• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಕೀಯದಲ್ಲಿ ಯಾರೂ ಧರ್ಮರಾಯನೂ ಅಲ್ಲ, ಸತ್ಯ ಹರಿಶ್ಚಂದ್ರನೂ ಅಲ್ಲ

|

ಬೆಂಗಳೂರು, ಜುಲೈ 24: ವೈದ್ಯಕೀಯ ಉಪಕರಣ ಖರೀದಿಯ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಆರೋಪ, ಪ್ರತ್ಯಾರೋಪಕ್ಕೆ, ಬಿಜೆಪಿಗೆ ವಲಸೆ ಬಂದಿರುವ ಎಂ.ಟಿ.ಬಿ ನಾಗರಾಜ್ ಧ್ವನಿಗೂಡಿಸಿದ್ದಾರೆ.

   40 ಸಾವಿರ ಸೈನಿಕರಿಗೆ ಶಸ್ತ್ರಾಸ್ತ್ರ ಕೊಟ್ಟು ಕಳುಹಿಸಿದ ಚೀನಾ | Oneindia Kannada

   ಬೆಂಗಳೂರು ಗ್ರಾಮಾಂತರ ಹೊಸಕೋಟೆಯ ತಾವರೆಕೆರೆಗೆ ಬಾಗಿನ ಅರ್ಪಿಸಿ ಮಾತನಾಡುತ್ತಿದ್ದ ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ, "ಯಾವ ಮುಖ್ಯಮಂತ್ರಿಗಳ ಅವಧಿಯಲ್ಲಿ ಏನೇನು ಭ್ರಷ್ಟಾಚಾರ, ಎಷ್ಟೆಷ್ಟು ಅಕ್ರಮ ನಡೆದಿದೆ ಎನ್ನುವುದು ನಮಗೆ ಗೊತ್ತಿದೆ"ಎಂದು ಹೇಳಿದ್ದಾರೆ.

   ಸಿದ್ದರಾಮಯ್ಯ ಆರೋಪ: ಸಿಎಂ ಯಡಿಯೂರಪ್ಪ ಗಲಿಬಿಲಿ ಯಾಕೆ?

   "ನನ್ನ ನಾಲ್ಕು ದಶಕಗಳ ಸುದೀರ್ಘ ರಾಜಕೀಯದಲ್ಲಿ ಎಲ್ಲಾ ಪಕ್ಷದವರನ್ನು ನೋಡಿದ್ದೇನೆ. ರಾಜಕೀಯ ಮಾಡುವುದು ಬೇಡ ಎಂದು ನಾನು ಹೇಳುವುದಿಲ್ಲ. ಆದರೆ, ಅದಕ್ಕೆ ಸಮಯ ಸಂದರ್ಭ ಎನ್ನುವುದು ಬೇಕಲ್ಲವೇ"ಎಂದು ವಿರೋಧ ಪಕ್ಷದವರನ್ನು ಎಂ.ಟಿ.ಬಿ ನಾಗರಾಜ್ ಪ್ರಶ್ನಿಸಿದ್ದಾರೆ.

   "ಒಂದಂತೂ ನಿಜ. ರಾಜಕೀಯದಲ್ಲಿ ಯಾರೂ ಧರ್ಮರಾಯರು ಇಲ್ಲ, ಸತ್ಯ ಹರಿಶ್ಚಂದ್ರ ಅಥವಾ ನಳ ಮಹಾರಾಜರೂ ಇಲ್ಲ. ಈ ಆರೋಗ್ಯ ಎಮರ್ಜೆನ್ಸಿಯ ವೇಳೆ, ಎಲ್ಲರೂ ಅವರವರ ಮಿತಿಯನ್ನು ಅರಿಯಲಿ"ಎಂದು ಎಂ.ಟಿ.ಬಿ ನಾಗರಾಜ್ ಹೇಳಿದ್ದಾರೆ.

   "ನಿಮ್ಮ ಆರೋಪಗಳೆಲ್ಲಾ ನಂಬಲು ಅರ್ಹವಾದುದು ಅಲ್ಲ. ಚುನಾವಣೆಯ ವೇಳೆ ರಾಜಕೀಯ ಮಾಡಿ, ಈಗ ಯಾವ ಇಲೆಕ್ಷನ್ ಇಲ್ಲ. ವಿರೋಧ ಪಕ್ಷಗಳಾಗಿ ನಿಮ್ಮ ಜವಾಬ್ದಾರಿಯನ್ನು ಅರಿಯಿರಿ"ಎಂದು ಎಂ.ಟಿ.ಬಿ ನಾಗರಾಜ್, ಕಾಂಗ್ರೆಸ್ಸಿಗೆ ಕಿವಿಮಾತನ್ನು ಹೇಳಿದ್ದಾರೆ.

   ಕಾಂಗ್ರೆಸ್ಸಿನಿಂದ ದೂರದೂರವಾಗುತ್ತಿರುವ ಗೌಡ್ರು, ಕುಮಾರಣ್ಣ: ಬಿಜೆಪಿಯತ್ತ ಸಾಫ್ಟ್ ಕಾರ್ನರ್?

   ಕೋವಿಡ್ 19 ಉಪಕರಣ ಖರೀದಿಯಲ್ಲಿ ಸುಮಾರು 2 ಸಾವಿರ ಕೋಟಿಗೂ ರೂಪಾಯಿಗಳಿಗೂ ಅಧಿಕ ಮೊತ್ತದ ಹಗರಣ ನಡೆದಿದೆ ಎಂದು ದಾಖಲೆ ಸಮೇತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದರು.

   English summary
   In Politics No One Is Dharmaraya, Sathya Harischandra:MTB Nagaraj On Congress Allegation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X