ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಾತಂತ್ರ್ಯ ದಿನಾಚರಣೆ; ಎಲ್ಲಾ ಪೊಲೀಸರಿಗೆ ಕೋವಿಡ್ ಪರೀಕ್ಷೆ

|
Google Oneindia Kannada News

ಬೆಂಗಳೂರು, ಆಗಸ್ಟ್ 14 : ಬೆಂಗಳೂರಿನಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಪರೇಡ್‌ನಲ್ಲಿ ಪಾಲ್ಗೊಳ್ಳುವ ಎಲ್ಲಾ ಪೊಲೀಸರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ನೆಗೆಟಿವ್ ವರದಿ ಬಂದವರಿಗೆ ಮಾತ್ರ ಪರೇಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ.

ಶನಿವಾರ ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಅತ್ಯಂತ ಸರಳವಾಗಿ ಕಾರ್ಯಕ್ರಮ ನಡೆಯಲಿದೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದಿಲ್ಲ.

ಸ್ವಾತಂತ್ರ್ಯ ದಿನಾಚರಣೆ: ಯಾವ ಜಿಲ್ಲೆಯಲ್ಲಿ ಯಾವ ಸಚಿವರಿಂದ ಧ್ವಜಾರೋಹಣ? ಇಲ್ಲಿದೆ ಪಟ್ಟಿಸ್ವಾತಂತ್ರ್ಯ ದಿನಾಚರಣೆ: ಯಾವ ಜಿಲ್ಲೆಯಲ್ಲಿ ಯಾವ ಸಚಿವರಿಂದ ಧ್ವಜಾರೋಹಣ? ಇಲ್ಲಿದೆ ಪಟ್ಟಿ

ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ 350 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ನೆಗೆಟಿವ್ ವರದಿ ಬಂದವರನ್ನು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಪೊಲೀಸರಿಗೆ ಪಥ ಸಂಚಲನ ನಡೆಯಲಿದೆ. ಬೇರೆ ಕಾರ್ಯಕ್ರಮಗಳು ಇರುವುದಿಲ್ಲ.

ಸ್ವಾತಂತ್ರ್ಯ ದಿನಾಚರಣೆಯಿಂದ ದೂರ ಉಳಿದ ರಾಜ್ಯಪಾಲರು ಸ್ವಾತಂತ್ರ್ಯ ದಿನಾಚರಣೆಯಿಂದ ದೂರ ಉಳಿದ ರಾಜ್ಯಪಾಲರು

Independence Day Parade COVID Test For 350 Policemen

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೂ ಕೋವಿಡ್ ಸೋಂಕು ತಗುಲಿತ್ತು. ಆಗಸ್ಟ್ 2ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಆಗಸ್ಟ್ 10ರಂದು ಡಿಸ್ಚಾರ್ಜ್ ಆಗಿದ್ದಾರೆ. ಕಾರ್ಯಕ್ರಮದ ಭದ್ರತಾ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಪೊಲೀಸ್ ಸಿಬ್ಭಂದಿಗೆ ಸಹ ಕೋವಿಡ್ ಪರೀಕ್ಷೆ ಮಾಡಲಾಗಿದೆ.

ಕೋವಿಡ್ ಭೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ; ಮಾರ್ಗಸೂಚಿ ಪ್ರಕಟ ಕೋವಿಡ್ ಭೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ; ಮಾರ್ಗಸೂಚಿ ಪ್ರಕಟ

ಗುರುವಾರ ಕರ್ನಾಟಕದಲ್ಲಿನ ಕೋವಿಡ್ ಸೋಂಕಿತರ ಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಗುರುವಾರ ರಾಜ್ಯದಲ್ಲಿ 6,706 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದವು. ಈ ಮೂಲಕ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 203200ಗೆ ಏರಿಕೆಯಾಗಿತ್ತು.

ಪ್ರಸ್ತುತ ಕರ್ನಾಟಕದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 78,337. ಸೋಂಕಿನಿಂದಾಗಿ 3613 ಜನರು ಇದುವರೆಗೂ ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 81,733ಕ್ಕೆ ಏರಿಕೆಯಾಗಿದೆ.

English summary
Around 350 policemen who take part in Independence Day parade at Field Marshal Manekshaw Parade Ground, Bengaluru tested for COVID 19. Policemen who tested negative will participate in the parade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X