ಕೆ ಸಾಕಷ್ಟು ವ್ಯಾಯಾಮ ಆದಂತಾಗುತ್ತದೆ. ಹೃದಯವನ್ನು ಕ್ರಿಯಾಶೀಲವಾಗಿಡುವುದಲ್ಲದೇ, ರಕ್ತ ಚಲನೆಯನ್ನು ಸುಧಾರಣೆ ಮಾಡುತ್ತದೆ. ದೇಹದ ಸಾಮಥ್ರ್ಯ ಹೆಚ್ಚಿಸುವುದರ ಜತೆಗೆ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ ಎಂದು ಅವರು ತಿಳಿಸಿದರು.ಹೆಚ್ಚಿನ ಮಾಹಿತಿಗಾಗಿ www.skyscraperdash.com (ಒನ್ಇಂಡಿಯಾ ಕನ್ನಡ)

English summary
850 steps – 70 times and one would have scaled the height of Mt Everest! Fitness history will be in the making here in Bangalore city with the Skyscraper Dash on June 15th 2014. On this day, the Brigade World Trade Centre (WTC) will play host to a fitness event unlike anything the city or the country has ever seen!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X