• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿಗೆ ಖೇಣಿಯಿಂದ ಮೊನೋರೈಲ್

By Mahesh
|

ಬೆಂಗಳೂರಿನ ಸಾರಿಗೆ ವ್ಯವಸ್ಥೆಯನ್ನು ಬದಲಿಸಲು ನಮ್ಮ ಮೆಟ್ರೋ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ಇಲ್ಲಿನ ಸಾರಿಗೆ ವ್ಯವಸ್ಥೆಗೆ ಹೊಸ ರೂಪ ನೀಡಲು ನೈಸ್ ಸಂಸ್ಥೆ ಸಿದ್ಧವಾಗುತ್ತಿದೆ. ಇಲ್ಲಿನ ಜನರ ಪ್ರಯಾಣಕ್ಕಾಗಿ ನೈಸ್ ಮೊನೋರೈಲ್ ನ ಶುರು ಮಾಡುವ ಯೋಜನೆಗೆ ಮತ್ತೆ ಚಾಲನೆ ನೀಡಲು ಮುಂದಾಗಿದೆ.

ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ನ 41 ಕಿಮೀ. ಪೆರಿಫರಲ್ ರಿಂಗ್ ರೋಡ್ ನಲ್ಲಿ ಈ ಮೋನೋರೈಲ್ ನ ಶುರು ಮಾಡಲು ನೈಸ್ ಯೋಜನೆ ಹಾಕಿಕೊಂಡಿದೆ. ಮೆಟ್ರೋ ಓಡಾಡದ ಕೆಲವು ಜಾಗಗಳಲ್ಲಿ ಜನರಿಗಾಗಿ ಈ ಮೊನೋರೈಲ್ ಶುರುವಾಗಲಿದೆ. ನೈಸ್ ಸಂಸ್ಥೆಯ ಈ ಕೊಡುಗೆ ಬೆಂಗಳೂರಿಗೆ ಸಂಪರ್ಕ ವ್ಯವಸ್ಥೆಗೆ ಹೊಸ ಆಯಾಮ ನೀಡಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಎಲೆಕ್ಟ್ರಾನಿಕ್ ಸಿಟಿಯಿಂದ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ತನಕ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆಗಳನ್ನು ಸಂಪರ್ಕ ಒದಗಿಸಲಿದೆ ಎನ್ನಲಾಗಿದೆ. ಮೊನೋರೈಲ್ ನ ಕೆಲಸ ಯಾವಾಗಿಂದಶುರುವಾಗಲಿದೆ? ಮುಂತಾದ ಮಾಹಿತಿ ಮುಂದೆ ಓದಿ...

ಕೆಲಸ ಯಾವಾಗದಿಂದ ಶುರುವಾಗಲಿದೆ?

ಕೆಲಸ ಯಾವಾಗದಿಂದ ಶುರುವಾಗಲಿದೆ?

ಈಗಾಗಲೇ ಪೆರಿಫೆರಲ್ ರೋಡ್ ನ ಮೀಡಿಯನ್ ಮತ್ತು ಮೋನೋರೈಲ್ ಓಡಾಡಲು ಬೇಕಾಗುವ ಬ್ರಿಡ್ಜ್ ನ ಕೆಲಸವನ್ನು ಶುರು ಮಾಡಲಾಗಿದೆ. ಬನ್ನೇರುಘಟ್ಟ ರಸ್ತೆ ಜಂಕ್ಷನ್ ನಲ್ಲಿರುವ ಬ್ರಿಡ್ಜ್ ನ ಕೆಲಸಗಳು ಭರದಿಂದ ನಡೆಯುತ್ತಿದೆ. ಈ ಕೆಲಸಗಳನ್ನು ಆದಷ್ಟು ಬೇಗ ಮುಗಿಸಲಾಗುತ್ತದೆ. ಇದರ ಜೊತೆಗೆ ಮೊನೋರೈಲ್ ನ ಓಡಾಟ ಶುರುವಾಗಬೇಕೆಂದರೆ ಮೆಟ್ರೋ ಕೆಲಸಗಳು ಮುಗಿಯುವುದು ಕೂಡಾ ಅತ್ಯಗತ್ಯ..

ಇದರಿಂದ ಟ್ರಾಫಿಕ್ ಕಿರಿಕಿರಿ ತಪ್ಪುತ್ತದೆಯೇ

ಇದರಿಂದ ಟ್ರಾಫಿಕ್ ಕಿರಿಕಿರಿ ತಪ್ಪುತ್ತದೆಯೇ

ಪೆರಿಫೆರಲ್ ರೋಡ್ ನ ಜಂಕ್ಷನ್ ಗಳಲ್ಲಿ ಬಸ್ ಸ್ಟ್ಯಾಂಡ್ ಮತ್ತು ಮೋನೋ ರೈಲ್ ಸ್ಟೇಷನ್ ಗಳನ್ನು ನಿರ್ಮಿಸಲಾಗುವುದು. ಇಲ್ಲಿ ಮೊನೋರೈಲ್ ಗೆ ಮೆಟ್ರೋ ಫೀಡರ್ ಥರ ಕೆಲಸ ಮಾಡುತ್ತದೆ. ಇದರಿಂದ ಜನರು ಮೆಟ್ರೋ ಅಥವಾ ಮೊನೋ ರೈಲ್‍ನ ಸಾರಿಗೆ ವ್ಯವಸ್ಥೆಯಾಗಿ ಬಳಸಬಹುದು. ನೈಸ್ ಕಾರಿಡಾರ್ ನ ಆಸುಪಾಸಿನಲ್ಲಿರುವ ಜನರು ಯಾವುದೇ ಜಂಕ್ಷನ್ ಗೆ ಹೋಗಿ ಅವರಿಗೆ ಬೇಕಾದ ಸಾರಿಗೆ ವ್ಯವಸ್ಥೆಯನ್ನು ಬಳಸಬಹುದು.

ಮೊನೋ ರೈಲ್ ಮತ್ತು ಮೆಟ್ರೋಗಳಿರುವುದರಿಂದ ಜನರು ಹೆಚ್ಚಾಗಿ ಬೇರೆ ವಾಹನಗಳನ್ನು ಬಿಟ್ಟು ಇವುಗಳಲ್ಲಿ ಓಡಾಡಲು ಶುರುಮಾಡುತ್ತಾರೆ. ಇದರಿಂದ ಅವರು ಸುಲಭವಾಗಿ ಹೆಚ್ಚಿನ ಪ್ರಯಾಸ ಇಲ್ಲದೆ, ಟ್ರಾಫಿಕ್ ನ ಕಿರಿ ಕಿರಿ ಇಲ್ಲದೆ ಬೇಕಾದ ಜಾಗವನ್ನು ತಲುಪಬಹುದು.

ನಮ್ಮ ಮೆಟ್ರೋ-ಮೊನೋ ರೈಲ್ ನ ಫೀಡರ್

ನಮ್ಮ ಮೆಟ್ರೋ-ಮೊನೋ ರೈಲ್ ನ ಫೀಡರ್

ಮೊದಲಿಗೆ ನೈಸ್ ಮೊನೋ ರೈಲ್ ಎರಡು ಪಾಯಿಂಟ್ ಗಳಿಂದ ಕಾರ್ಯ ನಿರ್ವಹಿಸುತ್ತದೆ.. ಒಂದು ಮೈಸೂರು ರಸ್ತೆಯ ಬಿಎಚ್ಇಎಲ್ ಜಂಕ್ಷನ್ ನಿಂದ ಮತ್ತು ಇನ್ನೊಂದು ತುಮಕೂರು ರಸ್ತೆಯ ಬಿಐಇಸಿ ಜಂಕ್ಷನ್ ನಿಂದ. ಮೆಟ್ರೋ ಎರಡನೇ ಹಂತದ ಕಾಮಗಾರಿ ಮುಗಿದು ಎರಡನೇ ಹಂತದ ರೈಲು ಓಡಾಟ ಶುರುವಾದ ಕೂಡಲೇ ಮೊನೋರೈಲ್, ನೈಸ್ ಪೆರಿಫೆರಲ್ ರೋಡ್ ನ ಜಂಕ್ಷನ್ ಗಳಾದ ಕೆಂಗೇರಿ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ ಮತ್ತು ಹೊಸೂರು ರಸ್ತೆಗಳಲ್ಲಿ ಮೆಟ್ರೋವನ್ನು ಸೇರುತ್ತದೆ. ಮೆಟ್ರೋ ಎರಡನೇ ಹಂತ ಕಾರ್ಯ ನಿರ್ವಹಿಸಲು ಶುರು ಮಾಡಿದ ನಂತರವಷ್ಟೇ ಇದು ಸಾಧ್ಯವಾಗುತ್ತದೆ.

ಖರ್ಚು ವೆಚ್ಚ, ಅವಧಿ?

ಖರ್ಚು ವೆಚ್ಚ, ಅವಧಿ?

* ಸುಮಾರು 100 ಕೋಟಿ/ ಕಿ.ಮೀಗೆ ಖರ್ಚಾಗಬಹುದು ಅಂತ ಅಂದಾಜು ಮಾಡಲಾಗಿದೆ.

* ಈ ಯೋಜನೆ ಮುಗಿಯಲು ಮತ್ತು ಮೊನೋ ರೈಲ್ ಓಡಾಡಲು ಸುಮಾರು ಎರಡೂವರೆ ವರ್ಷದಿಂದ ಮೂರು ವರ್ಷ ಬೇಕಾದೀತು.

* ನಾವು ಈಗಾಗಲೇ ಸ್ಪೈನ್, ಜಪಾನ್, ಮಲೇಶಿಯಾ ಮತ್ತು ಯುಎಸ್‍ನ ಕೆಲವು ಕಂಪೆನಿಗಳ ಜೊತೆ ಮಾತುಕತೆ ನಡೆಸಿದ್ದೇವೆ.

*ಯೋಜನೆಗೆ ಬೇಕಾದ ಸಾಮಾಗ್ರಿಗಳನ್ನು ಬೇರೆ ದೇಶದಿಂದ ರಫ್ತು ಮಾಡಿಕೊಳ್ಳಲು ಕೇಂದ್ರ ಸರ್ಕಾರದ ಒಪ್ಪಿಗೆ ಆಗತ್ಯವಿದೆ

ಏರ್ ಪೋರ್ಟ್ ವರೆಗೆ ವಿಸ್ತರಣೆ ಅನುಕೂಲ

ಏರ್ ಪೋರ್ಟ್ ವರೆಗೆ ವಿಸ್ತರಣೆ ಅನುಕೂಲ

ಈ ಕಾರಿಡಾರ್ ನಲ್ಲಿ ಮೆಟ್ರೋದಿಂದ ಇಳಿಯುವ ಜನ ಏರ್ ಪೋರ್ಟ್ ಗೆ ಹೋಗಲು ಮೊನೋರೈಲ್ ನ ಬಳಸಬಹುದು.

ಇದರ ಜೊತೆಗೆ ಮೊನೋರೈಲಿಗೆ ತಗಲುವ ಖರ್ಚು ಕೂಡಾ ಕಡಿಮೆ. ಮೆಟ್ರೋಗೆ ಹೋಲಿಸಿದರೆ ಮೊನೋರೈಲಿಗೆ ತಗಲುವ ಖರ್ಚು 5 ಪಟ್ಟು ಕಡಿಮೆ. ಇನ್ನು ಮೊನೋರೈಲ್ ನ ನೈಸ್ ಪೆರಿಫೆರಲ್ ರೋಡ್ ನಲ್ಲಿ ಶುರು ಮಾಡುವ ಉದ್ದೇಶ ಇರುವುದರಿಂದ ಜಾಗಕ್ಕಾಗಿ ತಗಲುವ ಖರ್ಚು ಕೂಡಾ ಕಡಿಮೆಯೇ.

English summary
Ashok Kheny has finalized a detailed project report for a 41-kilometre monorail system on NICE peripheral road. .The city will get a 41-km monorail route in as little time as two years. NICE also plans a high-speed 111-km monorail connecting Bangalore and Mysore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X