ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಕ್ಟೋರಿಯಾ ಆಸ್ಪತ್ರೆಯಲ್ಲಿ 12 ಗಂಟೆಯಲ್ಲಿ 71 ಮಂದಿ ಕೊರೊನಾ ಸೋಂಕಿತರ ಸಾವು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 18: ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ 12 ಗಂಟೆಯಲ್ಲಿ 71 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.

ಈ ಮಾಹಿತಿ ಆಸ್ಪತ್ರೆಯ ರೋಗಿಗಳ ಕೋವಿಡ್ ಮರಣ ವಿಶ್ಲೇಷಣೆಯಿಂದ ಲಭ್ಯವಾಗಿದೆ.32 ಮಂದಿ ರೋಗಿಗಳು ಆಸ್ಪತ್ರೆಗೆ ದಾಖಲಾದ 24 ಗಂಟೆಗಳೊಳಗೆ ಸಾವನ್ನಪ್ಪಿದ್ದಾರೆ.

ಕೊವಿಡ್ ಲಸಿಕೆ ಪ್ರಯೋಗದ ನೀಲನಕ್ಷೆ ಹಂಚಿಕೊಂಡ ಮಾಡೆರ್ನಾ, ಪಿಫೈಜರ್ಕೊವಿಡ್ ಲಸಿಕೆ ಪ್ರಯೋಗದ ನೀಲನಕ್ಷೆ ಹಂಚಿಕೊಂಡ ಮಾಡೆರ್ನಾ, ಪಿಫೈಜರ್

ಕರ್ನಾಟಕದಲ್ಲಿ ಸಾಂಕ್ರಾಮಿಕ ರೋಗದ ಮೊದಲ ಮೂರು ತಿಂಗಳು ಬೆಂಗಳೂರಿನಲ್ಲಿ ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಮತಿ ನೀಡಲಾಗಿದ್ದ ಏಕೈಕ ಆಸ್ಪತ್ರೆಯಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ವರೆಗೂ 370 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಈ ಪೈಕಿ 71 ಮಂದಿ ಸೋಂಕಿತರು ಆಸ್ಪತ್ರೆಗೆ ದಾಖಲಾದ 12 ಗಂಟೆಗಳಲ್ಲಿಯೇ ಸಾವನ್ನಪ್ಪಿದ್ದಾರೆ.

10-12 ಗಂಟೆಯಲ್ಲಿ 71 ಮಂದಿ ಸಾವು

10-12 ಗಂಟೆಯಲ್ಲಿ 71 ಮಂದಿ ಸಾವು

ಆಸ್ಪತ್ರೆಗೆ ದಾಖಲಾದ 10 ರಿಂದ 12 ಗಂಟೆಗಳ ಅವಧಿಯಲ್ಲಿ ಸಾವು ಸಂಭವಿಸಿದೆ ಎಂಬ ಮಾತ್ರಕ್ಕೆ ಅದು ಆಸ್ಪತ್ರೆಯ ಐಸಿಯುನಲ್ಲಿ ಸಂಭವಿಸಿದ ಸಾವುಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ.ಸ್ಮಿತಾ ಸೆಗು ಹೇಳಿದ್ದಾರೆ.

5 ಸಾವಿರಕ್ಕೂ ಅಧಿಕ ಮಂದಿಗೆ ಚಿಕಿತ್ಸೆ

5 ಸಾವಿರಕ್ಕೂ ಅಧಿಕ ಮಂದಿಗೆ ಚಿಕಿತ್ಸೆ

ರಾಜ್ಯದ ಅತಿ ದೊಡ್ಡ ಮತ್ತು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಈ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 5,000 ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.ಈ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆ ಆಡಳಿತ ಮಂಡಳಿ, ಸಾವಿಗೀಡಾದ ಬಹುತೇಕ ರೋಗಿಗಳು ಇತರೆ ಖಾಸಗಿ ಆಸ್ಪತ್ರೆ ಮತ್ತು ಕಾರ್ಪೋರೇಟ್ ಆಸ್ಪತ್ರೆಗಳ ಅಂತಿಮ ಕ್ಷಣದ ಶಿಫಾರಸ್ಸಿನ ಮೇರೆಗೆ ಆಸ್ಪತ್ರೆಗೆ ದಾಖಲಾದವರಾಗಿದ್ದಾರೆ.

2ನೇ ಹಂತದ ನ್ಯುಮೋನಿಯಾದಿಂದ ಬಳಲುತ್ತಿದ್ದರು

2ನೇ ಹಂತದ ನ್ಯುಮೋನಿಯಾದಿಂದ ಬಳಲುತ್ತಿದ್ದರು

ಆಸ್ಪತ್ರೆಗೆ ದಾಖಲಾದಾಗ ಅವರೆಲ್ಲರೂ 2ನೇ ಹಂತದ ಕೊವಿಡ್ ನ್ಯುಮೋನಿಯಾ ಮತ್ತು ಸೆಪ್ಟಿಸೆಮಿಯಾ ಮುಂತಾದ ತೀವ್ರ ಸ್ಥಿತಿಯ ಅನಾರೋಗ್ಯದ ಪರಿಸ್ಥಿತಿಯಲ್ಲಿದ್ದರು ಎಂದು ತಿಳಿಸಿದೆ.

Recommended Video

PPE kit ಹಾಕೊಂಡೆ Airport ಗೆ ಬಂದ ವಾರ್ನರ್!! | Oneindia Kannada
ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು

ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು

ಆರಂಭಿಕ ಹಂತದಲ್ಲಿ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಂತಿಮ ಕ್ಷಣದಲ್ಲಿ ಇಲ್ಲಿಗೆ ದಾಖಲಾದವರಾಗಿದ್ದಾರೆ. ಕರ್ನಾಟಕದಲ್ಲಿ ಸಾಂಕ್ರಾಮಿಕ ರೋಗದ ಮೊದಲ ಮೂರು ತಿಂಗಳು ಬೆಂಗಳೂರಿನಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಮತಿ ನೀಡಲಾಗಿದ್ದ ಏಕೈಕ ಆಸ್ಪತ್ರೆಯಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ವರೆಗೂ 370 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಈ ಪೈಕಿ 71 ಮಂದಿ ಸೋಂಕಿತರು ಆಸ್ಪತ್ರೆಗೆ ದಾಖಲಾದ 12 ಗಂಟೆಗಳಲ್ಲಿಯೇ ಸಾವನ್ನಪ್ಪಿದ್ದಾರೆ.

English summary
Covid mortality analysis of patients in Victoria Hospital found that of 370 deaths due to Covid-19, 71 were within 12 hours of admission and 32 were within 24 hours of admission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X