ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲ್‌ಬಾಗ್ ಪ್ರದರ್ಶನಕ್ಕೆ ಬಂದವರು 5 ಲಕ್ಷ ಜನ

|
Google Oneindia Kannada News

ಬೆಂಗಳೂರು, ಆ.18 : ಸ್ವಾತಂತ್ರ್ಯೋತ್ಸವ ಅಂಗವಾಗಿ ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿದ್ದ ಹತ್ತು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ತೆರೆಬಿದ್ದಿದೆ. 5 ಲಕ್ಷ ಜನರು ಬಾರಿಯ ಪ್ರದರ್ಶನಕ್ಕೆ ಭೇಟಿ ನೀಡಿರುವ ಅಂದಾಜಿದ್ದು, ಸುಮಾರು ರೂ 1.79 ಕೋಟಿ ಶುಲ್ಕ ಸಂಗ್ರಹವಾಗಿದೆ.

ಮೈಸೂರು ಉದ್ಯಾನ ಕಲಾ ಸಂಘ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ 200ನೇ ಫಲಪುಷ್ಪ ಪ್ರದರ್ಶನವನ್ನು ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದವು. ಮೈಸೂರು ಅರಮೆನೆ ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿತ್ತು. ಹತ್ತುದಿನಗಳ ಪ್ರದರ್ಶನ ಭಾನುವಾರ ಮುಕ್ತಾಯವಾಗಿದೆ. [ಲಾಲ್ ಬಾಗ್ ನಲ್ಲಿ ಮೈಸೂರು ಅರಮನೆ ನೋಡಿ]

Lalbagh

ಈ ಬಾರಿ ಪ್ರದರ್ಶನದಲ್ಲಿ ದಾಖಲೆಯ ಶುಲ್ಕ ಸಂಗ್ರಹವಾಗಿದೆ. 2013ರಲ್ಲಿ ರೂ 1.46 ಕೋಟಿ ಸಂಗ್ರಹವಾಗಿತ್ತು. ಈ ಬಾರಿ 1.79 ಕೋಟಿ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸುಮಾರು 2 ಲಕ್ಷ ಮಕ್ಕಳು ಈ ಬಾರಿಯ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ್ದಾರೆ. ಪಾಸ್‌ ಹೊಂದಿದವರು ಹಾಗೂ ಟಿಕೆಟ್‌ ಇಲ್ಲದೇ ಒಳ ಹೋದವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಹೂವಿನ ಅಲಂಕಾರ ಹಾಗೂ ಭದ್ರತೆಗಾಗಿ ಹೆಚ್ಚು ಹಣ ಖರ್ಚು ಮಾಡಲಾಗಿದೆ. ತ್ಯಾಜ್ಯ ವಿಲೇವಾರಿಯತ್ತಲೂ ಗಮನ ಹರಿಸಬೇಕಾಗಿದ್ದು, ಸೋಮವಾರ ಸಂಜೆ ವೇಳೆಗೆ ಲಾಲ್‌ಬಾಗ್‌ ಆವರಣವನ್ನು ಸ್ವಚ್ಛಗೊಳಿಸಲಿದ್ದೇವೆ ಅಧಿಕಾರಿಗಳು ತಿಳಿಸಿದ್ದಾರೆ. ಅಂತಿಮ ದಿನವಾದ ಭಾನುವಾರ ಕೂಡ ಸುಮಾರು 1 ಲಕ್ಷ ಮಂದಿ ಭೇಟಿ ನೀಡಿದ್ದರು. ಆದರೆ, ಪ್ರಮುಖ ಆಕರ್ಷಣೆ ಎನಿಸಿದ್ದ ಹೂವಿನ ಮೈಸೂರು ಅರಮನೆಯ ಕೆಲಭಾಗ ಒಣಗಿ ಹೋಗಿತ್ತು. [ಫಲಪುಷ್ಪ ಪ್ರದರ್ಶನದ ಚಿತ್ರಗಳು]

ಭಾನುವಾರ ಮಾರತ್‌ಹಳ್ಳಿಯ ನ್ಯೂ ಹೊರೈಜಾನ್‌ ಕಾಲೇಜು ವಿದ್ಯಾರ್ಥಿಗಳು ಲಾಲ್‌­ಬಾಗ್‌ ಆವರಣವನ್ನು ಸ್ವಚ್ಛಗೊಳಿಸುವ ಅಭಿಯಾನ ನಡೆಸಿದರು.ಜನಸಾಗರ ಹರಿದುಬಂದಿದ್ದರಿಂದ ಉದ್ಯಾನದಲ್ಲಿ ಕಸದ ರಾಶಿಯೇ ನಿರ್ಮಾಣವಾಗಿತ್ತು. ಸುಮಾರು 40 ವಿದ್ಯಾರ್ಥಿಗಳು ಕಸ ಪೊರಕೆ ಹಿಡಿದು ನಾಲ್ಕೈದು ಗಂಟೆ ಸ್ವಚ್ಛಗೊಳಿಸಿದರು.

English summary
The 10-day Independence Day flower show at Lalbagh, Bangalore came to a close on Sunday. Horticulture department officials said, Rs 1.79 core fee collected through entry tickets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X