ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರ ಸುದ್ದಿ : ಓ ಮನಸೇ, ಆರುಷಿ ಹತ್ಯೆ ಬಗ್ಗೆ ಬೆಳಗರೆ ಕೃತಿ

By Mahesh
|
Google Oneindia Kannada News

ಬೆಂಗಳೂರು, ಡಿ.16: ಹಿರಿಯ ಪತ್ರಕರ್ತ ಉದಯ ಮರಕಿಣಿ ಅವರ ಸಂಪಾದಕತ್ವದಲ್ಲಿ 'ಓ ಮನಸೇ' ಪಾಕ್ಷಿಕ ಮತ್ತೆ ಪ್ರಕಟಣೆಯಾಗುತ್ತಿದೆ. ಬೆಂಗಳೂರಿನ ಬೆಳೆಗೆರೆ ಬುಕ್ಸ್ ಅಂಡ್ ಕಾಫಿ ಪುಸ್ತಕ ಮಳಿಗೆಯಲ್ಲಿ ಡಿ.14 ರಂದು ಲೋಕಾರ್ಪಣೆಗೊಂಡಿದೆ. ಇದರ ಜತೆಗೆ ರವಿಬೆಳಗೆರೆ ಅವರು ರಚಿಸಿರುವ ದೇಶದಾದ್ಯಂತ ಚರ್ಚೆಗೊಳಗಾದ ಆರುಷಿ ಹೇಮರಾಜ್ ಹತ್ಯೆ ರಹಸ್ಯಗಳ ಬಗ್ಗೆ ಬೆಳಕು ಚೆಲ್ಲುವ ಕೃತಿಯನ್ನು ಬಿಡುಗಡೆ ಮಾಡಲಾಗಿದೆ.

ಕಾರ್ಯಕ್ರಮದ ಚಿತ್ರಗಳು, ಓ ಮನಸೇ ಮತ್ತೆ ಆರಂಭಗೊಂಡಿದ್ದರ ಖುಷಿಯಲ್ಲಿ ಹಾಯ್ ಬೆಂಗಳೂರು ಸಂಪಾದಕ, ಜನಶ್ರೀ ಸಿಇಒ ರವಿ ಬೆಳೆಗೆರೆ ಅವರು ಹೇಳಿದ್ದೇನು? ಮುಂದೆ ಓದಿ...

ಓ ಮನಸೇ ನೀಡಿದ ತೃಪ್ತಿ ಯಾವುದು ನೀಡಿಲ್ಲ: ರವಿ ಬೆಳಗೆರೆ
ಮತ್ತೆ ಹೊಸ ಹುರುಪಿನಿಂದ ಮನಸು ಮನಸುಗಳ ಪಿಸುಮಾತಿಗೊಂದು ಪಾಕ್ಷಿಕ "ಓ ಮನಸೇ..." ಮೂರು ವರ್ಷಗಳ ನಂತರ ಮನಸಿಗೆ ಮುದ ನೀಡಲು ಬಂದಿದೆ. ಓ ಮನಸೇ ಹಾಗೇ ಎಷ್ಟೋ ನಿಯತಕಾಲಿಕೆಗಳು ಮಾರುಕಟ್ಟೆಗೆ ಬಂದು ಹೋಗಿವೆ. ಆದರೆ "ಓ ಮನಸೇ...." ಪಾಕ್ಷಿಕ ಮನಸ್ಸಿಗೆ ನೀಡಿದ ತೃಪ್ತಿ, ಸಮಾಧಾನ ಯಾವುದು ಮಾಡಲಿಲ್ಲ ಎಂದು ಖ್ಯಾತ ಹಿರಿಯ ಪತ್ರಕರ್ತರಾದ ರವಿ ಬೆಳಗೆರೆ ಹೇಳಿದರು.

ಅವರು ತಮ್ಮ ಬೆಳಗೆರೆ ಬುಕ್ಸ್ ಆಂಡ್ ಕಾಫಿ ಪುಸ್ತಕಾಲಯದಲ್ಲಿ ನಡೆದ "ಓ ಮನಸೇ...." ಪಾಕ್ಷಿಕ ಮತ್ತು "ಏನಾಯ್ತು ಮಗಳೇ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಪುಸ್ತಕೋದ್ಯಮ ಬೆಳೆಯಬೇಕು. ಅದಕ್ಕೆ ತಕ್ಕಂತೆ ಓದುಗ ದೊರೆಗಳಿಗೆ ತೃಪ್ತಿ ನೀಡುವಂಥ ಕಾದಂಬರಿಗಳನ್ನು ಬರೆದೆ. ಬರೆಯುತ್ತಲೇ ಇದ್ದೇನೆ. ಈಗ ಆರುಷಿ ಕೊಲೆ ಪ್ರಕರಣದ ಪುಸ್ತಕವನ್ನ ಆರೇ ದಿನಗಳಲ್ಲಿ ಬರೆದಿದ್ದೇನೆ ಎಂದರು. ಸಮಾರಂಭದ ಚಿತ್ರಗಳನ್ನು ನೋಡಿ...

ಬೆಳಗರೆ ಹೇಳಿದ್ದೇನು?

ಬೆಳಗರೆ ಹೇಳಿದ್ದೇನು?

ಈ ಕೊಲೆ ಪ್ರಕರಣದ ಮಾಹಿತಿ ಮತ್ತು ಕೋರ್ಟ್ ನೀಡಿದ ತೀರ್ಪಿನ ಪ್ರತಿಯನ್ನ ಸುಪ್ರೀಂ ಕೋರ್ಟ್ ವಕೀಲರಾದ ಚಂದ್ರಕಾಂತ ಅಂಗಡಿಯವರು ನನಗೆ ನೀಡಿದರು. ಅಲ್ಲದೇ ಓ ಮನಸೇ ನಿಯತಕಾಲಿಕೆಯನ್ನು ನನ್ನ ಆತ್ಮೀಯ ಗೆಳೆಯನಾದ ಉದಯ ಮರಕಿಣಿ ಸಂಪಾದಕತ್ವದಲ್ಲಿ ಮರಳಿ ಮೂರು ವರ್ಷಗಳ ನಂತರ ಬಿಡುಗಡೆ ಮಾಡಲಾಗುತ್ತಿದೆ. ಅದರ ಗೌರವ ಸಂಪಾದಕನಾಗಿದ್ದಾನೆ. ಮನಸೇಯಲ್ಲಿರುವ ನನ್ನ ಕಾಲಂಗಳನ್ನು ಬರೆಯುತ್ತೇನೆ. ಅಲ್ಲದೇ ಹೊಸ ಕಾದಂಬರಿ ಲವ್ ಆಟ್ ಫೇಸ್ಬುಕ್ ಬರುತ್ತದೆ ಎಂದರು.

ಗಣ್ಯರ ಉಪಸ್ಥಿತಿ

ಗಣ್ಯರ ಉಪಸ್ಥಿತಿ

ಹಿರಿಯ ವಕೀಲರಾದ ರೇವಣಸಿದ್ದಯ್ಯನವರು 'ಏನಾಯತ್ತು ಮಗಳೇ ಪುಸ್ತಕವನ್ನು ಬಿಡುಗಡೆ ಮಾಡಿದರೇ, ಓ ಮನಸೇ ಪಾಕ್ಷಿಕವನ್ನು ಪತ್ರಕರ್ತ ದೀಪಕ್ ತಿಮ್ಮಯ್ಯ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ವಿಜಯವಾಣಿ ದಿನಪತ್ರಿಕೆ ಸಂಪಾದಕ ತಿಮ್ಮಪ್ಪ ಭಟ್ಟ, ಓ ಮನಸೇ ಸಂಪಾದಕ ಉದಯ ಮರಕಿಣಿ, ಲೇಖಕ ರಾಜಾ ಚಂಡೂರ್, ಸಂಸ್ಥೆಯ ಸಿ.ಇ.ಒ. ಉಮೇಶ್ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ಕೃತಿಗಳ ಬಿಡುಗಡೆ

ಕೃತಿಗಳ ಬಿಡುಗಡೆ

ಓ ಮನಸೇ ಪಾಕ್ಷಿಕ ಹಾಗೂ ಆರುಷಿ ಹತ್ಯೆ ಬಗ್ಗೆ ಬೆಳಗರೆ ಕೃತಿಯನ್ನು ಬೆಳೆಗೆರೆ ಬುಕ್ಸ್ ಅಂಡ್ ಕಾಫಿ ಪುಸ್ತಕ ಮಳಿಗೆಯಲ್ಲಿ ಲೋಕಾರ್ಪಣೆ ಮಾಡಲಾಗಿದೆ.

ಜೋಗಿ ಜತೆ ಬೆಳಗೆರೆ

ಜೋಗಿ ಜತೆ ಬೆಳಗೆರೆ

ಪತ್ರಕರ್ತ ಜೋಗಿ ಅಲಿಯಾಸ್ ಗಿರೀಶ್ ರಾವ್ ಹಾಗೂ ಅವರ ಪುತ್ರಿ ಜತೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ

ಪುಸ್ತಕ ಮಳಿಗೆ

ಪುಸ್ತಕ ಮಳಿಗೆ

ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳೆಗೆರೆ ಅವರ ಬೆಳೆಗೆರೆ ಬುಕ್ಸ್ ಅಂಡ್ ಕಾಫಿ ಪುಸ್ತಕ ಮಳಿಗೆ

English summary
Popular Kannada Magazine O Manase re launched on Dec.14 at Belagere Books and Coffee shop, Gandhi Bazar, Bangalore. Hai Bangalore tabloid and O Manase owner cum editor and also Janasri TV Channel CEO Ravi Belagere, Uday Marakani, Journalist Jogi, Deepak Thimmaiah, Vijayavani Editor Thimmappa Bhat, Raja Chandur attended the function
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X