ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2 ದಿನ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಅಲ್ಲಲ್ಲಿ ಸಾಧಾರಣ ಮಳೆ ಸಾಧ್ಯತೆ

|
Google Oneindia Kannada News

ಬೆಂಗಳೂರು, ಜೂನ್ 20: ಇನ್ನೆರೆಡು ದಿನ ಬೆಂಗಳೂರಲ್ಲಿ ಮೋಡಕವಿದ ವಾತಾವರಣ ಮುಂದುವರೆಯಲಿದ್ದು ಅಲ್ಲಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಬುಧವಾರ ನಗರ ಕೇಂದ್ರ ಭಾಗದಲ್ಲಿ1.2 ಮಿ.ಮೀನಷ್ಟು ಮಳೆಯಾಗಿದೆ. ಕೆಂಗೇರಿ, ಉತ್ತರಹಳ್ಳಿ, ಜಯನಗರ ಸಮೀಪ ಸ್ವಲ್ಪ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಅದರ ಪರಿಣಾಮ ರಾಜ್ಯದ ಕೆಲವೆಡೆ ಮಳೆಯಾಗಲಿದೆ.

ಕೊಡಗಿನಲ್ಲಿ ಗುರುವಾರದಿಂದ ಮಳೆ ಹೆಚ್ಚು: ಜಿಲ್ಲಾಡಳಿತ ಎಚ್ಚರಿಕೆಕೊಡಗಿನಲ್ಲಿ ಗುರುವಾರದಿಂದ ಮಳೆ ಹೆಚ್ಚು: ಜಿಲ್ಲಾಡಳಿತ ಎಚ್ಚರಿಕೆ

ಕೇರಳ ಭಾಗದಿಂದ ಮುಂಗಾರು ಮಳೆ ಬಲಿಷ್ಠವಾಗುವ ಸಾಧ್ಯತೆ ಕಡಿಮೆ ಇದೆ.ಬಂಗಾಳ ಕೊಲ್ಲಿಯಲ್ಲಿ ಆಗಿರುವ ವಾಯುಭಾರ ಕುಸಿತ ಬಲಗೊಂಡರೆ ಈ ಭಾಗದ ಮೋಡಗಳನ್ನು ತನ್ನತ್ತ ಸೆಳೆದುಕೊಳ್ಳಲಿದೆ ಆಗ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

In two days generally cloudy sky light rain very likely in some areas

ಬುಧವಾರ ಆಗುಂಬೆಯಲ್ಲಿ 10 ಸೆಂ.ಮೀ, ಸಿದ್ದಾಪುರದಲ್ಲಿ 7 ಸೆಂ.ಮೀ, ಪಣಂಬೂರು, ಉಪ್ಪಿನಂಗಡಿ, ಮಾಣಿ, ಸುಬ್ರಹ್ಮಣ್ಯದಲ್ಲಿ ತಲಾ 5 ಸೆಂಮೀ, ಹೊನ್ನಾವರ, ಗೇರುಸೊಪ್ಪದಲ್ಲಿ 4 ಸೆಂಮೀ, ಮಂಗಳೂರು, ಕೋಟಾ, ಕಾರ್ಕಳ, ಉಡುಪಿ, ಭಾಗಮಂಡಲ, ಲೋಂಡಾದಲ್ಲಿ ತಲಾ 3 ಸೆಂ.ಮೀನಷ್ಟು ಮಳೆಯಾಗಿದೆ.

ಇನ್ನೆರೆಡು ದಿನ ರಾಜ್ಯದಲ್ಲಿ ಮಳೆ ಬರುವ ಯಾವ ಲಕ್ಷಣಗಳೂ ಇಲ್ಲ ಇನ್ನೆರೆಡು ದಿನ ರಾಜ್ಯದಲ್ಲಿ ಮಳೆ ಬರುವ ಯಾವ ಲಕ್ಷಣಗಳೂ ಇಲ್ಲ

ಬೆಂಗಳೂರು ಕೇಂದ್ರ ಭಾಗದಲ್ಲಿ 32.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ಕನಿಷ್ಠ 22.2 ಡಿಗ್ರಿ ಸೆಲ್ಸಿಯಸ್, ಕೆಐಎಎಲ್‌ನಲ್ಲಿ ಗರಿಷ್ಠ 32.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 32.8 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.4 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.

English summary
In two days generally cloudy skylight rain very likely in some areas, Maximum and minimum temperature very likely to be around 32 and 22-degree Celsius in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X