ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೆಕ್ಕಿಗಳೇ ಹುಷಾರ್, ವಂಚಕರು ನಿಮ್ಮ ಆಸುಪಾಸೇ ಇರಬಹುದು

|
Google Oneindia Kannada News

ಬೆಂಗಳೂರು, ಮೇ 29: ಡಿಜಿಟಲ್ ಇಂಡಿಯಾ ಹೆಸರಿನಲ್ಲಿ ಟೆಕ್ಕಿಗಳಿಗೆ ಕೋಟಿಗಟ್ಟಲೆ ವಂಚಿಸಿ ಓಡಿ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಂಪತಿ ವಿರುದ್ಧ ಸರಣಿ ದೂರುಗಳು ದಾಖಲಾಗಿವೆ. ಚಿಕ್ಕಲಸಂದ್ರ ನಿವಾಸಿಗಳಾ ಎಚ್‌ ಎಸ್ ವಿನಯ್ ಮತ್ತು ಕೃತಿಕಾ ದಂಪತಿ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ರಾಜ್ಯ ಸರ್ಕಾರದ ಜ್ಞಾನಸಿರಿ, ಬೆಂಗಳೂರು ಸಿಎಲ್‌ಪಿ ಕ್ಲಸ್ಟರ್ ಹಾಗೂ ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಹೆಸರಿಲ್ಲಿ ಹಲವಾರು ಮಂದಿಯಿಂದ ದಂಪತಿ ಕೋಟ್ಯಂತರ ಹಣ ಲೂಟಿ ಮಾಡಿದ್ದಾರೆ.

ಸಂಶಯ ಪೀಡಿತ ಟೆಕ್ಕಿ ಪತಿಗೆ ಬುದ್ಧಿಕಲಿಸಲು ಪತ್ನಿ ಮಾಡಿದ್ದೇನು? ಸಂಶಯ ಪೀಡಿತ ಟೆಕ್ಕಿ ಪತಿಗೆ ಬುದ್ಧಿಕಲಿಸಲು ಪತ್ನಿ ಮಾಡಿದ್ದೇನು?

ಸಚಿವರು, ವಿಧಾನಸೌಧ , ಸಚಿವಾಲಯ ಅಧಿಕಾರಿಗಳೂ ಸೇರಿದಂತೆ ಐಟಿ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಲಂಚ ಕೊಡಬೇಕಿದೆ ಎಂದು ಸುಳ್ಳು ಹೇಳಿ ಹಣ ಲಪಟಾಯಿಸುತ್ತಿದ್ದರು.

In the name Digital india techies losts crores together

ಇನ್ಫೋಸಿಸ್ ಮತ್ತು ಎಕ್ಸೆಲ್ ಕಂಪನಿಯಲ್ಲಿ ಸೀನಿಯರ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ಪ್ರಭಾಕರ ಶೆಟ್ಟಿ ವಂಚನೆಗೆ ಒಳಗಾದವರಲ್ಲಿ ಒಬ್ಬರು. ಇದೀಗ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.

ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿನಯ್ ಬಿಜಿನೆಸ್ ಮಾಡುತ್ತೇನೆ ಎಂದು ಕೆಲಸಕ್ಕೆ ರಾಜೀನಾಮೆ ನೀಡಿದ್ದ, ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದ, ಆ ಮಾಹಿತಿ ಇಟ್ಟುಕೊಂಡು ಹೇಗೆ ವಂಚಸಬಹುದು ಎನ್ನುವುದು ಆತನ ಆಲೋಚನೆಯಾಗಿತ್ತು ಆದರೆ ಇದು ಯಾರಿಗೂ ತಿಳಿಯಲೇ ಇಲ್ಲ, ಆತನನ್ನು ನಂಬಿ ಕೋಟ್ಯಂತರ ರೂ ಹಣ ಸುರಿದವರ ಕೈಗೆ ಚಿಪ್ಪು ಕೊಟ್ಟು ಓಡಿಹೋಗಿದ್ದಾರೆ.

English summary
A software engineer from reputed company cheated crores of rupees In the name Digital india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X