ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳಲ್ಲಿ: ಗೋಡೆ ಕುಸಿತಕ್ಕೆ 3 ಬಲಿ, ಯಾರು ಹೊಣೆ?

By Mahesh
|
Google Oneindia Kannada News

ಬೆಂಗಳೂರು, ಸೆ.21: ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಕಾಂಪೌಂಡ್ ಕುಸಿದು ಮೂವರು ದುರಂತ ಸಾವನ್ನಪ್ಪಿದ ಘಟನೆ ಬಗ್ಗೆ ಶನಿವಾರ ಒನ್ ಇಂಡಿಯಾದಲ್ಲಿ ಸುದ್ದಿ ಓದಿರುತ್ತೀರಿ. ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನಡೆದ ಈ ದುರಂತಕ್ಕೆ ಕಟ್ಟಡದ ಮಾಲೀಕನೇ ನೇರ ಹೊಣೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ನಡುವೆ ಮೃತಪಟ್ಟವರ ಕುಟುಂಬಸ್ಥರ ದುಃಖದ ಕಟ್ಟೆಯೊಡೆದು ಕೋಡಿ ಹರಿದಿದೆ.

ಹೊಸೂರು ರಸ್ತೆಗೆ ಹೊಂದಿಕೊಂಡಂತೆ ಇರುವ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಈ ದುರ್ಘಟನೆ ಶನಿವಾರ ನಡೆಯಿತು. ಬೊಮ್ಮಸಂದ್ರದ ಡೆಕ್ಕನ್ ಎಂಟರ್ ಪ್ರೈಸಸ್ ಗೆ ಸೇರಿದ ಕಟ್ಟಡದ ನಿರ್ಮಾಣ ಹಂತದ ಗೋಡೆ ಏಕಾಏಕಿ ಕುಸಿದ ಪರಿಣಾಮ ಸಮೀರ್(32) ಎಂಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರ ಗಾಯಗೊಂಡಿದ್ದ ಪಾಂಚು(30) ಮತ್ತು ಶಂಕರ್ (30) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.[ಸಾವಿನ ಕೂಪದಲ್ಲಿ ಇಸಿಟಿ]

ಸಾವನ್ನಪ್ಪಿದ ದುರ್ದೈವಿಗಳ ಚಿತ್ರಗಳು, ಕಟ್ಟಡದ ಅವಶೇಷಗಳು, ಸಂತ್ರಸ್ಥ ಕುಟುಂಬದವರ ರೋದನದ ಚಿತ್ರಗಳು ಇಲ್ಲಿವೆ. [ಚಿತ್ರಗಳು: ಮಾಲ ಎಂ, ಎಲೆಕ್ಟ್ರಾನಿಕ್ ಸಿಟಿ]

ಘಟನೆ ನಡೆದಿದ್ದು ಹೇಗೆ? ಎಲ್ಲಿ?

ಘಟನೆ ನಡೆದಿದ್ದು ಹೇಗೆ? ಎಲ್ಲಿ?

ಶನಿವಾರದಂದು ಹೊಸೂರು ರಸ್ತೆಗೆ ಹೊಂದಿಕೊಂಡಂತೆ ಇರುವ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಡೆಕ್ಕನ್ ಇಂಡಸ್ಟ್ರೀಸ್ ಗೆ ಸೇರಿದ ಕಟ್ಟಡದ ಗೋಡೆ ನಿರ್ಮಾಣ ಕಾರ್ಯದಲ್ಲಿ 8 ಮಂದಿ ಕಾರ್ಮಿಕರು ತೊಡಗಿದ್ದರು.

ಸುಮಾರು 30 ಅಡಿ ಎತ್ತರದ ಈ ಗೋಡೆ ಕುಸಿದು ಸಮೀರ್ ಎಂಬುವರನ್ನು ಬಲಿ ತೆಗೆದುಕೊಂಡಿದೆ. ಪಾಂಚು ಹಾಗೂ ಶಂಕರ್ ಎಂಬುವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನಿತರರಿಗೆ ಗಾಯಗಳಾಗಿವೆ.
ನೆರವಿಗೆ ಧಾವಿಸಿದ ಬಂದ ಅಗ್ನಿಶಾಮಕ ದಳ

ನೆರವಿಗೆ ಧಾವಿಸಿದ ಬಂದ ಅಗ್ನಿಶಾಮಕ ದಳ

ಸುದ್ದಿ ತಿಳಿದ ತಕ್ಷನವೇ ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ಕೈಗೊಂಡರು.ಕುಸಿದ ಗೋಡೆಯ ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಲು ಯತ್ನಿಸಿದರು. ಅದರೆ, ಮೂವರು ಸಾವನ್ನಪ್ಪಿದ್ದರೆ, ಉಳಿದವರಿಗೆ ಗಾಯಗಳಾಯಿತು.

ಮೃತರ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ

ಮೃತರ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಮೃತರ ಕುಟುಂಬಸ್ಥರು ತಮ್ಮವರ ದುಃಸ್ಥಿತಿ ಕಂಡು ಹೃದಯ ಬಿರಿಯುವಂತೆ ರೋದಿಸಿದರು. ಕಟ್ಟಡದ ಮಾಲೀಕರಿಗೆ ಹಿಡಿಶಾಪ ಹಾಕಿದರು.

ಅವಘಡಕ್ಕೆ ಕಳಪೆ ಕಾಮಗಾರಿಯೇ ಕಾರಣ

ಅವಘಡಕ್ಕೆ ಕಳಪೆ ಕಾಮಗಾರಿಯೇ ಕಾರಣ

ಕುಸಿದ ಗೋಡೆಯನ್ನು ನೋಡಿದ ಮೇಲೆ ಅಗ್ನಿಶಾಮಕದಳ ಸಿಬ್ಬಂದಿ ಮಾತನಾಡುತ್ತಾ, ಅವಘಡಕ್ಕೆ ಕಳಪೆ ಕಾಮಗಾರಿಯೇ ಕಾರಣ, ನಿಗದಿತ ಪ್ರಮಾಣದಲ್ಲಿ ಸಿಮೆಂಟ್ ಮತ್ತು ಕಬ್ಬಿಣ ಬಳಸದಂತೆ ಕಾಣುವುದಿಲ್ಲ. ಕಾಮಗಾರಿಗೆ ಬಳಸಿದ ಸಾಮಾಗ್ರಿಗಳು ಕಳಪೆ ಗುಣಮಟ್ಟದ್ದಾಗಿದ್ದರಿಂದ ಗೋಡೆ ಕುಸಿದಿದೆ ಎಂದು ಹೇಳಿದರು.

ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದಿಲ್ಲವೇ?

ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದಿಲ್ಲವೇ?

ಅಲ್ಲದೇ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದವರು ಎನ್ಒಸಿ ಪಡೆದಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು, ಪರಿಶೀಲನೆ ನಡೆಯುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಗೋಡಿ ಪೊಲೀಸರು ಹೇಳಿದ್ದಾರೆ.

ಆರೋಪ ನಿರಾಕರಿಸಿದ ಡೆಕ್ಕನ್ ಸಂಸ್ಥೆ ಪ್ರತಿನಿಧಿ

ಆರೋಪ ನಿರಾಕರಿಸಿದ ಡೆಕ್ಕನ್ ಸಂಸ್ಥೆ ಪ್ರತಿನಿಧಿ

ಆದರೆ ಈ ಬಗ್ಗೆ ನಮ್ಮ ಪ್ರತಿನಿಧಿ ಜೊತೆ ಮಾತನಾಡಿದ ಡೆಕ್ಕನ್ ಇಂಡಸ್ಟ್ರೀಸ್ ವಕ್ತಾರರು, ಇಲ್ಲಿ ಯಾವುದೇ ಕಳಪೆ ಕಾಮಗಾರಿಯಾಗಿಲ್ಲ ಮತ್ತು ದಾಖಲೆಗಳೆಲ್ಲಾ ಸರಿಯಾಗಿವೆ. ಆಕಸ್ಮಿಕವಾಗಿ ಅವಘಡ ಸಂಭವಿಸಿದೆ ಎಂದರು.

ಪೊಲೀಸರು ಏನು ಹೇಳುತ್ತಾರೆ?

ಪೊಲೀಸರು ಏನು ಹೇಳುತ್ತಾರೆ?

ಕಟ್ಟಡ ನಿರ್ಮಾಣ ಸ್ಥಳದಲ್ಲೂ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿಲ್ಲ. ಎನ್ ಒಸಿ ಪಡೆಯದಿರುವುದು, ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಯುತ್ತಿದೆ. ಕಟ್ಟಡದ ಗುತ್ತಿಗೆದಾರ ಹಾಗೂ ನಿವೇಶನದ ಮಾಲೀಕ ಜಮೀರ್ ಅವರ ಮೇಲೆ ಕೇಸು ದಾಖಲಿಸಿಕೊಳ್ಳಲಾಗಿದೆ.
ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

English summary
In Pictures: Three labourers were killed and two others sustained severe injuries when the compound wall of a building under construction collapsed on them at Bommasandra Industrial Area in Hebbagudi on Hosur Road, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X