ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ವಿದ್ಯುತ್ ಚಾಲಿತ ಬಸ್ ಓಡಾಟ

By Mahesh
|
Google Oneindia Kannada News

ಬೆಂಗಳೂರು, ಫೆ.27: ದೇಶದಲ್ಲಿಯೇ ಅತ್ಯುತ್ತಮ ನಗರ ಸಾರಿಗೆ ವ್ಯವಸ್ಥೆ ಹೊಂದಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ತೆ ಈಗ ಪ್ರಪ್ರಥಮ ಬಾರಿಗೆ ವಿದ್ಯುತ್ ಚಾಲಿತ ಬಸ್ ಸಂಚಾರಕ್ಕೆ ಚಾಲನೆ ನೀಡಿದೆ. ಕರ್ನಾಟಕದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶಾಂತಿನಗರ ಬಸ್ ಟರ್ಮಿನಲ್ ನಲ್ಲಿ ದೇಶದ ಪ್ರಥಮ ಎಲೆಕ್ಟ್ರಿಕ್ ಸಾರ್ವಜನಿಕ ಸಾರಿಗೆ ಬಸ್ ಅನ್ನು ಸಂಚಾರ ಮುಕ್ತಗೊಳಿಸಿದರು.

ಬಸ್ಸಿಗೆ ಬೇಕಾದ ಹೆಚ್ಚುವರಿ ವಿದ್ಯುತನ್ನು ಕೊಡಲು BESCOM ಒಪ್ಪಿದ್ದು ತಾತ್ಕಾಲಿಕ ನೊಂದಣಿಗಾಗಿ ಸಾರಿಗೆ ಇಲಾಖೆಯ ಒಪ್ಪಿಗೆ ದೊರೆದು ಫೆ.27ರಂದು ಬಸ್ ತನ್ನ ಸಂಚಾರ ಆರಂಭಿಸಿದೆ.

ಸಿಟಿ ಬಸ್ಸು​ಗಳಿಗೆ ಡೀಸೆಲ್​​ ಹಾಕಿ ನಷ್ಟ ಅನುಭವಿಸುತ್ತಿರುವ ಬಿಎಂಟಿಸಿ ನಂತರ ಡೀಸೆಲ್ ಬಿಟ್ಟು ಎಥೆನಾಲ್ ಮಿಶ್ರಿತ ಇಂಧನ ಬಳಕೆ ಆರಂಭಿಸಿ ಪರಿಸರ ವಾಹಿನಿಗಳನ್ನು ಹೆಚ್ಚು ಮಾಡಿತ್ತು. ಈಗ ಎಲೆಕ್ಟ್ರಿಕ್ ಬಸ್ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು.

India's first electric bus launched in Bangalore

ಎಲ್ಲಿಗೆ ಮೊದಲ ಪಯಣ?: ದೇಶದ ಪ್ರಥಮ ಎಲೆಕ್ಟ್ರಿಕ್ ಬಸ್ ಮೆಜೆಸ್ಟಿಕ್'ನಿಂದ ಕಾಡುಗೋಡಿವರೆಗಿನ ಮಾರ್ಗದಲ್ಲಿ ಈ ಬಸ್ಸು ಮೂರು ತಿಂಗಳ ಕಾಲ ಓಡಲಿದೆ. ಯುಟೋಪಿಯಾ ಆಟೋಮೇಶನ್​ ಕಂಪೆನಿ ನಿರ್ಮಿಸಿರುವ ಸುಮಾರು 2 ಕೋಟಿ ರು ವೆಚ್ಚದ ಈ ಬಸ್ ಗೆ ಸಾರ್ವಜನಿಕರು ನೀಡುವ ಪ್ರತಿಕ್ರಿಯೆ ನೋಡಿಕೊಂಡು ಹೆಚ್ಚಿನ ಬಸ್ ಗಳನ್ನು ಓಡಿಸಲು ಬಿಎಂಟಿಸಿ ನಿರ್ಧರಿಸಿದೆ.

ರೂಟ್ ನಂಬರ್ 335E ಇರುವ ಈ ಎಲೆಕ್ಟ್ರಿಕ್ ಬಸ್ ಪ್ರತಿ ದಿನ ಬೆಳಗ್ಗೆ 7ರಿಂದ ಸಂಜೆ 7ರವರೆಗೆ 6 ಟ್ರಿಪ್ ಮಾಡಲಿದೆ. ವೋಲ್ವೋ ಬಸ್ಸುಗಳಿಗಿರುವ ದರವೇ ಈ ಬಸ್ಸಿಗೂ ಇರಲಿದೆ.

ಈ ಎಲೆಕ್ಟ್ರಿಕ್ ಬಸ್ಸಿನ ವಿಶೇಷತೆ ಏನು?
* ವಾಯುಮಾಲಿನ್ಯ ರಹಿತ ಬಸ್ಸು
* ಆರು ಗಂಟೆ ಚಾರ್ಜ್ ಮಾಡಿದರೆ 250 ಕಿ.ಮೀ.ವರೆಗೂ ಸಂಚರಿಸಬಲ್ಲುದು
* ಬಸ್ ದರ 2 ಕೋಟಿ ರುಪಾಯಿ
* ಈ ಬಸ್ಸು ಪ್ರತೀ ಗಂಟೆ ಪ್ರಯಾಣಿಸಿದರೆ ಸುಮಾರು 1.2 ಕಿಲೋವ್ಯಾಟ್ ವಿದ್ಯುತ್ ವ್ಯಯವಾಗುತ್ತದೆ
* ಬಸ್ಸಿನಲ್ಲಿ ಸುರಕ್ಷತೆ ದೃಷ್ಟಿಯಿಂದ ಎರಡು ಸಿಸಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ.

* ಕಡಿಮೆ ನಿರ್ವಹಣೆ ಹಾಗು ಇಂಧನ ಕ್ಷಮತೆ
*. ಸೌರ ಶಕ್ತಿ ಯಿಂದ ವಿದ್ಯುತ್ ಪಡೆಯುವ ಸೌಲಭ್ಯ
* ಕಡಿಮೆ ಶಬ್ದ, ಸುಖ ಪ್ರಯಾಣ
* ವಿಕಲಚೇತನರಿಗೆ ಬಸ್ ಏರಲು ರಾಂಪ್ ವ್ಯವಸ್ತೆ
* ಸಂಪೂರ್ಣ ಹವಾ ನಿಯಂತ್ರಿತ.

* ಬಸ್ ಹಿಂಭಾಗ, ಮುಂಭಾಗ ಹಾಗೂ ಪಕ್ಕದಲ್ಲಿ ಎಲ್ ಇಡಿ ಮಾರ್ಗಸೂಚಿ ಫಲಕ, ವಾಹನ ಒಳಗೆ ಮಾರ್ಗಸೂಚಿ ಫಲಕದಲ್ಲಿ ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ನಿಲ್ದಾಣ ಘೋಷಣಾ ವ್ಯವಸ್ಥೆ
* 2 ಸಿಸಿ ಕೆಮರಾ ಜತೆ ಡಿವಿಆರ್ ತಿರುಗುವ ಕೆಮರಾ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ.
* ಸುಖ ಪ್ರಯಾಣಕ್ಕಾಗಿ ಕೋಮ್ ಆಧಾರಿತ ಪ್ಲಾಸ್ಟಿಕ್ ಮೋಲ್ಡ್ ಆಸನ, ಎರಡು ಛಾವಣಿ, ತುರ್ತು ನಿರ್ಗಮನ ಬಾಗಿಲು, ವಿಂಡ್ ಶೀಲ್ಡ್ ಗಾಜು
* ಪ್ರತಿ ಕಿ.ಮೀ 1.2 ಕಿಲೋ ವ್ಯಾಟ್ ವಿದ್ಯುತ್ ಬಳಕೆ, ಆರ್ಥಿಕವಾಗಿ ಮಿತವ್ಯಯಕಾರಿ
* ಈ ಬಸ್ ಚಕ್ರ 90 ಕೆ.ಡಬ್ಲ್ಯೂ ಸಾಮರ್ಥ್ಯ ಹೊಂದಿದೆ.
* ಮಹಾರಾಷ್ಟ್ರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಯುಟೋಪಿಯಾ ಕಂಪನಿ ಈ ವಿದ್ಯುತ್ ಚಾಲಿತ ಬಸ್ ಗಳು ಚೀನಾದ ಶೆನ್ ಝೆನ್, ಸಿಂಗಪುರ, ಮಲೇಶಿಯಾ ಸೇರಿದಂತೆ ವಿಶ್ವದ ಪ್ರಮುಖ ನಗರಗಳಲ್ಲಿ 5 ಸಾವಿರಕ್ಕೂ ಅಧಿಕ ಬಸ್ ಗಳು ಸಂಚರಿಸುತ್ತಿವೆ ಎಂದು ಸಂಸ್ಥೆ ಮುಖ್ಯಸ್ಥ ಪ್ರಸನ್ನ ದೇಶ್ ಮುಖ್ ಹೇಳಿದ್ದಾರೆ.

English summary
Ramalinga Reddy, Transport minister of Karnataka has launched BMTC India's First Electric Bus at BMTC Central Office, Shanthi Nagar in Bangalore today(Feb.27).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X