ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಟಿ ರೈಲ್ವೆ ನಿಲ್ದಾಣಕ್ಕೆ ಸ್ವಯಂ ಚಾಲಿತ ಟಿಕೆಟ್ ಯಂತ್ರ

By Mahesh
|
Google Oneindia Kannada News

ಬೆಂಗಳೂರು, ಅ.30: ನಗರದ ರೈಲು ನಿಲ್ದಾಣದಲ್ಲಿ ಸ್ವಯಂ ಚಾಲಿತ ಟಿಕೆಟ್ ವಿತರಿಸುವ ಯಂತ್ರ (ಎಪಿವಿಎಂ) ಗಳಿಗೆ ಚಾಲನೆ ನೀಡಲಾಗಿದೆ. ಇದರಿಂಡಾಗಿ ಪ್ಯಾಸೆಂಜರ್ ಎಕ್ಸ್‌ಪ್ರೆಸ್ ಹಾಗೂ ಸೂಪರ್ ಫಾಸ್ಟ್ ರೈಲಿನ ಟಿಕೆಟ್ ಪಡೆಯಲು ಉಂಟಾಗುತ್ತಿದ್ದ ನೂಕು ನುಗ್ಗಲು ತಪ್ಪುತ್ತದೆ. ಪ್ರಯಾಣಿಕರು ಸುಲಭವಾಗಿ ಟಿಕೆಟ್ ಪಡೆದುಕೊಳ್ಳಬಹುದಾಗಿದೆ.

ನಗರದ ರೈಲು ನಿಲ್ದಾಣದಲ್ಲಿ ನಾಲ್ಕು ಎಪಿವಿಎಂ ಯಂತ್ರಗಳಿಗೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂಜೀವ್ ಅಗರ್‌ವಾಲ್ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿ, ದೇಶದ ಯಾವುದೇ ಭಾಗಕ್ಕೆ ಬೇಕಾದರೂ ಈ ಯಂತ್ರದ ಮೂಲಕ ಕಾಯ್ದಿರಿಸದ ಟಿಕೆಟ್‌ಗಳನ್ನು ಕ್ಷಣಮಾತ್ರದಲ್ಲಿ ಪಡೆಯಬಹುದು. ಇದಕ್ಕಾಗಿ ಕನಿಷ್ಟ 100 ರೂ. ನಿಂದ 5 ಸಾವಿರ ರೂ. ಮೊತ್ತದ ಸ್ಮಾರ್ಟ್ ಕಾರ್ಡ್‌ಗಳನ್ನು ಇಲಾಖೆ ಪರಿಚಯಿಸಿದ್ದು, ಅದರ ಮೂಲಕ ಟಿಕೆಟ್ ಪಡೆಯಬಹುದಾಗಿದೆ.

ATVM and Mobile Charging Unit Bengaluru City Railway Station

ಸ್ಮಾರ್ಟ್ ಕಾರ್ಡ್ ಕೊಂಡ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ಶೇ. 5 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಈ ಕಾರ್ಡ್ ಒಂದು ವರ್ಷದ ಅವಧಿಯದ್ದಾಗಿದ್ದು, ಕೊಂಡ ಸ್ಮಾರ್ಟ್ ಕಾರ್ಡ್ ಬೇಡವೆಂದು ವಾಪಸ್ ಮಾಡಿದರೆ, ಅದರ ಬೆಲೆಯ ಅರ್ಧದಷ್ಟು ಹಣವನ್ನು ವಾಪಸ್ ನೀಡಲಾಗುವುದು ಎಂದು ಹೇಳಿದರು.

ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ 4 ಟಿಕೆಟ್ ನೀಡುವ ಯಂತ್ರಗಳೂ ಸೇರಿದಂತೆ, ಹತ್ತು ಯಂತ್ರಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಯಶವಂತಪುರ, ಕಂಟೋನ್‌ಮೆಂಟ್, ತುಮಕೂರು, ಮಂಡ್ಯ ಸೇರಿದಂತೆ, ಬೆಂಗಳೂರು ವಿಭಾಗದಲ್ಲಿ ಬರುವ ರೈಲು ನಿಲ್ದಾಣಗಳಲ್ಲಿ ಈ ಯಂತ್ರಗಳನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು.

ನಗರ ರೈಲ್ವೆ ನಿಲ್ದಾಣ 13ನೇ ಕೌಂಟರ್‌ನಲ್ಲಿ ಸ್ಮಾರ್ಟ್ ಕಾರ್ಡ್ ದೊರೆಯಲಿದ್ದು, ಸ್ಮಾರ್ಟ್ ಕಾರ್ಡ್‌ನಲ್ಲಿರುವ ಮೊತ್ತ ಖಾಲಿಯಾದ ನಂತರ ಅಲ್ಲೇ ರೀಚಾರ್ಜ್ ಮಾಡಿಸಿಕೊಳ್ಳಬಹುದು ಎಟಿವಿಎಂ ಯಂತ್ರಗಳ ಪರದೆಯಲ್ಲಿ ಕಾಣುವ ಭೂಪಟದಲ್ಲಿ ಎಲ್ಲಾ ರೈಲು ನಿಲ್ದಾಣಗಳ ಹೆಸರುಗಳಿವೆ. ಪ್ರಯಾಣಿಕರು ಯಾವ ಸ್ಥಳಕ್ಕೆ ಹೋಗಬೇಕು ಎನ್ನುವ ಗುರುತಿನ ಮೇಲೆ ಬಟನ್ ಒತ್ತಿದರೆ ಸಾಕು. ಅತಿ ಬೇಗ ಟಿಕೆಟ್ ಸಿಗಲಿದೆ. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

English summary
Automatic Ticket Vending Machine and a Mobile charging unit inaugurated at Bengaluru city Railway Station. Soon this facility will be extended to Yeshwanthpur, KR Puram and other Stations said Manager Sanjeev Agarwal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X