ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ.22 ರಿಂದ ಶಾರದಾ ಸರ್ವಜ್ಞಪೀಠದ ಕುರಿತು ಜನಜಾಗೃತಿ ಅಭಿಯಾನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ಕಾಶ್ಮೀರದಲ್ಲಿರುವ ಶ್ರೀ ಶಾರದಾ ಸರ್ವಜ್ಞಪೀಠದ ಕುರಿತು ಜನಜಾಗೃತಿ ಅಭಿಯಾನದ ಪ್ರಾರಂಭೋತ್ಸವ ಬೆಂಗಳೂರಿನ ಶಂಕರಪುರಂನಲ್ಲಿರುವ ಶೃಂಗೇರಿ ಶಂಕರಮಠದಲ್ಲಿ ನಡೆಯಲಿದೆ.

ಸೆಪ್ಟೆಂಬರ್ 22 ರಂದು ಸಂಜೆ 4 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೃಂಗೇರಿ ಶಾರದಾಪೀಠದ ಆಡಳಿತಾಧಿಕಾರಿ ಪದ್ಮಶ್ರೀ ಡಾ.ವಿ.ಆರ್.ಗೌರಿಶಂಕರ್ ವಹಿಸಲಿದ್ದಾರೆ.

'ಅದ್ವೈತ' ಸನ್ಯಾಸಿಗಳ 'ದಶನಾಮ' ಮೂಲ ಹುಡುಕುತ್ತಾ...'ಅದ್ವೈತ' ಸನ್ಯಾಸಿಗಳ 'ದಶನಾಮ' ಮೂಲ ಹುಡುಕುತ್ತಾ...

ನವದುರ್ಗ ಟ್ರಸ್ಟ್ ಫಾರ್ ಇಂಡಾಲಜಿಕಲ್ ಸ್ಟಡೀಸ್ ಅಂಡ್ ರಿಸರ್ಚ್ ವತಿಯಿಂದ ಈ ಜನಜಾಗೃತಿ ಅಭಿಯಾನ ನಡೆಯುತ್ತಿದೆ.

Inauguration of Shri Sharada Peetha Janajagruti Abhiyana on Sep 22

ಕಾರ್ಯಕ್ರಮದಲ್ಲಿ ಕಾಶ್ಮೀರದ ಸೇವ್ ಶಾರದಾ ಕಮಿಟಿ(ರಿ.)ಯ ಸಂಸ್ಥಾಪಕ ಅಧ್ಯಕ್ಷರಾದ ರವೀಂದ್ರ ಪಂಡಿತ್ ಅವರು ಉಪಸ್ಥಿತರಿರಲಿದ್ದು, ಶ್ರೀ ಶಾರದಾ ಪೀಠದ ಬಗ್ಗೆ ಚಿತ್ರಸಹಿತ ಉಪನ್ಯಾಸ ನೀಡಲಿದ್ದಾರೆ.

ಯುವ ಬ್ರಿಗೆಡಿನ ಸಂಚಾಲಕರಾದ, ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಶೃಂಗೇರಿ ಶಾರದಾ ಪೀಠದ ಗುರು ಪರಂಪರೆಯತ್ತ ನೋಟಶೃಂಗೇರಿ ಶಾರದಾ ಪೀಠದ ಗುರು ಪರಂಪರೆಯತ್ತ ನೋಟ

ಶ್ರೀ ಶಾರದಾ ಪೀಠದ ಸಂಶೋಧನೆಯ ಉದ್ದೇಶವೇನು ಎಂಬ ಕುರಿತು ನವದುರ್ಗ ಟ್ರಸ್ಟ್ ಅಧ್ಯಕ್ಷರೂ ಆದ, ಸಂಶೋಧಕ ಡಾ.ಬಿ.ಆರ್.ಭಾರತಿ ಅವರು ವಿವರಣೆ ನೀಡಲಿದ್ದಾರೆ.

Inauguration of Shri Sharada Peetha Janajagruti Abhiyana on Sep 22

ಶೃಂಗೇರಿ: ವಿಧುಶೇಖರ ಭಾರತಿ ಸ್ವಾಮೀಜಿ ಹೊಸ ಜಗದ್ಗುರುಶೃಂಗೇರಿ: ವಿಧುಶೇಖರ ಭಾರತಿ ಸ್ವಾಮೀಜಿ ಹೊಸ ಜಗದ್ಗುರು

ದೇಶದಲ್ಲೇ ಮೊದಲ ಪ್ರಯತ್ನವಾಗಿ ಆರಂಭವಾದ ಈ ಅಭಿಯಾನ ಬೆಂಗಳೂರಿನಿಂದಲೇ ಆರಂಭವಾಗಲಿರುವುದು ಹೆಮ್ಮೆಯ ವಿಷಯ. ಈ ಕಾರ್ಯಕ್ರಮದ ಸಂದರ್ಭದಲ್ಲಿ ಕಾಶ್ಮೀರದ ಶ್ರೀ ಶಾರದಾ ಪೀಠದ ಪವಿತ್ರ ಮೃತ್ತಿಕೆ, ಶಿಲೆ ಮತ್ತು ನಿರ್ಮಾಲ್ಯವನ್ನು ಪ್ರದರ್ಶನಕ್ಕೆ ಇಡಲಾಗುವುದು.

English summary
Inauguration of Shri Sharada Peetha Janajagruti Abhiyana(campaign) will be taking place on Sep 22nd in Shringeri Shankar mutt, Shankarpuram road, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X