ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2020ರೊಳಗೆ ಕೆಂಪೇಗೌಡ ಏರ್‌ಪೋರ್ಟ್‌ಗೂ ಬರಲಿವೆ ಬಾಡಿ ಸ್ಕ್ಯಾನರ್‌ಗಳು

|
Google Oneindia Kannada News

ಬೆಂಗಳೂರು, ಜೂನ್ 3: ಬೆಂಗಳೂರು ಸೇರಿದಂತೆ ದೇಶದ 84 ವಿಮಾನ ನಿಲ್ದಾಣಗಳಲ್ಲಿ 2020ರ ಮಾರ್ಚ್ ಒಳಗೆ ಬಾಡಿ ಸ್ಕ್ಯಾನರ್ ಗಳನ್ನು ಅಳವಡಿಸಲಾಗುತ್ತದೆ.

ವಿಮಾನ ಪ್ರಯಾಣವನ್ನು ಇನ್ನಷ್ಟು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 84 ಸೂಕ್ಷ್ಮ ವಿಮಾನ ನಿಲ್ದಾಣಗಳಲ್ಲಿ ಬಾಡಿ ಸ್ಕ್ಯಾನರ್ ಅಳವಡಿಸಲಾಗುತ್ತದೆ.

ವಿಮಾನದಲ್ಲಿ ಗಾಳಿ ಬರುತ್ತಿಲ್ಲ ಎಂದು ಪ್ರಯಾಣಿಕ ಮಾಡಿದ್ದೇನು? ವಿಮಾನದಲ್ಲಿ ಗಾಳಿ ಬರುತ್ತಿಲ್ಲ ಎಂದು ಪ್ರಯಾಣಿಕ ಮಾಡಿದ್ದೇನು?

ವಿಮಾನ ನಿಲ್ದಾಣದಲ್ಲಿ ಈಗ ಬಳಸಲಾಗುತ್ತಿರುವ ಮೆಟಲ್ ಡಿಟೆಕ್ಟರ್ ಹಾಗೂ ಹ್ಯಾಂಡ್ ಸ್ಕ್ಯಾನರ್‌ಗಳ ಬದಲಿಗೆ ಈ ಬಾಡಿ ಸ್ಕ್ಯಾನರ್ ಹಾಕಲಾಗುತ್ತದೆ. ಇದು 2020ರ ಮಾರ್ಚ್ 30ರೊಳಗೆ ಈ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಲಭ್ಯವಾಗಲಿವೆ. ಬಾಡಿ ಸ್ಕ್ಯಾನರ್ ಅಳವಡಿಸುವ ಮಾಹಿತಿ ಇದ್ದರೂ ಕೂಡ ಯಾವಾಗ ಎನ್ನುವ ಪ್ರಶ್ನೆ ಎಲ್ಲರಲ್ಲಿತ್ತು ಇದೀಗ ಉತ್ತರ ಸಿಕ್ಕಿದೆ.

Including bengaluru 84 airport will have body scanner shortly

ದೇಶದ 105 ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿರುವ ದೆಹಲಿ, ಮುಂಬೈ, ಕೋಲ್ಕತ್ತ, ಬೆಂಗಳೂರು, ಚೆನ್ನೈ ಹಾಗೂ ಬಿಕ್ಕಟ್ಟಿನ ಸ್ಥಳಗಳಾದ ಜಮ್ಮು-ಕಾಶ್ಮೀರ ಈಶಾನ್ಯ ರಾಜ್ಯಗಳಲ್ಲಿನ 28 ವಿಮಾನ ನಿಲ್ದಾಣಗಳನ್ನು ಅತ್ಯಂತ ಸೂಕ್ಷ್ಮ ನಿಲ್ದಾಣ ಎಂದು ಪರಿಗಣಿಸಲಾಗಿದೆ.

ಕೆಂಪೇಗೌಡ ಏರ್‌ಪೋರ್ಟ್‌ ಸುತ್ತಮುತ್ತಲ ನಿವಾಸಿಗಳಿಗೆ ನಿತ್ಯ ನರಕ ಕೆಂಪೇಗೌಡ ಏರ್‌ಪೋರ್ಟ್‌ ಸುತ್ತಮುತ್ತಲ ನಿವಾಸಿಗಳಿಗೆ ನಿತ್ಯ ನರಕ

ಮೆಟಲ್ ಡಿಟೆಕ್ಟರ್ ಹಾಗೂ ಹ್ಯಾಂಡ್ ಹೆಲ್ಡ್ ಸ್ಕ್ಯಾನರ್‌ಗಳು ಲೋಹೇತರ ಶಸ್ತ್ರಾಸ್ತ್ರ ಹಾಗೂ ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚುವುದಿಲ್ಲ, ಆದರೆ ಬಾಡಿ ಸ್ಕ್ಯಾನರ್‌ಗಳು ಲೋಹದ ಹಾಗೂ ಲೋಹೇತರ ವಸ್ತುಗಳನ್ನು ಪ್ರಯಾಣಿಕರು ದೇಹದೊಳಗೆ ಅಡಗಿಸಿಟ್ಟಿದ್ದರೂ ಪತ್ತೆ ಮಾಡುತ್ತವೆ.

English summary
Union government ordered to install body scanner at 84 airport. This included Kempegowda International Airport too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X