ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವ್ಹೀಲ್ ಚೇರ್ ಮೇಲೂ ಸುಂದರ ಬದುಕು ಕಲ್ಪಿಸಿಕೊಟ್ಟ ಇನ್ ಕ್ಲೋವ್!

|
Google Oneindia Kannada News

ಬೆಂಗಳೂರು, ನವೆಂಬರ್ 13: ವಿವಿಧ ಕಾರಣಗಳಿಂದ ನಡೆದಾಡುವುದಕ್ಕೆ ಸಾಧ್ಯವಾಗದೆ ಇರುವವರು, ಕಣ್ಣು ಕಾಣದವರು, ಕಿವಿ ಕೇಳದವರು, ಮಾತು ಬಾರದವರು, ಅಥವಾ ಇಂಥ ಇನ್ಯಾವುದೇ ಸಮಸ್ಯೆಯಿಂದ ಬಳುತ್ತಿರುವವರು ಖಿನ್ನತೆಗೊಳಗಾಗುವ ಸನ್ನಿವೇಶ ಹೆಚ್ಚು.

ಮಿಸ್ ವ್ಹೀಲ್ ಚೇರ್ ಗೆದ್ದುಬರಲಿ ನಮ್ಮ ಕನ್ನಡತಿ ಡಾ.ರಾಜಲಕ್ಷ್ಮಿಮಿಸ್ ವ್ಹೀಲ್ ಚೇರ್ ಗೆದ್ದುಬರಲಿ ನಮ್ಮ ಕನ್ನಡತಿ ಡಾ.ರಾಜಲಕ್ಷ್ಮಿ

ಅವರ ನೋವು, ಕಷ್ಟಗಳು ಅರ್ಥವಾಗುವುದು ಅವರಂತೇ ನೋವನುಭವಿಸುತ್ತಿರುವವರಿಗೆ ಮಾತ್ರ. ಅವರಿಗೆ ಜೊತಯಾಗುವುದಕ್ಕೆ ಸಾಧ್ಯವಿರುವುದೂ ಅವರಂಥವರಿಗೆ ಮಾತ್ರ್. ಅದಕ್ಕೆಂದೇ ಈ ರೀತಿ ದೈಹಿಕ ದೌರ್ಬಲ್ಯದಿಂದ ಬ ಳಲುತ್ತಿರುವವರಿಗಾಗಿಯೇ ಇನ್ ಕ್ಲೋವ್ ಎಂಬ app ಅನ್ನು ಪರಿಚಯಿಸಿದವರು ಕಲ್ಯಾಣಿ ಖೋನಾ ಮತ್ತು ಶಂಕರ್ ಶ್ರೀನಿವಾಸನ್.

Inclove app an initiative for physically disabled

ದೈಹಿಕ ನ್ಯೂನತೆಯಿಂದ ಬಳಲುತ್ತಿರುವ ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿ, ಅವರ ಬದುಕಿನ ಅನುಭವಗಳನ್ನು ಹಂಚಿಕೊಳ್ಳುವುವದಕ್ಕೆ, ಸ್ನೇಹ ಸಂಪಾದಿಸುವುದಕ್ಕೆ, ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಈ app ಸಹಾಯಮಾಡಿದೆ.

ವಿಧಿಯೇ ರೂಪಿಸಿದ ಈ ವಿಶ್ವಸುಂದರಿ ಹೆಸರು ರಾಜಲಕ್ಷ್ಮಿ!ವಿಧಿಯೇ ರೂಪಿಸಿದ ಈ ವಿಶ್ವಸುಂದರಿ ಹೆಸರು ರಾಜಲಕ್ಷ್ಮಿ!

2016 ರಲ್ಲಿ ಆರಂಭವಾದ ಇನ್ ಕ್ಲೋವ್ ಇದುವರೆಗೂ 7000 ಕ್ಕೂ ಹೆಚ್ಚು ಜನ ತಮ್ಮ ಸ್ನೇಹಿತರನ್ನು, ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳಲು ನೆರವಾಗಿದೆ ಎನ್ನುತ್ತಾರೆ ಕಲ್ಯಾಣಿ. ದೆಹಲಿ, ಜೈಪುರ, ಚಂಡಿಗಢ, ಕೋಲ್ಕತ್ತಾಗಳಲ್ಲಿ ಇವರನ್ನೆಲ್ಲ ಒಗ್ಗೂಡಿಸುವುದಕ್ಕಾಗಿ ಅಲ್ಲಲ್ಲಿ ಸ್ನೇಹಪೂರ್ವಕ ಸಭೆಗಳನ್ನೂ ನಡೆಸಲಾಗುತ್ತಿತ್ತು. ಇದೀಗ ಬೆಂಗಳೂರಿನ ಲಲಿತ್ ಅಶೋಕ್ ಹೊಟೇಲ್ ನಲ್ಲೂ ಇವರೆಲ್ಲ ಒಂದೆಡೆ ಸೇರಿ ನಲಿದಿದ್ದಾರೆ, ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ದೈಹಿಕ ನ್ಯೂನತೆಯಿಂದ ಬಳಲುತ್ತ, ಖಿನ್ನತೆ ಅನುಭವಿಸುತ್ತಿರುವವರ ಬದುಕಿಗೆ ಇನ್ ಕ್ಲೂವ್ ಹೊಸ ನಂದಾದೀಪವೆನ್ನಿಸಿದೆ.

English summary
Inclov an app which was introduced by Kalyani Khona and Sshankar Sshrinivasan helps alot to the people, who are suffering from Physical disability to choose theri campanian and to come out from depression.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X