ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇ ಆಡಳಿತ ಸ್ನೇಹಿ ಭಾರತ್ ಫೋನ್ ನೋಡಿ

By Mahesh
|
Google Oneindia Kannada News

ಬೆಂಗಳೂರು, ಜೂ.9: ದೇಶದ ಸಾಮಾನ್ಯ ಜನರು ಇ ಆಡಳಿತದ ಲಾಭ ಪಡೆಯಲು ವಿಶೇಷವಾಗಿ ವಿನ್ಯಾಸಗೊಳಿಸಿರುವ ಕೇವಲ 1,099 ರೂ ದರದಲ್ಲಿ ಅಂತರ್ಜಾಲ ಸೌಲಭ್ಯವನ್ನು ಹೊಂದಿರುವ ಅತ್ಯಾಕರ್ಷಕ ಪೆಂಟಾ ಭಾರತ್ ಫೋನನ್ನು ಮಾರಿಷಸ್ ನ ಅಧ್ಯಕ್ಷ ರಾಜಕೇಶ್ವರ್ ಪುರಯುಗ್ ಬೆಂಗಳೂರಿನಲ್ಲಿ ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಪೆಂಟಾ ಟೆಕ್ನಾಲಾಜಿಯ ಜೊತೆಗೂಡಿ ಮಾರಿಷಸ್‍ನಲ್ಲಿ ಟಾಬ್ಲೆಟ್ ಶಿಕ್ಷಣವನ್ನು ಪ್ರಾರಂಭಿಸಿದ್ದೇವೆ. ಇದರಿಂದಾಗಿ ಸುಮಾರು 26 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಟ್ಯಾಬ್ ಶಿಕ್ಷಣ ಪಡೆದುಕೊಳ್ಳಲು ಸಹಾಯವಾಗಿದೆ. ಅತ್ಯಂತ ಕಡಿಮೆ ದರದಲ್ಲಿ ಉತ್ತಮ ತಂತ್ರಜ್ಞಾನದ ಮೊಬೈಲ್ ಸಾಧನಗಳನ್ನು ನೀಡುತ್ತಿರುವ ಪೆಂಟಾ ಸಂಸ್ಥೆ ಒಳ್ಳೆಯ ಕಾರ್ಯ ಮಾಡುತ್ತಿದೆ ಎಂದು ರಾಜಕೇಶ್ವರ್ ಪುರಯುಗ್ ಶ್ಲಾಘಿಸಿದರು.

ಕರ್ನಾಟಕದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮಾತನಾಡಿ, ಬಿಎಸ್‍ಎನ್‍ಎಲ್ ಜೊತೆಗೂಡಿ ಇಂತಹ ಒಳ್ಳೆಯ ತಂತ್ರಜ್ಞಾನದ ಮೊಬೈಲನ್ನು ಹೊರತಂದಿರುವುದು ಬಹಳ ಸಂತಸದ ವಿಷಯ. ಮುಂಬರುವ ದಿನಗಳಲ್ಲಿ ದೂರ ಶಿಕ್ಷಣವೇ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.

ಅಂಥ ಸಂಧರ್ಭದಲ್ಲಿ ಕಡಿಮೆ ದರದಲ್ಲಿ ಉತ್ತಮ ತಂತ್ರಜ್ಞಾನ ಹೊಂದಿರುವ ಸಾಧನಗಳ ಅವಶ್ಯಕತೆ ಹೆಚ್ಚಾಗುತ್ತದೆ. ಬಿಎಸ್‍ಎನ್‍ಎಲ್ ನಂತಹ ಸಾರ್ವಜನಿಕ ಕಂಪನಿಗಳ ಜೊತೆಗೂಡಿ ಸಾಮಾನ್ಯ ವರ್ಗದವರ ಕೈಗೆಟಕುವಂತೆ ಮೊಬೈಲ್ ಸಾಧನಗಳನ್ನು ಬಿಡುಗಡೆಗೊಳಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ಪ್ಯಾಂಟೆಲ್ ಟ್ಯಾಬ್ಲೆಟ್ ಪಿಸಿಗಳನ್ನು ಪರಿಚಯಿಸಿದೆ

ಪ್ಯಾಂಟೆಲ್ ಟ್ಯಾಬ್ಲೆಟ್ ಪಿಸಿಗಳನ್ನು ಪರಿಚಯಿಸಿದೆ

ಪ್ಯಾಂಟೆಲ್ ಟೆಕ್ನಾಲಜೀಸ್ ಲಿಮಿಟೆಡ್ ಕೈಗೆಟಕುವ ದರದಲ್ಲಿ ಟ್ಯಾಬ್ಲೆಟ್ ಪಿಸಿಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇಂದು ಮುಂದಿನ ಪೀಳಿಗೆಯ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಿರುವ ಡ್ಯೂಯಲ್ ಸಿಮ್, 3 ಇಂಚುಗಳ ವಿಶಾಲ ಸ್ಕ್ರೀನ್ ಮತ್ತು ಅಂರ್ತಜಾಲ ಸೌಲಭ್ಯವನ್ನು ಹೊಂದಿರುವ ಸ್ಮಾಟ್ ಡಿವೈಸ್ ಭಾರತ್ ಫೋನನ್ನು ಬಿಡುಗಡೆಗೊಳಿಸಲಾಯಿತು.

ಸಾಮಾನ್ಯ ಜನರು ಅಂತರ್ಜಾಲ ಬಳಸಬಹುದು

ಸಾಮಾನ್ಯ ಜನರು ಅಂತರ್ಜಾಲ ಬಳಸಬಹುದು

ಅಂರ್ತಜಾಲ ಸೌಲಭ್ಯವನ್ನು ಪಡೆಯಲು ವಿನ್ಯಾಸಗೊಳಿಸಿರುವ 'ಭಾರತ್ ಫೋನ್' ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅಗಾಧ ಬದಲಾವಣೆಗೆ ಕಾರಣವಾಗಲಿದೆ. ಕೇವಲ 1099 ರೂಪಾಯಿಗಳಿಗೆ ದೊರೆಯಲಿರುವ ಈ ಪೋನ್ ಸಾಮಾನ್ಯ ಜನರು ಅಂತರ್ಜಾಲವನ್ನು ಉಪಯೋಗಿಸಲು ಅನುವು ಮಾಡಿಕೊಡಲಿದೆ.

ಧ್ವನಿ ಸೇವೆಗಳನ್ನು ಪಡೆಯಬಹುದಾಗಿದೆ

ಧ್ವನಿ ಸೇವೆಗಳನ್ನು ಪಡೆಯಬಹುದಾಗಿದೆ

ಮೂರು ಇಂಚುಗಳ ದೊಡ್ಡ ಸ್ಕ್ರೀನ್ ಮತ್ತು ಜಾವಾ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಫೋನ್ ಮೋಬೈಲ್ ಬ್ಯಾಂಕಿಂಗ್, ಟೆಲಿ - ಮೆಡಿಕಲ್ ಕೇರ್ ಮತ್ತು ಡಾಟಾ ಸ್ಟ್ರೀಮಿಂಗ್ ಡೆಲಿವರಿಯಂತಹ ಸೌಲಭ್ಯಗಳ ಜೊತೆಗೆ ಧ್ವನಿ ಸೇವೆಗಳನ್ನು ಇದರಿಂದ ಪಡೆಯಬಹುದಾಗಿದೆ. ಇದರ ಜೊತೆಯಲ್ಲೇ ಭಾರತೀಯ ಸಂಚಾರ ನಿಗಮ ಲಿಮಿಟೆಡ್ ವತಿಯಿಂದ ಅತ್ಯಾಕರ್ಷಕ ಧ್ವನಿ ಸೇವೆಯ ಪ್ಯಾಕೇಜ್ ಕೂಡಾ ದೊರೆಯಲಿದೆ.

ಪೆಂಟಾ ಭಾರತ್ ಫೋನ್ ಪಿಏಫ್ 300

ಪೆಂಟಾ ಭಾರತ್ ಫೋನ್ ಪಿಏಫ್ 300

* ಅಂತರ್ಜಾಲ ಸೌಲಭ್ಯ ಹೊಂದಿರುವ ಇಷ್ಟು ಕಡಿಮೆ ದರದಲ್ಲಿ ದೊರೆಯುತ್ತಿರುವ ದೇಶದಲ್ಲೇ ಪ್ರಪ್ರಥಮ ಫೋನ್
* ಶಕ್ತಿಶಾಲಿ ಬ್ಯಾಟರಿ - 15 ಗಂಟೆಗಳ ಸ್ಟಾಂಡ್‍ಬೈ ಮತ್ತು 8 ಗಂಟೆಗಳ ಟಾಕ್ ಟೈಮ್ ಹೊಂದಿರುವ ಶಕ್ತಿಶಾಲಿ ಬ್ಯಾಟರಿ
* ಬಿಎಸ್‍ಎನಲ್ ನಿಂದ ಉಚಿತ ಟಾಕ್ ಟೈಮ್
* ಪೆಂಟಾ ಭಾರತ್ ಫೋನ್ ಕ್ರಾಂತಿಕಾರಿ ಜಾವಾ 3 ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಹೊಂದಿದೆ.
* ಅಂತರ್ಜಾಲ ಸೌಲಭ್ಯಗಳಾದ, ಇ-ಮೇಲ್, ಫೇಸ್‍ಬುಕ್ ಬಳಸಬಹುದಾಗಿದೆ.
* ಹಾಡು ಮತ್ತು ವಿಡಿಯ ಡೌನ್ ಲೋಡ್ ಕೂಡಾ ಮಾಡಬಹುದಾಗಿದೆ.
* ಡ್ಯೂಯಲ್ ಸಿಮ್ ಸ್ಟಾಂಡ್ ಬೈ ಹೊಂದಿರುವ ಈ ಫೋನ್ ನಲ್ಲಿ 1.3 ಮೆಗಾ ಪಿಕ್ಸಲ್ ನ ಕ್ಯಾಮೆರಾ ಕೂಡಾ ಇದೆ.
* ವೇಗದ ಬ್ಲೂಟೂಥ್ ಮೂಲಕ ಫೈಲ್ ಗಳನ್ನು ಸರಾಗವಾಗಿ ಶೇರ್ ಮಾಡಬಹುದಾಗಿದೆ. * ಶಕ್ತಿಶಾಲಿ 1800 ಎಮ್‍ಎಹೆಚ್ ಲಿಥಿಯಮ್ ಬ್ಯಾಟರಿಯನ್ನು ಹೊಂದಿದೆ.
* 64 ಎಂಬಿ RAM ಮತ್ತು 64 ಎಂಬಿ ಆಂತರಿಕ ಸ್ಟೊರೇಜ್ ಇರಲಿದೆ.
* ಎಸ್‍ಎಂಎಸ್ ಶೆಡ್ಯೂಲರ್, ರಿಚ್ ಮಲ್ಟಿಮೀಡಿಯಾ ಗೇಮಿಂಗ್ ಅನುಭೂತಿ ಮತ್ತು ಮೊಬೈಲ್ ಟ್ರಾಕರ್ ಕೂಡಾ ಈ ಫೋನನಲ್ಲಿದೆ.
* ಸ್ಲಿಮ್ ಆಗಿರುವ ಈ ಫೋನ್ ನಿಂದ ಆಟೋ ವಾಯ್ಸ್ ಕಾಲ್ ರೆಕಾರ್ಡಿಂಗ್ ಮಾಡಬಹುದಾಗಿದೆ.
* 1200 ನಿಮಿಷಗಳ ಉಚಿತ ಟಾಕಟೈಮ್ ಕೂಡಾ ಬಿಎಸ್‍ಎನ್‍ಎಲ್ ನಿಂದ ದೊರೆಯಲಿದೆ.

ಆರ್ ಕೆ ಉಪಾಧ್ಯ ಮಾತನಾಡಿ

ಆರ್ ಕೆ ಉಪಾಧ್ಯ ಮಾತನಾಡಿ

ಬಿಎಸ್‍ಎನ್‍ಎಲ್ ನಿಂದ ರಿವರ್ಸ್ ಡಾಟಾ ಬಂಡ್ಲಿಂಗ್ ಸೌಲಭ್ಯದ ಜೊತೆಯಲ್ಲಿ ಇಂತಹ ಅತ್ಯಾಧುನಿಕ ತಂತ್ರಜ್ಞಾನದ ಉತ್ಪನ್ನಗಳನ್ನು ನೋಡಿ ಬಹಳ ಸಂತೋಷವಾಗಿದೆ. ಪೆಂಟಾ ಭಾರತ್ ಪೋನ್ ಇದೀಗ ಭಾರತೀಯ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಅಂತರ್ಜಾಲ ಸೌಲಭ್ಯ ಒದಗಿಸುವ ಸೌಲಭ್ಯದ ಮೂಲಕ, ಭಾರತೀಯ ಸಮಾಜದ ಬಹು ಮುಖ್ಯ ವರ್ಗಕ್ಕೆ ಅತ್ಯಗತ್ಯವಾಗಿದ್ದ ಸೌಕರ್ಯವನ್ನು ನೀಡಲಿದೆ ಎಂದರು.

ವ್ಯವಸ್ಥಾಪಕ ನಿರ್ದೇಶಕ ವಿಜೆಂದರ್ ಸಿಂಗ್

ವ್ಯವಸ್ಥಾಪಕ ನಿರ್ದೇಶಕ ವಿಜೆಂದರ್ ಸಿಂಗ್

ಪಿಎಸ್501 ಮತ್ತು ಪಿಎಸ್ 650 ಸ್ಮಾರ್ಟ್ ಡಿವೈಸ್ ವಿಭಾಗದ ಮಾಸ್ಟರ್ ಪೀಸ್ ಗಳಾಗಿವೆ. ಈ ಮೊಬೈಲ್ - ಸ್ಮಾರ್ಟ್, ಸ್ಟೈಲಿಶ್, ಸ್ಪೋರ್ಟಿ, ಎಲಿಗೆಂಟ್, ಗೇಮರ್, ಮ್ಯೂಸಿಕ್ ಲವರ್, ಸಿನಿಮಾ ಪ್ರಿಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿದೆ. ಈ ಮೊಬೈಲ್ ಫೋನ್ ಗಳು ಬಿಎಸ್‍ಎನ್‍ಎಲ್ ನಿಂದ ಅಕರ್ಷಕವಾದ ಅಂತರ್ಜಾಲ ಮತ್ತು ಧ್ವನಿ ಸೇವೆಯ ಪ್ಯಾಕೇಜನ್ನು ಹೊಂದುವ ಮೂಲಕ ಆಮ್ ಆದ್ಮಿಗೋಸ್ಕರ ಹೇಳಿ ಮಾಡಿಸಿದ ಹಾಂಡ್ ಸೆಟ್ ಎಂದರು.

English summary
Bharat Sanchar Nigam Ltd (BSNL) unveiled a low-cost version of its smart phone, with e-governance applications for common man. Bharat Phone is Designed and developed by Pantel Technologies Ltd. Mauritius President RajkeshwarPurryag, Karnataka Governor H.R. Bhardwaj and state Higher Education Minister R.V. Deshpande were present on the occasion
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X