ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮೇಶ್ ವಿಚಾರಣೆಯನ್ನೇ ನಡೆಸಿಲ್ಲ: ಐಟಿ ಇಲಾಖೆ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 12: ಆತ್ಮಹತ್ಯೆ ಮಾಡಿಕೊಂಡ ಮಾಜಿ ಜಿ ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ್ ಅವರ ನಿವಾಸದ ಮೇಲೆ ದಾಳಿ ನಡೆಸಿಲ್ಲ ಮತ್ತು ಅವರನ್ನು ವಿಚಾರಣೆಗೂ ಒಳಪಡಿಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿರುವುದಾಗಿ ಕೆಲವು ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಪರಮೇಶ್ವರ್ ಅವರ ನಿವಾಸ ಮತ್ತು ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿತ್ತು. ಅ.10ರಂದು ಕೊರಟಗೆರೆಯಲ್ಲಿರುವ ಪರಮೇಶ್ವರ್ ಅವರ ನಿವಾಸ ಮೇಲೆ ದಾಳಿ ನಡೆಸಿದಾಗ ಪರಮೇಶ್ವರ್ ಇರಲಿಲ್ಲ. ಅವರು ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಹೀಗಾಗಿ ಅವರಿದ್ದ ಸ್ಥಳಕ್ಕೆ ತೆರಳಿ ರಕ್ಷಣೆಯೊಂದಿಗೆ ಮನೆಗೆ ಕರೆದುಕೊಂಡು ಬರಲಾಗಿತ್ತು. ಅವರೊಂದಿಗೆ ರಮೇಶ್ ಕೂಡ ಇದ್ದರು. ತಪಾಸಣೆ ಬಳಿಕ ರಮೇಶ್ ಅವರಿಂದ ಪಂಚನಾಮೆಯ ಹೇಳಿಕೆ ದಾಖಲು ಮಾಡಿಕೊಂಡಿದ್ದೆವಷ್ಟೇ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಐಟಿ ದಾಳಿಗೆ ಹೆದರಿ ಆತ್ಮಹತ್ಯೆ: ರಮೇಶ್ ಡೆತ್‌ನೋಟ್‌ನಲ್ಲಿ ಏನಿದೆ?ಐಟಿ ದಾಳಿಗೆ ಹೆದರಿ ಆತ್ಮಹತ್ಯೆ: ರಮೇಶ್ ಡೆತ್‌ನೋಟ್‌ನಲ್ಲಿ ಏನಿದೆ?

ಪರಮೇಶ್ವರ್ ಅವರ ಮನೆಯಲ್ಲಿ ಅ. 12ರಂದು ರಾತ್ರಿ 2.45ರ ವೇಳೆಗೆ ತಪಾಸಣೆ ಮುಗಿದಿತ್ತು. ಅಲ್ಲಿಯವರೆಗೂ ರಮೇಶ್ ಮನೆಯಲ್ಲಿಯೇ ಇದ್ದರು. ಆದಾಯ ತೆರಿಗೆ ಕಾಯ್ದೆಯ 131, 132 (4)ರ ಅಡಿ ರಮೇಶ್ ಅವರಿಂದ ಹೇಳಿಕೆ ಪಡೆದುಕೊಂಡಿರಲಿಲ್ಲ. ರಮೇಶ್ ಮನೆಯ ಮೇಲೆ ಯಾವುದೇ ದಾಳಿ ನಡೆದಿಲ್ಲ. ಈ ಸಂಬಂಧ ಅವರ ವಿಚಾರಣೆಯನ್ನು ಕೂಡ ನಡೆಸಿಲ್ಲ. ಪರಮೇಶ್ವರ್ ಅವರ ಮನೆ ಮೇಲಿನ ದಾಳಿಗೆ ಕುರಿತಂತೆ ಕೂಡ ವಿಚಾರಣೆ ನಡೆಸಿಲ್ಲ ಎಂದು ಹೇಳಿದ್ದಾರೆ.

ಐಟಿಯವರ ಕಿರುಕುಳದಿಂದಲೇ ರಮೇಶ್ ಆತ್ಮಹತ್ಯೆ: ಸಿದ್ದರಾಮಯ್ಯಐಟಿಯವರ ಕಿರುಕುಳದಿಂದಲೇ ರಮೇಶ್ ಆತ್ಮಹತ್ಯೆ: ಸಿದ್ದರಾಮಯ್ಯ

Income Tax Department Clarification On Ramesh Suicide Case

ರಮೇಶ್ ಅವರ ಮೊಬೈಲ್ ಫೋನ್‌ಅನ್ನು ಪಡೆದು ಅದರಿಂದ ಕೆಲವು ಮಾಹಿತಿಗಳನ್ನು ಪಡೆದುಕೊಳ್ಳಲಾಗಿತ್ತು. ಮೊಬೈಲ್ ಪರಿಶೀಲನೆ ನಂತರ ಅವರಿಗೆ ಅದನ್ನು ಹಿಂದಿರುಗಿಸಲಾಗಿತ್ತು ಎಂಬುದಾಗಿ ಆದಾಯ ತೆರಿಗೆ ಇಲಾಖೆಯ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.

English summary
Income Tax sources clarified that they have not made raid on G Parameshwar's Personal assistant Ramesh's home nor enquired him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X