ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳಲ್ಲಿ : ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್

By Mahesh
|
Google Oneindia Kannada News

ಬೆಂಗಳೂರು, ಮೇ.17: ಟಿಸಿಎಸ್ ಆಯೋಜನೆಯ ವಿಶ್ವ 10ಕೆ ಮ್ಯಾರಥಾನ್ ನ 8ನೇ ವಾರ್ಷಿಕ ಓಟ ಮೇ.17 ರಂದು ಗಾರ್ಡನ್ ಸಿಟಿಯಲ್ಲಿ ವರ್ಣರಂಜಿತ ತೆರೆ ಕಂಡಿದೆ.

ಸುಮಾರು 25,000ಕ್ಕೂ ಅಧಿಕ ಓಟಗಾರರನ್ನು ಕಂಡ ಮ್ಯಾರಥಾನ್ ಬೆಳಗ್ಗೆ ಕಂಠೀರವ ಸ್ಟೇಡಿಯಂನಲ್ಲಿ ಆರಂಭಗೊಂಡಿತು. ಅಥ್ಲೀಟ್ ಮಲಿಕಾ ಅಶಾಹ್ಸಾ, ಒಲಿಂಪಿಕ್ ವಿಜೇತೆ ಮೇರಿ ಜೋಸ್ ಪೆರೆಕ್ ಅವರು ಓಟಕ್ಕೆ ರಾಯಭಾರಿಯಾಗಿ ಪಾಲ್ಗೊಂಡಿದ್ದರು.

ಟಿಸಿಎಸ್ ಸಂಸ್ಥೆಯಿಂದ ಸುಮಾರು 4,000ಕ್ಕೂ ಅಧಿಕ ಉದ್ಯೋಗಿಗಳು ಕಾರ್ಪೊರೇಟ್ ರನ್ ನಲ್ಲಿ ಪಾಲ್ಗೊಂಡಿದ್ದರು. ಸುಮಾರು 194,376 ಯುಎಸ್ ಡಾಲರ್ ಒಟ್ಟಾರೆ ಪ್ರಶಸ್ತಿ ಮೊತ್ತವನ್ನು ಒಳಗೊಂಡಿದೆ. [ಟಿಸಿಎಸ್ ಮ್ಯಾರಥಾನ್ ನಲ್ಲಿ ಪಾಲ್ಗೊಂಡ್ರೆ ಏನು ಲಾಭ?]

2014ರ ಟಿಸಿಎಸ್ 10ಕೆ ಮ್ಯಾರಥಾನ್ ನಲ್ಲಿ ಸುಮಾರು 4.04 ಕೋಟಿ ರು ಸಂಗ್ರಹಿಸಿ ದಾನ ಮಾಡಲಾಗಿದೆ. 2008ರಿಂದ ಇಲ್ಲಿ ತನಕ 15.7 ಕೋಟಿ ರು ದಾನ ಧರ್ಮಕ್ಕೆ ವ್ಯಯಿಸಲಾಗಿದೆ ಎಂದು ಆಯೋಜಕರು ಹೇಳಿದ್ದಾರೆ. ಟಿಸಿಎಸ್ 10ಕೆ ಮ್ಯಾರಥಾನ್ ಚಿತ್ರಗಳು ಇಲ್ಲಿವೆ..

ಮಹಿಳಾ ಅಥ್ಲೀಟ್ ಗಳ ಓಟದ ಚಿತ್ರ

ಮಹಿಳಾ ಅಥ್ಲೀಟ್ ಗಳ ಓಟದ ಚಿತ್ರ

ಸುಮಾರು 25,000ಕ್ಕೂ ಅಧಿಕ ಓಟಗಾರರನ್ನು ಕಂಡ ಮ್ಯಾರಥಾನ್ ಬೆಳಗ್ಗೆ ಕಂಠೀರವ ಸ್ಟೇಡಿಯಂನಲ್ಲಿ ಭಾನುವಾರ ಬೆಳಗ್ಗೆ 6 ಗಂಟೆಗೆ ಆರಂಭವಾಯಿತು.

ಪರಿಸರ ಸಂರಕ್ಷಣೆ ಈ ಬಾರಿಯ ಆಶಯ

ಪರಿಸರ ಸಂರಕ್ಷಣೆ ಈ ಬಾರಿಯ ಆಶಯ

ಪರಿಸರ ಸಂರಕ್ಷಣೆ ಈ ಬಾರಿಯ ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್ ಆಶಯವಾಗಿತ್ತು. ಹೀಗಾಗಿ ಓಟಗಾರರು ಪರಿಸರ ಸಂರಕ್ಷಣೆ ಫಲಕ ಪ್ರದರ್ಶಿಸಿದರು.

ಇಥಿಯೋಪಿಯಾದ ಓಟಗಾರನಿಗೆ ಗೆಲುವು

ಇಥಿಯೋಪಿಯಾದ ಓಟಗಾರನಿಗೆ ಗೆಲುವು

ಪುರುಷರ 10ಕೆ ಮ್ಯಾರಥಾನ್ ನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಇಥಿಯೋಪಿಯಾದ ಮೊಸಿನೆಟ್ ಗೆರೆಮ್ಯೂ ಪ್ರಥಮ ಸ್ಥಾನ ಪಡೆದರು. PTI Photo by Shailendra Bhojak

ಒಲಿಂಪಿಕ್ ವಿಜೇತೆ ಮೇರಿ ಜೋಸ್ ಪೆರೆಕ್

ಒಲಿಂಪಿಕ್ ವಿಜೇತೆ ಮೇರಿ ಜೋಸ್ ಪೆರೆಕ್

ಒಲಿಂಪಿಕ್ ವಿಜೇತೆ ಮೇರಿ ಜೋಸ್ ಪೆರೆಕ್ ಅವರು ಓಟಕ್ಕೆ ರಾಯಭಾರಿಯಾಗಿ ಪಾಲ್ಗೊಂಡಿದ್ದರು.

ಹಿರಿಯರು ಕಿರಿಯರು ಜೊತೆ ಜೊತೆಗೆ

ಹಿರಿಯರು ಕಿರಿಯರು ಜೊತೆ ಜೊತೆಗೆ

ಟಿಸಿಎಸ್ ಸಂಸ್ಥೆಯಿಂದ ಸುಮಾರು 4,000ಕ್ಕೂ ಅಧಿಕ ಉದ್ಯೋಗಿಗಳು ಕಾರ್ಪೊರೇಟ್ ರನ್ ನಲ್ಲಿ ಪಾಲ್ಗೊಂಡಿದ್ದರು.

English summary
In Pics: TCS World 10K Marathon 2015: International Athlete Mosinet Geremew of Ethopia wins the Elite Men World 10k Marathon in Bengaluru on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X