ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪ ಮೇಯರ್ ಹುದ್ದೆ ಮೇಲೆ ಪಕ್ಷೇತರರಿಗೆ ಆಸೆ: ಯಾರಿಗೆ ನಿರಾಸೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13: ಉಪ ಮೇಯರ್ ಆಗಿದ್ದ ರಮೀಳಾ ಉಮಾಶಂಕರ್ ನಿಧನದ ನಂತರ ತೆರವಾದ ಬಿಬಿಎಂಪಿ ಉಪೇಯರ್ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದ್ದು, ಪಕ್ಷೇತರರು ಹೆಚ್ಚು ಒಲವು ತೋರಿಸುತ್ತಿದ್ದಾರೆ.

ಸೆಪ್ಟೆಂಬರ್ 28ರಂದು ನಡೆದಿದ್ದ ಚುನಾವಣೆ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ದೊರೆಯುವ ಭರವಸೆ ಇಟ್ಟುಕೊಂಡು ಮೈತ್ರಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದ ಪಕ್ಷೇತರರು ಇದೀಗ ಉಪ ಮೇಯರ್ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದೀಗ ಪಕ್ಷೇತರರು ಒಂದೆಡೆಯಾದರೆ ಇನ್ನೊಂದೆಡೆ ಜೆಡಿಎಸ್ ಸದಸ್ಯರು ಹಗ್ಗಜಗ್ಗಾಟ ಆರಂಭಿಸಿದ್ದಾರೆ. ಉಪ ಮೇಯರ್ ಸ್ಥಾನ ಯಾರ ಪಾಲಿಗೆ ಒಲಿಯುತ್ತದೆ ಎಂದು ಕಾದು ನೋಡಬೇಕಿದೆ.

ಹೃದಯಾಘಾತದಿಂದ ಬಿಬಿಎಂಪಿ ಉಪಮೇಯರ್ ರಮೀಳಾ ಉಮಾಶಂಕರ್ ನಿಧನಹೃದಯಾಘಾತದಿಂದ ಬಿಬಿಎಂಪಿ ಉಪಮೇಯರ್ ರಮೀಳಾ ಉಮಾಶಂಕರ್ ನಿಧನ

ಕಾಂಗ್ರೆಸ್, ಜೆಡಿಎಸ್ ಮೈತ್ರಿಯನ್ನು ತರಲು ಪಕ್ಷೇತರರು ಸಹಕರಿಸಿದ್ದಾರೆ, ಅದರಂತೆ ಈ ಬಾರಿಯೂ ಕಾಂಗ್ರೆಸ್ ಜೆಡಿಎಸ್ ಗೆ ಬೆಂಬಲ ನೀಡಿದ್ದಾರೆ, ಸೆಪ್ಟೆಂಬರ್ 28ರಂದು ಚುನಾವಣೆಯಲ್ಲಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದ ರಮೀಳಾ ನಿಧನ ನಂತರ ಅವರ ಸ್ಥಾನ ಖಾಲಿ ಇದೆ.

 ಉಪ ಮೇಯರ್ ಹುದ್ದೆಗೆ ಜೆಡಿಎಸ್‌ನಲ್ಲಿ ಲಾಬಿ

ಉಪ ಮೇಯರ್ ಹುದ್ದೆಗೆ ಜೆಡಿಎಸ್‌ನಲ್ಲಿ ಲಾಬಿ

ಉಪ ಮೇಯರ್ ಹುದ್ದೆ ಗಿಟ್ಟಿಸಲು ಜೆಡಿಎಸ್‌ನಲ್ಲಿ ಭಾರಿ ಪೈಪೋಟಿ ಆರಂಭವಾಗಿದೆ. ರಾಜಶೇಖರ್, ನೇತ್ರಾ ನಾರಾಯಣ್, ಭದ್ರೇಗೌಡ ಬೇಡಿಕೆ ಸಲ್ಲಿಸಿದ್ದಾರೆ. ಆದರೆ ಪಕ್ಷದಲ್ಲಿ ಈ ಕುರಿತು ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.

ಬೆಂಗಳೂರಿನ 52ನೇ, ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸಂದರ್ಶನ ಬೆಂಗಳೂರಿನ 52ನೇ, ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸಂದರ್ಶನ

 ಪಕ್ಷೇತರರ ಬೇಡಿಕೆಗೆ ಜೆಡಿಎಸ್ ಆಕ್ಷೇಪ

ಪಕ್ಷೇತರರ ಬೇಡಿಕೆಗೆ ಜೆಡಿಎಸ್ ಆಕ್ಷೇಪ

ಪಕ್ಷೇತರರ ಬೇಡಿಕೆಗೆ ಜೆಡಿಎಸ್ ಸದಸ್ಯರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರ ಲಾಭ ಪಡೆಯಲು ಪಕ್ಷೇತರರು ಪ್ರಯತನ್ಇಸುತ್ತಿದ್ದಾರೆ. ಉಪ ಮೇಯರ್ ಸ್ಥಾನ ಜೆಡಿಎಸ್ ನೀಡುವ ಕುರಿತು ಕಾಂಗ್ರೆಸ್ ಜತೆ ಮಾತು ಕತೆ ನಡೆದಿದೆ. ಮೂರು ವರ್ಷದಗಳಿಂದ ಜೆಡಿಎಸ್ ಗೆ ಉಪ ಮೇಯರ್ ಸ್ಥಾನ ನೀಡಲಾಗುತ್ತಿದೆ ಎನ್ನುವುದು ಒಂದು ವಾದವಾಗಿದೆ.

ಅಧಿಕಾರ ಸ್ವೀಕರಿಸಿದ ಬಿಬಿಎಂಪಿ ಮೇಯರ್ , ಹೂಗುಚ್ಛ ತರದಿರಲು ಮನವಿಅಧಿಕಾರ ಸ್ವೀಕರಿಸಿದ ಬಿಬಿಎಂಪಿ ಮೇಯರ್ , ಹೂಗುಚ್ಛ ತರದಿರಲು ಮನವಿ

 ಸೆಪ್ಟೆಂಬರ್ 28ಕ್ಕೆ ನಡೆದಿತ್ತು, ಮೇಯರ್, ಉಪ ಮೇಯರ್ ಚುನಾವಣೆ

ಸೆಪ್ಟೆಂಬರ್ 28ಕ್ಕೆ ನಡೆದಿತ್ತು, ಮೇಯರ್, ಉಪ ಮೇಯರ್ ಚುನಾವಣೆ

ಸೆಪ್ಟೆಂಬರ್ 28ರಂದು ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಮೇಯರ್ ಆಗಿ ಕಾಂಗ್ರೆಸ್ ನ ಗಂಗಾಂಬಿಕೆ ಮಲ್ಲಿಕಾರ್ಜುನ್ , ಉಪ ಮೇಯರ್ ಆಗಿ ರಮೀಳಾ ಉಮಾಶಂಕರ್ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು.

 ಉಪಮೇಯರ್ ರಮೀಳಾ ನಿಧನ

ಉಪಮೇಯರ್ ರಮೀಳಾ ನಿಧನ

ರಮೀಳಾ ಉಮಾಶಂಕರ್ ಅಕ್ಟೋಬರ್ 5ರಂದು ಬೆಳಗಿನ ಜಾವ ನಿಧನರಾದರು.ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೃತಪಟ್ಟಿದ್ದರು. ಅವರ ನಿಧನದಿಂದ ತೆರವಾದ ಉಪ ಮೇಯರ್ ಸ್ಥಾನಕ್ಕೆ ಇದೀಗ ಲಾಬಿ ಆರಂಭವಾಗಿದೆ. ಒಂದೆಡೆ ಜೆಡಿಎಸ್ ಇನ್ನೊಂದೆಡೆ ಪಕ್ಷೇತರರು ಹಗ್ಗಜಗ್ಗಾಟ ಆರಂಭಿಸಿದ್ದಾರೆ.

English summary
Independent corporators are claiming that the deputy mayor post who were with Congress-JDS alliance in BBMP. It has irked alliance to win against opposition Bjp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X