ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ORR ಬಿಎಂಟಿಸಿ ಪಥದಲ್ಲಿ ಈ ವಾಹನಗಳಿಗೆ ಸಂಚರಿಸಲು ಅವಕಾಶ

|
Google Oneindia Kannada News

ಬೆಂಗಳೂರು, ಆಗಸ್ಟ್ 27: ನಗರದ ಬೈಯಪ್ಪನಹಳ್ಳಿಯಿಂದ ಸಿಲ್ಕ್‌ಬೋರ್ಡ್‌ವರೆಗಿನ ಹೊರವರ್ತುಲ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರಕ್ಕಾಗಿ ನಿರ್ಮಿಸಲಾದ ಪ್ರತ್ಯೇಕ ಪಥದಲ್ಲಿ ಟೆಕ್ ಕಂಪನಿಗಳ ಬಸ್ ಹಾಗೂ ಶಾಲಾ ವಾಹನಗಳು ಸಂಚರಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ.

ನಮ್ಮ ಮೆಟ್ರೋ ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಸ್ ಪಥದಲ್ಲಿ ಹಲವು ವಾಹನಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಲು ಚಿಂತನೆ ನಡೆದಿದೆ. ಫ್ಯಾಕ್ಟರಿಗಳು, ಕಂಪನಿಗಳು,ಕೆಎಸ್‌ಆರ್‌ಟಿಸಿ ಹಾಗೂ ಇಂಟರ್‌ಸಿಟಿ ಬಸ್, ಕಾಲೇಜು ಬಸ್‌ಗಳು ಸಂಚರಿಸಬಹುದು.

ಸಿಲ್ಕ್‌ಬೋರ್ಡ್‌ನಿಂದ ನಮ್ಮ ಮೆಟ್ರೋ ಕಾಮಗಾರಿ ಆರಂಭಸಿಲ್ಕ್‌ಬೋರ್ಡ್‌ನಿಂದ ನಮ್ಮ ಮೆಟ್ರೋ ಕಾಮಗಾರಿ ಆರಂಭ

ಅತಿ ಹೆಚ್ಚು ವಾಹನ ದಟ್ಟಣೆ ಇರುವ 12 ರಸ್ತೆಗಳಲ್ಲಿಸಾರ್ವಜನಿಕ ಬಸ್‌ ಸಂಚಾರಕ್ಕಾಗಿಯೇ ಪ್ರತ್ಯೇಕ ಪಥವನ್ನು ಕಾಯ್ದಿರಿಸಲು ಭರದ ತಯಾರಿ ನಡೆದಿದೆ. ಈ ಪೈಕಿ ಅತಿ ಹೆಚ್ಚು ವಾಹನಗಳು ಓಡಾಡುವ ಬೈಯಪ್ಪನಹಳ್ಳಿ-ಕೆ.ಆರ್‌.ಪುರ ನಡುವಿನ 18.5 ಕಿ.ಮೀ ಉದ್ದದ ರಸ್ತೆಯಲ್ಲಿಬಸ್‌ ಸಂಚಾರಕ್ಕಾಗಿಯೇ ಪ್ರತ್ಯೇಕ ಪಥ ನಿರ್ಮಾಣ ಮಾಡಲಾಗುತ್ತಿದೆ. ಇದರ ಯಶಸ್ಸು ಆಧರಿಸಿ, ಉಳಿದ 11 ರಸ್ತೆಗಳಲ್ಲಿಬಸ್‌ಗಳಿಗೆ ಪ್ರತ್ಯೇಕ ಪಥ ನಿಗದಿಪಡಿಸಲು ಉದ್ದೇಶಿಸಲಾಗಿದೆ.

In ORR BMTC Lane Buses Of Companies, Schools May Be Allowed

ಸದ್ಯ ಬೈಯಪ್ಪನಹಳ್ಳಿಯಿಂದ ಕೆ.ಆರ್‌.ಪುರ, ಮಾರತ್‌ಹಳ್ಳಿ, ಬೆಳ್ಳಂದೂರು, ಅಗರ ಮಾರ್ಗವಾಗಿ ಸಿಲ್‌್ಕಬೋರ್ಡ್‌ವರೆಗೆ ಪ್ರಾಯೋಗಿಕವಾಗಿ ಬಸ್‌ ಪಥ ನಿರ್ಮಿಸಲಾಗುತ್ತಿದೆ. ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗದಿಂದ ಹೊರವರ್ತುಲ ರಸ್ತೆಯ ಇಕ್ಕೆಲಗಳಲ್ಲಿಬೊಲ್ಲಾರ್ಡ್‌ಗಳನ್ನು ಅಳವಡಿಸಲಾಗುತ್ತಿದೆ.

ಸದ್ಯ ಇರುವ ರಸ್ತೆಯಲ್ಲಿಯೇ 3.5 ಮೀಟರ್‌ ಅಗಲದ ಪಥವನ್ನು ಬಸ್‌ಗಳ ಸಂಚಾರಕ್ಕಾಗಿ ಕಾಯ್ದಿರಿಸಲಾಗುತ್ತಿದೆ. ಈ ರಸ್ತೆಯಲ್ಲಿನ ಉಳಿದ ಇನ್ನೆರಡು ಪಥಗಳಲ್ಲಿಇತರೆ ವಾಹನಗಳು ಸಂಚರಿಸಬಹುದು. ಕಾಯ್ದಿರಿಸಿದ ಪಥದಲ್ಲಿಬಸ್‌ ಮತ್ತು ಆ್ಯಂಬುಲೆನ್ಸ್‌ ಹೊರತಾಗಿ ಅನ್ಯ ವಾಹನಗಳಿಗೆ ಪ್ರವೇಶಿಸುವಂತಿಲ್ಲ. ಪ್ರತ್ಯೇಕ ಪಥದಲ್ಲಿಬಿಎಂಸಿಯು ಪರೀಕ್ಷಾರ್ಥವಾಗಿ ಅ.20ರಿಂದ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಿದೆ.

ಫೇಸ್‌ 2ಎ ಅಡಿ ಬರುವ ಸಿಲ್ಕ್‌ಬೋರ್ಡ್‌ನಿಂದ ಕೆಆರ್‌ ಪುರಂವರೆಗಿನ 18.3 ಕಿ.ಮೀ ಕಾಮಗಾರಿಗಳನ್ನು ಎರಡು ಪ್ಯಾಕೇಜ್‌ಗಳಾಗಿ ವಿಭಾಗಿಸಲಾಗಿದ್ದು, ಮೊದಲ ಪ್ಯಾಕೇಜ್‌ನ್ನುಅಫ್ಕೋನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಎರಡನೇ ಪ್ಯಾಕೇಜ್‌ನ್ನು ಶಂಕರ ನಾರಾಯಣ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್ ಪಡೆದುಕೊಂಡಿದೆ.

ಮೆಟ್ರೋ ಕಾಮಗಾರಿಗೆ 5,227 ಕೋಟಿ ರೂ. ವೆಚ್ಚ ತಗುಲಲಿದೆ. ಅಫ್ಕೋನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಾಮಗಾರಿ ನಡೆಸಲಿದೆ.

ಕೆಆರ್ ಪುರಂ, ಮಹದೇವಪುರ, ಡಿಆರ್‌ಡಿಒ, ಕ್ರೀಡಾ ಸಂಕೀರ್ಣ, ದೊಡ್ಡನೆಕ್ಕುಂದಿ, ಇಸ್ರೋ, ಮಾರತ್‌ಹಳ್ಳಿ, ಕಾಡು ಬೀಸನಹಳ್ಳಿ-ಬೆಳ್ಳಂದೂರು, ಇಬ್ಬಲೂರು, ಆಗರ ಕೆರೆ, ಎಚ್‌ಎಸ್‌ಆರ್ ಬಡಾವಣೆ, ಸಿಲ್ಕ್‌ಬೋರ್ಡ್ ನಿಲ್ದಾಣಗಳು ಇರಲಿವೆ.

Recommended Video

14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ ಮಾಡೋ ಸಮಯದಲ್ಲಿ ನಾಗರಾಜನ ದಾಳಿ | Oneindia Kannada

ಮೊದಲ ಪ್ಯಾಕೇಜ್‌ನಲ್ಲಿ ಸಿಲ್ಕ್‌ಬೋರ್ಡ್‌ನಿಂದ 9.85 ಕಿ,ಮೀ ಎಲಿವೇಟೆಡ್ ಕಾಮಗಾರಿ ನಡೆಯಲಿದ್ದು, ಸೆಂಟ್ರಲ್ ಸಿಲ್ಕ್‌ ಬೋರ್ಡ್ ನಿಲ್ದಾಣ, ಎಚ್‌ಎಸ್‌ಆರ್‌ ಲೇಔಟ್, ಅಗರ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ ಮತ್ತು ಸಿಲ್ಕ್‌ಬೋರ್ಡ್ 2.84 ಕಿ.ಮೀ ಫ್ಲೈಓವರ್ ನಿರ್ಮಾಣವಾಗಲಿದೆ. ಗುರುವಾರ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಭೂಮಿ ಪೂಜೆ ನಡೆದಿದ್ದು, ಪಿಲ್ಲಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರೊಂದಿಗೆ ಮೊದಲ ಪ್ಯಾಕೇಜ್‌ನ ಕಾಮಗಾರಿ ಕೂಡ ಪ್ರಾರಂಭವಾದಂತಾಗಿದೆ.

English summary
Company Buses Ferrying techies, officegoers and others are likely to be allowed on the bus priyority lane on Outer Ring Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X