ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು; ಕೋರಮಂಗಲದ ಕೋವಿಡ್ ಆರೈಕೆ ಕೇಂದ್ರ

|
Google Oneindia Kannada News

ಬೆಂಗಳೂರು, ಜುಲೈ 17 : ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಬೆಂಗಳೂರು ನಗರದಲ್ಲಿ ಹೆಚ್ಚಾಗುತ್ತಿದೆ. ಗುರುವಾರದ ವರದಿಯಂತೆ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25,288ಕ್ಕೆ ಏರಿಕೆಯಾಗಿದೆ. ಸೋಂಕಿತರು ಹೆಚ್ಚಾದಂತೆ ಐಸೊಲೇಷನ್ ವಾರ್ಡ್‌ಗಳು ಹೆಚ್ಚು ಬೇಕಾಗುತ್ತದೆ.

Recommended Video

Yeddyurappa Government Fail Again!! | Oneindia Kannada

ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿತರಿಗೆ ಬೆಡ್‌ಗಳು ಸಿಗುತ್ತಿಲ್ಲ. ಸೋಂಕಿತರು ಆಸ್ಪತ್ರೆಗೆ ಹೋಗಲು ಅಂಬ್ಯುಲೆನ್ಸ್ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದರ ನಡುವೆಯೇ ನಗರದಲ್ಲಿ ಬೆಡ್‌ಗಳ ವ್ಯವಸ್ಥೆಗಳನ್ನು ಬಿಬಿಎಂಪಿ ಮಾಡುತ್ತಿದೆ.

ಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿ ಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿ

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10,100 ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌ ಆರಂಭವಾಗಿದೆ. ಕಂಠೀರವ ಮತ್ತು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿಯೂ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ.

ಚಿತ್ರ: ದೇಶದಲ್ಲೇ ದೊಡ್ಡದಾದ ಬೆಂಗಳೂರಿನ ಕೋವಿಡ್ ಆರೈಕೆ ಕೇಂದ್ರ ಚಿತ್ರ: ದೇಶದಲ್ಲೇ ದೊಡ್ಡದಾದ ಬೆಂಗಳೂರಿನ ಕೋವಿಡ್ ಆರೈಕೆ ಕೇಂದ್ರ

ಗುರುವಾರ ನಗರದಲ್ಲಿ 2,344 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 25,288ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ಒಂದು ವಾರದ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಕೋವಿಡ್ ಪರೀಕ್ಷೆಗೆ ಹೋಗುವ ಜನರಿಗೆ ಸಲಹೆಗಳು ಕೋವಿಡ್ ಪರೀಕ್ಷೆಗೆ ಹೋಗುವ ಜನರಿಗೆ ಸಲಹೆಗಳು

ಕೋವಿಡ್ ಆರೈಕೆ ಕೇಂದ್ರ

ಕೋವಿಡ್ ಆರೈಕೆ ಕೇಂದ್ರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆದಿದೆ. ಸುಮಾರು 400 ರಿಂದ 450 ಹಾಸಿಗೆಗಳ ವ್ಯವಸ್ಥೆಗಳನ್ನು ಇಲ್ಲಿ ಮಾಡಲಾಗಿದೆ.

ಕೇಂದ್ರದ ಚಟುವಟಿಕೆ ನೋಟ

ಕೇಂದ್ರದ ಚಟುವಟಿಕೆ ನೋಟ

ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಕೋರಮಂಗಲ ‌ಒಳಾಂಗಣ ಕ್ರೀಡಾಂಗಣದಲ್ಲಿನ ಕೋವಿಡ್ ಆರೈಕೆ ಕೇಂದ್ರದ ಕಾರ್ಯ ಚಟುವಟಿಕೆಗಳ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಈ ಕೇಂದ್ರದಲ್ಲಿ ರೋಗಿಗಳು ಈಗಾಗಲೇ ಇದ್ದಾರೆ.

ಎಲ್ಲರಿಗೂ ಧನ್ಯವಾದಗಳು

ಎಲ್ಲರಿಗೂ ಧನ್ಯವಾದಗಳು

ಕೋರಮಂಗಲ ‌ಒಳಾಂಗಣ ಕ್ರೀಡಾಂಗಣದ ಕೋವಿಡ್ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

100 ರೋಗಿಗೆ ಒಬ್ಬ ವೈದ್ಯರು

100 ರೋಗಿಗೆ ಒಬ್ಬ ವೈದ್ಯರು

ಈ ಆರೈಕೆ ಕೇಂದ್ರದಲ್ಲಿ 100 ರೋಗಿಗಳಿಗೆ ಒಬ್ಬರು ವೈದ್ಯರು ಮತ್ತು ಇಬ್ಬರು ನರ್ಸ್‌ಗಳು ಇರುತ್ತಾರೆ. ಆರೈಕೆ ಕೇಂದ್ರದ ಸ್ವಚ್ಛತೆಗೆ ಕಾರ್ಮಿಕರನ್ನು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ನಿಯೋಜನೆ ಮಾಡಿದೆ.

English summary
BBMP converted Koramangala indoor stadium as Covid care centre. Here are the pics of activities of the care centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X