ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ದೇಶದ ಮೊದಲ ಬಂಡೆ ಉದ್ಯಾನವನ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 23: ಉದ್ಯಾನ ನಗರಿಗೆ ಹಿರಿಮೆಗೆ ಮತ್ತೊಂದು ಗರಿಮೆ ಬಂದಿದೆ. ಸಾಮಾನ್ಯವಾಗಿ ಹಚ್ಚ ಹಸಿರಿನಿಂದ ಕಂಗೊಳಿಸಲಿರುವ ಸಸ್ಯತೋಟಗಳಿಗೆ ಉದ್ಯಾನವೆಂದು ಕರೆಯುತ್ತೇವೆ. ಆದರೆ, ಬಂಡೆಗಳ ಉದ್ಯಾನ ಬಂದರೆ ಹೇಗೆ?

ಗ್ಯಾಲರಿ: ದೇಶದ ಮೊದಲ ಬಂಡೆ ಉದ್ಯಾನವನ

ಹೌದು, ನಿಮಗೆ ಈ ಪ್ರಶ್ನೆ ಮೂಡದೇ ಇರಲಾರದು. ಇಂತಹದ್ದೊಂದು ಬಂಡೆ ಉದ್ಯಾನವನ ಉದ್ಯಾನನಗರಿಯಲ್ಲೇ ತಲೆ ಎತ್ತಿದೆ.ಇದು ದೇಶದ ಮೊದಲ ಬಂಡೆಗಳ ಉದ್ಯಾನವನ ಎಂದೇ ಖ್ಯಾತಿಗೊಳ್ಳಲಿದೆ.

ಸಾರ್ವಜನಿಕರ ಬಗ್ಗೆ ಕಾಳಜಿ, ಅವರಿಗಾಗಿ ಕೆಲಸ ಮಾಡಬೇಕೆಂಬ ಹಪಾಹಪಿತನ ಜನಪ್ರತಿನಿಧಿಗಳಲ್ಲಿದ್ದರೆ ಕಲ್ಲೂ ಕೂಡ ಮಾತನಾಡಬಲ್ಲದು ಎಂಬ ಮಾತಿಗೆ ಈ ಬಂಡೆ ಉದ್ಯಾನವನ ಧ್ಯೋತಕವಾಗಿ ನಿಂತಿದೆ. ಅಂದಹಾಗೆ ಈ ಬಂಡೆ ಉದ್ಯಾನವನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬೊಮ್ಮನಹಳ್ಳಿ ವಾರ್ಡಿನ ದೇವರ ಚಿಕ್ಕನಹಳ್ಳಿಯಲ್ಲಿ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ.

ಇಲ್ಲಿನ ಜನಪ್ರತಿನಿಧಿ ಅಂದರೆ ಕಾರ್ಪೊರೇಟರ್ ಮೋಹನ್‍ರಾಜು ಸಿ.ಆರ್. ಅವರು ತೆಗೆದುಕೊಂಡ ಆಸ್ಥೆಯಿಂದಾಗಿ ಈ ಬಂಡೆ ಉದ್ಯಾನವನ ನಿರ್ಮಾಣವಾಗಲು ಕಾರಣವಾಗಿದೆ.

 ಕಸದ ರಾಶಿಯ ಕೇಂದ್ರ ಸ್ಥಾನ

ಕಸದ ರಾಶಿಯ ಕೇಂದ್ರ ಸ್ಥಾನ

ಈಗ್ಗೆ ನಾಲ್ಕು ತಿಂಗಳ ಹಿಂದೆ ದೇವರಚಿಕ್ಕನಹಳ್ಳಿಯಲ್ಲಿನ ಈ ಒಂದೂವರೆ ಎಕರೆ ಜಾಗ ಕಸದ ರಾಶಿಯ ಕೇಂದ್ರ ಸ್ಥಾನ ಮತ್ತು ಹಾವು, ಹುಳ ಹುಪ್ಪಡಿಗಳ ಆವಾಸಸ್ಥಾನವಾಗಿತ್ತು. ಇಲ್ಲಿನ ಗಬ್ಬು ವಾಸನೆ ತಡೆಯಲಾರದೇ ಸಾರ್ವಜನಿಕರು ಮೂಗಿಗೆ ಬಟ್ಟೆ ಕಟ್ಟಿಕೊಂಡು ಓಡಾಡುತ್ತಿದ್ದರು. ಈ ದುಸ್ಥಿತಿಯನ್ನು ಕಂಡು ಎಲ್ಲರೂ ದೂಷಿಸುವಂತಾಗಿತ್ತು.

ಕಸದ ಸಮಸ್ಯ್ಗೆಪರಿಹಾರ

ಕಸದ ಸಮಸ್ಯ್ಗೆಪರಿಹಾರ

ಕಸದ ಸಮಸ್ಯೆಗೊಂದು ಪರಿಹಾರ ಕಂಡುಹಿಡಿಯಬೇಕೆಂದು ಯೋಚಿಸುತ್ತಿದ್ದ ಮೋಹನ್ ರಾಜು ಸಿ.ಆರ್. ಅವರಿಗೆ ಹತ್ತಾರು ಯೋಜನೆಗಳು ನೆನಪಾದವು. ಆ ಯೋಜನೆಗಳ ಪೈಕಿ ಈ ಬಂಡೆ ಉದ್ಯಾನವನವೂ ಒಂದಾಗಿತ್ತು. ಆದರೆ, ಇದಕ್ಕೆ ಪೂರಕವಾಗಿ ಕೆಲಸ ಮಾಡಬಲ್ಲಂತಹವರನ್ನು ಹುಡುಕುವುದು ಹೇಗೆ ಎಂಬುದನ್ನೂ ಚಿಂತಿಸಿದರು. ಮಾಡಿದರೆ ದೇಶದಲ್ಲೇ ಅಪರೂಪವಾದ ಮತ್ತು ಮೊದಲು ಎನ್ನುವಂತಹ ಯೋಜನೆಯನ್ನು ಮಾಡಬೇಕೆಂದು ಗಂಭೀರ ಆಲೋಚನೆ ಮಾಡಿದರು. ಆಗಲೇ, ಈ ಬಂಡೆ ಉದ್ಯಾನವನದ ಪರಿಕಲ್ಪನೆ ಅವರ ತಲೆಗೆ ಹೋಗಿ ಬಂಡೆ ಉದ್ಯಾನವನ ನಿರ್ಮಿಸುವ ಯೋಜನೆಯನ್ನು ಅಂತಿಮಗೊಳಿಸಿದರು.

ಬಂಡೆ ಉದ್ಯಾನವನ

ಬಂಡೆ ಉದ್ಯಾನವನ

ಇಲ್ಲಿನ ವಿಶೇಷವೆಂದರೆ ಒಂದೂವರೆ ಎಕರೆ ಜಾಗದಲ್ಲಿ ಕೇವಲ ಬಂಡೆಗಳಿಂದಲೇ ಉದ್ಯಾನವನವನ್ನು ನಿರ್ಮಿಸಲಾಗಿದೆ.
ಬಂಡೆ ಉದ್ಯಾನವನ ಎಂದಾಕ್ಷಣ ಇಲ್ಲಿ ಗಿಡ ಮರಗಳು ಇಲ್ಲವೆಂದಿಲ್ಲ. ಹಚ್ಚ ಹಸಿರಿನ ಗಿಡಮರಗಳನ್ನೂ ಇಲ್ಲಿ ಬೆಳೆಸಲಾಗಿದೆ.
ವಿಶೇಷವಾಗಿ ಮಹಾಬಲಿಪುರದಿಂದ ಕಪ್ಪು ಕಲ್ಲುಗಳನ್ನು ತಂದು ನಿರ್ಮಾಣ ಮಾಡಲಾಗಿದೆ.
ಆರಂಭದಲ್ಲಿ ಬಿಬಿಎಂಪಿ ಲೋಗೋ ಇರುವ ಬಂಡೆ ಎಲ್ಲರನ್ನೂ ಸ್ವಾಗತಿಸಲಿದೆ.
ಬುದ್ಧನ ಪ್ರತಿಕೃತಿ, ಮಕ್ಕಳಿಗೆ ಮುದ ನೀಡುವ ಹತ್ತು ಹಲವಾರು ಪ್ರಾಣಿಗಳ ಪ್ರತಿಕೃತಿಗಳು ಇಲ್ಲಿವೆ.
ಇದಿಷ್ಟೇ ಅಲ್ಲ. ದೇಶದ ಬೆನ್ನೆಲುಬು ರೈತರು ವ್ಯವಸಾಯಕ್ಕೆ ಬಳಸುವ ಹಲವಾರು ಉಪಕರಣಗಳು ಇಲ್ಲಿ ಕಾಣಸಿಗುತ್ತವೆ.

ಸ್ಟೋನ್ ಪಾರ್ಕ್

ಸ್ಟೋನ್ ಪಾರ್ಕ್

ಸಂಜೆ ಆಗುತ್ತಿದ್ದಂತೆಯೇ ಪ್ರತಿಯೊಂದು ಬಂಡೆಯೂ ಕಣ್ಣಿಗೆ ಕೋರೈಸುವ ವಿದ್ಯುದ್ದೀಪದಿಂದ ಮತ್ತಷ್ಟು ಆಕರ್ಷಣೀಯವಾಗಿ ಕಾಣಲಿದೆ.
ವಿಧಾನಸೌಧದಲ್ಲಿ ಅಳವಡಿಸಿರುವಂತಹ 12 ಅಡಿ ಎತ್ತರದ ಆರ್ನಮೆಂಟಲ್ ಫೆನ್ಸಿಂಗ್ ಸಿಸ್ಟಮ್ ಅಳವಡಿಸಲಾಗಿದೆ
ಈ ಉದ್ಯಾನವನದ ಬಗ್ಗೆ ಮಾತನಾಡಿದ ಕಾರ್ಪೊರೇಟರ್ ಮೋಹನ್‍ರಾಜು ಸಿ.ಆರ್. ಅವರು, ಈಗ್ಗೆ ನಾಲ್ಕು ತಿಂಗಳ ಹಿಂದೆ ದೇವರಚಿಕ್ಕನಹಳ್ಳಿಯಲ್ಲಿನ ಈ ಒಂದೂವರೆ ಎಕರೆ ಜಾಗ ಕಸದ ರಾಶಿಯ ಕೇಂದ್ರ ಸ್ಥಾನ ಮತ್ತು ಹಾವು, ಹುಳ ಹುಪ್ಪಡಿಗಳ ಕಾಟ ಹೆಚ್ಚಾಗಿತ್ತು

ದೇಶದ ಮೊದಲ ಬಂಡೆ ಉದ್ಯಾನವನ

ದೇಶದ ಮೊದಲ ಬಂಡೆ ಉದ್ಯಾನವನ

ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್, ಶಾಸಕ ಸತೀಶ್ ರೆಡ್ಡಿ, ಮೇಯರ್ ಪದ್ಮಾವತಿ ಸೇರಿದಂತೆ ಹಲವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದು ಬಹುಶಃ ದೇಶದಲ್ಲೇ ಮೊದಲ ಬಂಡೆ ಉದ್ಯಾನವನವಾಗಿದೆ ಎಂದು ಮೋಹನ್ ರಾಜ್ ಹೇಳಿದ್ದಾರೆ.

English summary
The Stone Park, located in Devarachikkanahalli of Bommanahalli Ward of the City, is the first of its kind in the country. Bommanahalli Corporator Ram Mohan Raju C R has been instrumental in the setting up of this unique park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X