ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀವು ಟ್ರಿಪ್ ಕ್ಯಾನ್ಸಲ್ ಮಾಡಿ, ನಾನು ಹಾಗೆಯೇ ಡ್ರಾಪ್ ಕೊಡ್ತೀನಿ ಎಂದ ಊಬರ್ ಡ್ರೈವರ್

|
Google Oneindia Kannada News

ಬೆಂಗಳೂರು, ಮೇ 2: ರಿಶಿ ಭಾಟಿಯಾ ಎನ್ನುವವರು ಪತ್ನಿ ಹಾಗೂ ಮಗುವಿನೊಂದಿಗೆ ಹೊರಟಿದ್ದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಬೇಕಿತ್ತು.

ರಾತ್ರಿ 10 ಗಂಟೆ ಸುಮಾರಿಗೆ ಊಬರ್ ಬುಕ್ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಕ್ಯಾಬ್ ಕೂಡ ಬಂದಿತ್ತು. ಕಾರು ಹತ್ತಿ ಕುಳಿತ ಕೆಲವೇ ನಿಮಿಷಗಳಲ್ಲಿ ಚಾಲಕನ ವರಸೆ ಆರಂಭವಾಗಿದೆ.

ಓಲಾಗೆ ಹೊಡೆತ! ಆರು ತಿಂಗಳು ಕರ್ನಾಟಕದಲ್ಲಿ ಕ್ಯಾಬ್ ನಿಷೇಧ ಓಲಾಗೆ ಹೊಡೆತ! ಆರು ತಿಂಗಳು ಕರ್ನಾಟಕದಲ್ಲಿ ಕ್ಯಾಬ್ ನಿಷೇಧ

ನೀವು ಊಬರ್ ಟ್ರಿಪ್ ಕ್ಯಾನ್ಸಲ್ ಮಾಡಿಬಿಡಿ ನಾನು ಹಾಗೆಯೇ ನಿಮ್ಮನ್ನು ಏರ್‌ಪೋರ್ಟ್‌ ಟ್ರಾಪ್ ಮಾಡುತ್ತೇನೆ ಇದರಿಂದ ಊಬರ್ ಕಂಪನಿಗೆ ನೀಡುವ ಶೇ.25 ರಷ್ಟು ಹಣ ನನಗೆ ಉಳಿತಾಯವಾಗುತ್ತೆ ಎಂದು ಒತ್ತಾಯಿಸಿದ್ದ.

In the middle of nowhere, forced out of Uber ride

ನೀವು ಇಲ್ಲಿಯೇ ಕಾರು ನಿಲ್ಲಿಸಿ ನಾವು ಬೇರೆ ಕ್ಯಾಬ್ ಬುಕ್ ಮಾಡುತ್ತೇವೆ ಎಂದರೂ ಕೇಳದೆ, ಎಸಿಯನ್ನು ಆಫ್ ಮಾಡಿ, ಕಾರಿನ ಗ್ಲಾಸ್‌ಗಳನ್ನು ಮೇಲಕ್ಕೇರಿಸಿದ, ಮಗು ಹಾಗೂ ನಮಗೆ ಉಸಿರುಗಟ್ಟುವಂತಹ ಸ್ಥಿತಿ ನಿರ್ಮಾಣವಾಗಿತ್ತು.ನಿಜಕ್ಕೂ ಭಯಾನಕವಾಗಿತ್ತು ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಓಲಾ ಚಾಲಕ ಮಿಸ್ಸಿಂಗ್: ಪೊಲೀಸರ ತಲಾಶ್ ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಓಲಾ ಚಾಲಕ ಮಿಸ್ಸಿಂಗ್: ಪೊಲೀಸರ ತಲಾಶ್

ದಂಪತಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು, ಏರ್‌ಪೋರ್ಟ್ ಬರುವ ಮೊದಲೇ ಗಾಡಿಯಿಂದ ಸಾಮಾನುಗಳನ್ನು ಇಳಿಸಿ ಡ್ರೈವರ್ ಅಲ್ಲಿಂದ ಕಾಲ್ಕಿತ್ತಿದ್ದ, ಬಳಿಕ ಊಬರ್‌ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

English summary
Questions over safety of travelling in Uber cabs came to the fore once again after a Uber driver left a family in the middle of the road for declining to utilise his service outside the ambit of the app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X