ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಟ, ನಿರ್ಮಾಪಕರ ಮೇಲಿನ ಐಟಿ ದಾಳಿ ಮೊತ್ತ ಬಹಿರಂಗ

|
Google Oneindia Kannada News

Recommended Video

ಐಟಿ ಅಧಿಕಾರಿಗಳ ಪ್ರಕಟಣೆ : 109 ಕೋಟಿ ಮೌಲ್ಯದ ಆಸ್ತಿ ದಾಖಲೆ ಇಲ್ಲ..! | Oneindia Kannada

ಬೆಂಗಳೂರು, ಜನವರಿ 06: ಕರ್ನಾಟಕ ಹಾಗೂ ಗೋವಾದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸತತ ಮೂರು ದಿನಗಳ ಕಾಲದ ಐಟಿ ದಾಳಿ ನಂತರ ಇಂದು ಐಟಿ ದಾಳಿಯ ಸಂದರ್ಭದಲ್ಲಿ ಕಲೆ ಹಾಕಿದ ಮಾಹಿತಿ, ಜಪ್ತಿಯಾದ ಮೊತ್ತವನ್ನು ಬಹಿರಂಗ ಪಡಿಸಿದ್ದಾರೆ. ಒಟ್ಟಾರೆ, 109ಕೋಟಿ ರು ಗೂ ಅಧಿಕ ಮೊತ್ತಕ್ಕೆ ಸರಿಯಾದ ರಸೀತಿ ಸಿಕ್ಕಿಲ್ಲ, ಈ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಹೇಳಲಾಗಿದೆ.

ಚಿತ್ರಗಳಿಗೆ ನಟರು ಪಡೆಯುವ ಸಂಭಾವನೆ, ಚಿತ್ರಗಳ ಸ್ಯಾಟಲೈಟ್ ಹಕ್ಕು, ಡಿಜಿಟಲ್ ಹಕ್ಕು, ಆಡಿಯೋ ಹಕ್ಕುಗಳ ಮಾಹಿತಿ ಕಲೆ ಹಾಕಲಾಗಿದೆ. ಒಟ್ಟಾರೆ, 2.85 ಕೋಟಿ ರು ನಗದು, 25 ಕೆಜಿ ಆಭರಣ ಸೇರಿದಂತೆ ಜಪ್ತಿಯಾದ ವಸ್ತುಗಳ ಮೊತ್ತ 11ಕೋಟಿರುಗೂ ಅಧಿಕವಾಗಿದೆ.

ಸ್ಟಾರ್ ನಟರಿಗೆ ಐಟಿ ಗ್ರಹಣ, ರಾತ್ರಿಯಿಡಿ ಮಾಡಲಿದ್ದಾರೆ ಡ್ರಿಲ್‌ಸ್ಟಾರ್ ನಟರಿಗೆ ಐಟಿ ಗ್ರಹಣ, ರಾತ್ರಿಯಿಡಿ ಮಾಡಲಿದ್ದಾರೆ ಡ್ರಿಲ್‌

ಪವರ್ ಸ್ಟಾರ್ ಪುನೀತ್, ರಾಕಿಂಗ್ ಸ್ಟಾರ್ ಯಶ್, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರ ಮನೆ ಮೇಲೆ ದಾಳಿ ನಡೆಸಲಾಗಿತ್ತು. ನಿರ್ಮಾಪಕರಾದ ವಿಜಯ್ ಕಿರಗಂದೂರು, ಜಯಣ್ಣ, ಶಾಸಕ ಸಿಆರ್ ಮನೋಹರ್ ಹಾಗೂ ರಾಕ್ ಲೈನ್ ವೆಂಕಟೇಶ್ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು.

ಐಟಿ ದಾಳಿ ಕುರಿತು ಪತ್ರಕರ್ತರ ಪ್ರಶ್ನೆಗಳು: ಪುನೀತ್‌ ರಾಜ್‌ಕುಮಾರ್ ವಿನಯಪೂರ್ವಕ ಉತ್ತರಗಳು ಐಟಿ ದಾಳಿ ಕುರಿತು ಪತ್ರಕರ್ತರ ಪ್ರಶ್ನೆಗಳು: ಪುನೀತ್‌ ರಾಜ್‌ಕುಮಾರ್ ವಿನಯಪೂರ್ವಕ ಉತ್ತರಗಳು

ಇದಲ್ಲದೆ, ಯಶ್ ಅವರ ಪತ್ನಿ ನಟಿ ರಾಧಿಕಾ ಪಂಡಿತ್ ಅವರ ಗಾಯತ್ರಿ ನಗರದ ಮನೆ, ಯಶ್ ಅವರ ಕತ್ರಿಗುಪ್ಪೆ, ಹೊಸಕೆರೆಹಳ್ಳಿ ನಿವಾಸ, ಕತ್ರಿಗುಪ್ಪೆಯಲ್ಲಿರುವ ಕಚೇರಿ ಸೇರಿದಂತೆ ಒಟ್ಟಾರೆ ಬೆಂಗಳೂರಿನ 21 ಕಡೆಗಳಲ್ಲಿ ಮೇಲೆ ದಾಳಿ ನಡೆಸಲಾಗಿತ್ತು.

ಮೂರು ತಿಂಗಳುಗಳ ಕಾಲ

ಮೂರು ತಿಂಗಳುಗಳ ಕಾಲ

21 ಕಡೆಗಳಲ್ಲಿ 180ಕ್ಕೂ ಅಧಿಕ ಅಧಿಕಾರಿಗಳು ಜನವರಿ 03ರಂದು ನಾಲ್ವರು ಸಿನಿಮಾ ನಟರು, ನಾಲ್ವರು ನಿರ್ಮಾಪಕ ಕಮ್ ವಿತರಕರ ಮನೆ, ಕಚೇರಿ ಮೇಲೆ ನಡೆಸಿದ ದಾಳಿಯಲ್ಲಿ 11 ಕೋಟಿ ರು 2.85 ಕೋಟಿ ನಗದು, 25.3 ಚಿನ್ನಾಭರಣ ಲಭ್ಯವಾಗಿದೆ. ದಾಖಲೆ ರಹಿತ ಆದಾಯದ ಮೊತ್ತ 109 ಕೋಟಿ ರು ಎಂದು ನಮೂದಿಸಲಾಗಿದೆ. ಆದರೆ, ಈ ಮೊತ್ತ ಇನ್ನು ಹೆಚ್ಚಾಗುವ ಸಾಧ್ಯತೆಯಿದ್ದು, ಈ ಮೊತ್ತಕ್ಕೆ ತೆರಿಗೆ ಮೊತ್ತವೇ 25 ಕೋಟಿ ರು ಗು ಅಧಿಕ ಪಾವತಿಸಬೇಕಾಗುತ್ತದೆ. ಈ ಬಗ್ಗೆ ಪ್ರಶ್ನಿಸಲು ಜನವರಿ 07ರಿಂದ ಎಲ್ಲರ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಚಿತ್ರಮಂದಿರಗಳ ಗಳಿಕೆ ಮೊತ್ತ

ಚಿತ್ರಮಂದಿರಗಳ ಗಳಿಕೆ ಮೊತ್ತ

ಚಿತ್ರ ನಿರ್ಮಾಣ, ಚಿತ್ರಮಂದಿರಗಳಲ್ಲಿ ದಾಖಲೆರಹಿತವಾಗಿ ಪಡೆದ ಮೊತ್ತವನ್ನು ಬೇರೆಡೆಗೆ ವರ್ಗಾಯಿಸಿರುವುದು ಪತ್ತೆಯಾಗಿದೆ. ಈ ಅಘೋಷಿತ ಆಸ್ತಿ ವಿವರಗಳ ಬಗ್ಗೆ ತನಿಖೆಗೆ ಜಾರಿ ನಿರ್ದೇಶನಾಲಯಕ್ಕೆ ವಹಿಸುವ ಸಾಧ್ಯತೆಯಿದೆ. ತೆರಿಗೆ ವಂಚನೆ ಪ್ರಕರಣ ದಾಖಲಿಸಿಕೊಂಡು ಆರ್ಥಿಕ ಅಪರಾಧಗಳ ವಿಭಾಗದಿಂದ ವಿಚಾರಣೆ ನಡೆಸಲಾಗುತ್ತದೆ.

ಸ್ಯಾಂಡಲ್ ವುಡ್ ನಟರಿಗೆ ಬಿಗ್ ಶಾಕ್! ಯಾರ್ಯಾರ ಮನೆ ಮೇಲೆ ಐಟಿ ದಾಳಿ?ಸ್ಯಾಂಡಲ್ ವುಡ್ ನಟರಿಗೆ ಬಿಗ್ ಶಾಕ್! ಯಾರ್ಯಾರ ಮನೆ ಮೇಲೆ ಐಟಿ ದಾಳಿ?

ದಾಖಲೆ ರಹಿತ ನಗದು, ಆಭರಣ ಪತ್ತೆ

ದಾಖಲೆ ರಹಿತ ನಗದು, ಆಭರಣ ಪತ್ತೆ

ಕಲಾವಿದರ ಸಂಭಾವನೆ, ಸಿಕ್ಕಿಲ್ಲ. ಸ್ಯಾಟಲೈಟ್, ಡಿಜಿಟಲ್ ಹಾಗೂ ಆಡಿಯೋ ರೈಟ್ಸ್ ಮಾರಾಟದಿಂದ ಬಂದ ಹಣಕ್ಕೆ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ. ಥಿಯೇಟರ್​ನಿಂದ ಬಂದ ಹಣದ ಕಲೆಕ್ಷನ್ ಲೆಕ್ಕ ತೋರಿಸಿಲ್ಲ ಎಂದು ಐಟಿ ತಿಳಿಸಿದೆ. ದಾಖಲೆಯಿಲ್ಲದ ನೂರಾರು ಕೋಟಿ ರೂ. ನಗದು, ಆಭರಣ, ಆಸ್ತಿಪತ್ರ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಮಾಹಿತಿ ನೀಡುವ ಸಾಧ್ಯತೆಯಿದೆ.

ನಟರಿಗೆ ಸಿಗುವ ಸಂಭಾವನೆಗೆ ತೆರಿಗೆ

ನಟರಿಗೆ ಸಿಗುವ ಸಂಭಾವನೆಗೆ ತೆರಿಗೆ

ಜಿ ಎಸ್ ಟಿ ಹೊಸ ನಿಯಾಮಾವಳಿಗಳ ಪ್ರಕಾರ 20 ಲಕ್ಷಕ್ಕೂ ಹೆಚ್ಚು ಅದಾಯ ಪಡೆದುಕೊಳ್ಳುವ ಕಲಾವಿದರು ಶೇಕಡಾ 28 ರಷ್ಟು ತೆರಿಗೆ ಪಾವತಿ ಮಾಡಬೇಕು

ಆದರೆ ಸಂಭಾವನೆಯನ್ನು ನಿಯಮಿತವಾಗಿ ಪಡೆದು ಸಿನಿಮಾದ ಒಟ್ಟು ಆದಾಯದಲ್ಲಿ ಇಂತಿಷ್ಟು ‌ಅಂತಾ ಪಡೆದುಕೊಳ್ಳುವ ನಟರಿಂದ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ಐಟಿ ಅಧಿಕಾರಿಗಳು ಕೋರ್ಟಿನಿಂದ ಆದೇಶ ಪಡೆದು ಈ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

English summary
Income tax department today(Jan 06) revealed the total amount of currency, ornaments seized during raid on Actor and producers over the the past three days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X