ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

45 ದಿನಗಳಲ್ಲಿ ನಿರ್ಮಿಸಿದ ಡಿಆರ್‌ಡಿಓದ ಫ್ಲೈಟ್ ಕಂಟ್ರೋಲ್ ಸಿಸ್ಟಂ ಕಟ್ಟಡ ಉದ್ಘಾಟನೆ

|
Google Oneindia Kannada News

ಬೆಂಗಳೂರು, ಮಾರ್ಚ್ 17: ಕರ್ನಾಟಕ ರಾಜ್ಯವು ತನ್ನ ಸಮರ್ಥ ಹಾಗೂ ದಕ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪ್ರಗತಿ ಸಾಧಿಸುತ್ತಿದ್ದು, ಅತಿ ಶೀಘ್ರದಲ್ಲಿಯೇ ವಿಶ್ವದಲ್ಲಿ ತನ್ನ ಅಸ್ಮಿತೆಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

ಇಂದು ಬೆಂಗಳೂರನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಫ್ಲೈಟ್ ಕಂಟ್ರೋಲ್ ಸಿಸ್ಟಮ್ ಕಾಂಪ್ಲೆಕ್ಸ್ ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, ದೇಶದ ಪ್ರಗತಿಗೆ ಸಂಬಂಧಿಸಿದಂತೆ ಬೊಮ್ಮಾಯಿ ಅವರಿಗಿರುವ ಬದ್ಧತೆ ಪ್ರಶ್ನಾತೀತವಾಗಿದೆ ಎಂದರು.

ಕರ್ನಾಟಕ ಹೃದಯಕ್ಕೆ ಹತ್ತಿರ
ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರು ಯಾವಾಗಲೂ ನಮ್ಮ ಹೃದಯಕ್ಕೆ ಬಹಳ ಹತ್ತಿರ. ಈ ರಾಜ್ಯ ವಿಶಾಲವಾದ ಆಲದ ಮರವಿದ್ದಂತೆ. ತನ್ನ ಸಂಸ್ಕೃತಿ ಹಾಗೂ ಪರಂಪರೆಯ ಬೇರುಗಳನ್ನು ನೆಲದಾಳಕ್ಕೆ ಬಿಟ್ಟಿದ್ದರೆ, ಆಧುನಿಕ ತಂತ್ರಜ್ಞಾನ ಅಭಿವೃದ್ಧಿಗೆ ಪ್ರಮುಖ ಕೇಂದ್ರವೂ ಆಗಿದ್ದು, ಆಕಾಶದೆತ್ತರಕ್ಕೆ ತನ್ನ ಶಾಖೆಗಳನ್ನು ಚಾಚಿದೆ ಎಂದು ಬಣ್ಣಿಸಿದರು.

Inauguration of DRDOs Flight Control System Building Which Construction in 45 Days


ಎಫ್.ಸಿ.ಎಸ್ ಟ್ಟಡವನ್ನು ಅತ್ಯುತ್ತಮವಾಗಿ ಶ್ರದ್ಧೆಯಿಂದ ಕಟ್ಟಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕೇವಲ 45 ದಿನಗಳಲ್ಲಿ ಕಟ್ಟಡ ನಿರ್ಮಾಣವಾಗಿರುವುದು ಶ್ಲಾಘನೀಯ ಎಂದು ಹೇಳಿದರು.

ಬೆಂಗಳೂರು ರಕ್ಷಣಾ ವಲಯದ ಅಗತ್ಯಗಳನ್ನು ಪೂರೈಸುವ ಪ್ರಮುಖ ಕೇಂದ್ರವಾಗಲಿದೆ; ಸಿಎಂ ಬೊಮ್ಮಾಯಿ
ಬೆಂಗಳೂರು ನಗರವು ದೇಶದಲ್ಲಿ ರಕ್ಷಣಾ ವಲಯದ ಅಗತ್ಯಗಳನ್ನು ಪೂರೈಸುವ ಪ್ರಮುಖ ಕೇಂದ್ರವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Inauguration of DRDOs Flight Control System Building Which Construction in 45 Days

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಫ್ಲೈಟ್ ಕಂಟ್ರೋಲ್ ಸಿಸ್ಟಮ್ ಕಾಂಪ್ಲೆಕ್ಸ್ ಉದ್ಘಾಟನೆಯ ಕೇಂದ್ರ ರಕ್ಞಣಾ ಸಚಿವ ರಾಜನಾಥ್ ಸಿಂಗ್ ಪಾಲ್ಗೊಂಡ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಬೆಂಗಳೂರಿನಲ್ಲಿ 180ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಿವೆ. ರಕ್ಷಣಾ ವಲಯ ಹಾಗೂ ಖಾಸಗಿ ವಲಯದ ಸಂಶೋಧನಾ ಕೇಂದ್ರಗಳಿವೆ. ಕೌಶಲ್ಯಭರಿತ ಮಾನವ ಸಂಪನ್ಮೂಲ ಈ ಕ್ಷೇತ್ರದಲ್ಲಿದೆ. ರಕ್ಷಣಾ ಉತ್ಪಾದನೆ, ಸೆಮಿ ಕಂಡಕ್ಟರ್ ಕೈಗಾರಿಕೆಗಳಿಗೆ ಒತ್ತು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ನೆರವು ಒದಗಿಸುವಂತೆ ಕೇಂದ್ರ ರಕ್ಷಣಾ ಸಚಿವರಲ್ಲಿ ಮನವಿ ಮಾಡಿದರು.

ಡಿಆರ್‌ಡಿಓ ಸಂಶೋಧನೆಗಳ ಮುಂಚೂಣಿ ಸಂಸ್ಥೆ
ರಕ್ಷಣಾ ವಲಯ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಮಂತ್ರಿಯವರ ನಾಯಕತ್ವದಲ್ಲಿ ಮುಂಚೂಣಿಯಲ್ಲಿದ್ದು, ದೇಶ ಸುರಕ್ಷಿತವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ವಿದ್ಯಮಾನಗಳು ನಡೆಯುತ್ತಿದ್ದು, ವಿಶ್ವ ಭಾರತದ ಮಾರ್ಗದರ್ಶನವನ್ನು ನಿರೀಕ್ಷಿಸುತ್ತಿದೆ. ಇದಕ್ಕೆ ಕಾರಣ ನಮ್ಮ ದೇಶದ ಸುಭದ್ರ ಹಾಗೂ ಬಲಿಷ್ಟ ರಕ್ಷಣಾ ವಲಯ. ಡಿಆರ್‌ಡಿಓ ನಡೆಸುವ ಸಂಶೋಧನೆ ಹಾಗೂ ಪರೀಕ್ಷೆಗಳು ಯಶಸ್ವಿಯಾಗಿ, ದೇಶದ ಶಕ್ತಿಯನ್ನು ವೃದ್ಧಿಸಲು ಹಾಗೂ ಬಲಿಷ್ಠಗೊಳಿಸುವಲ್ಲಿ ಸಹಕರಿಸಲಿದೆ. ಡಿಆರ್‌ಡಿಓ ಎಲ್ಲ ಸಂಶೋಧನೆಗಳಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

Inauguration of DRDOs Flight Control System Building Which Construction in 45 Days

ಎಫ್‌ಸಿಎಸ್ ಕಟ್ಟಡ ಒಂದು ಚಮತ್ಕಾರ
ಫ್ಲೈಟ್ ಕಂಟ್ರೋಲ್ ಸಿಸ್ಟಮ್ ಕಾಂಪ್ಲೆಕ್ಸ್ ಮಾದರಿ ಹಾಗೂ ಅದರ ತಂತ್ರಜ್ಞಾನವನ್ನು ಬಳಸಿ ರಾಜ್ಯದಲ್ಲಿ ನಿರ್ಮಾಣ ಕಾರ್ಯಗಳನ್ನು ಮಾಡುವ ಮೂಲಕ ಸಂಪನ್ಮೂಲ ಹಾಗೂ ಸಮಯದ ಮಿತವ್ಯಯ ಮಾಡಬಹುದಾಗಿದೆ. ನವಭಾರತಕ್ಕಾಗಿ ನವ ಕರ್ನಾಟಕ ನಿರ್ಮಿಸುವ ಸರ್ಕಾರದ ಆಶಯದಲ್ಲಿ ಡಿಆರ್‌ಡಿಓ ಸಹಕಾರ ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಕೇವಲ 45 ದಿನಗಳಲ್ಲಿ ನಿರ್ಮಿಸಿರುವ ಫ್ಲೈಟ್ ಕಂಟ್ರೋಲ್ ಸಿಸ್ಟಂ ಒಂದು ಚಮತ್ಕಾರವಾಗಿದೆ. ಒಂದು ಟೆಂಡರ್ ಪ್ರಕ್ರಿಯೆ ಅವಧಿಯಲ್ಲಿ 6 ಮಹಡಿ ಕಟ್ಟಡವನ್ನು ಕಟ್ಟಿರುವುದು ಯಾವುದೇ ಚಮತ್ಕಾರಕ್ಕಿಂತಲೂ ಕಡಿಮೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ಆತ್ಮನಿರ್ಭರತೆ
ಯೋಜನೆಯೂ ಸೇರಿದಂತೆ ಈ ಕಟ್ಟಡ ನಿರ್ಮಾಣಕ್ಕೆ 65 ದಿನಗಳೊಳಗಾಗಿ ಅತ್ಯುತ್ತಮ ಕಟ್ಟಡವನ್ನು ನಿರ್ಮಿಸಲಾಗಿದೆ. ರಕ್ಷಣಾ ಉತ್ಪಾದನೆಯಲ್ಲಿ ಆತ್ಮನಿರ್ಭರತೆಗೆ ಕರೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸು ಇಂದು ನನಸಾಗಿದೆ. ಖಾಸಗಿಯವರೊಂದಿಗೆ ಸಮನ್ವಯ, ತಂತ್ರಜ್ಞಾನ, ಆರ್ ಅಂಡ್ ಡಿ ಮುಂತಾವುಗಳನ್ನು ಖಾಸಗಿ ವಲಯದಲ್ಲಿ ಬಳಕೆ ಮಾಡಬಹುದು ಎಂದರು.

ರಕ್ಷಣಾ ಸಚಿವರ ಬದ್ಧತೆ
ವಿಶ್ವದಲ್ಲಿಯೇ ಅತ್ಯಂತ ದಕ್ಷ ನಿರ್ಮಾಣ ಸಂಸ್ಥೆಯಾಗಿರುವ ಎಲ್ ಆಂಡ್ ಟಿ ಸಂಸ್ಥೆಯು ರಕ್ಷಣಾ ಸಂಸ್ಥೆಗಳ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ರಾಜನಾಥ್ ಸಿಂಗ್ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುವವರು. ನುಡಿದಂತೆ ನಡೆಯುವ ಸ್ವಭಾವದವರು. ಭಾರತಕ್ಕೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿಯೂ ಅವರು ರಾಜಿ ಮಾಡಿಕೊಳ್ಳುವುದಿಲ್ಲ. ಇದು ಭಾರತದಂಥ ದೊಡ್ಡ ದೇಶಗಳಿಗೆ ಅಗತ್ಯವೂ ಹೌದು. ಅವರ ಬದ್ಧತೆಯಿಂದ ಈ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.

Recommended Video

Virat Kohli ಬಗ್ಗೆ ಖಡಕ್ ವಾರ್ನಿಂಗ್ ಕೊಟ್ಟ Glenn Maxwell | Oneindia Kannada

English summary
Union Defense Minister Rajanath Singh inaugurated Defense Research and Development Organization's Flight Control System Complex in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X