ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳ ಅಚ್ಚುಮೆಚ್ಚಿನ ತಾತ ಶ್ರೀನಿವಾಸ ಶರ್ಮ

By ಇ.ಆರ್. ರಾಮಚಂದ್ರನ್, ಮೈಸೂರು
|
Google Oneindia Kannada News

ಐವತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಮಕ್ಕಳಿಗೋಸ್ಕರ ಶಿಶುವಿಹಾರಗಳಿದ್ದಿದ್ದು ಬಹಳ ಕಡಿಮೆ. ಒಂದೋ ಎರಡೋ ಇದ್ದಿರಬಹುದು. ಸ್ಕೂಲುಗಳಿದ್ದರೂ ಮಕ್ಕಳಿಗೆ ಪಾಠ ಹೇಳಿಕೊಡಲು ಟೀಚರ್ ಗಳು ಇನ್ನೂ ಕಡಿಮೆ.

ಅಂಥ ದಿನಗಳಲ್ಲಿ ಧೈರ್ಯದಿಂದ, ಸ್ವತಃ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಗಾಂಧೀಜಿಯವರ ಹುಟ್ಟು ಹಬ್ಬದ ದಿನ, ಅಕ್ಟೋಬರ್ 2, 1950ರಂದು ಶಿಶುವಿಹಾರ ಪ್ರಾರಂಭ ಮಾಡಲು ಹೊರಟ ಧೀಮಂತ ಶ್ರೀನಿವಾಸ ಶರ್ಮ. ಜಿಎಸ್ ಶರ್ಮ ಅವರು ಶುರುಮಾಡಿದ ಸ್ಕೂಲುಗಳು, ಶ್ರೀ ಸರಸ್ವತಿ ವಿದ್ಯಾಮಂದಿರ, ಹಣವಂತರಿಗೆ ಬೇಕಾದ ಕಾನ್ವೆಂಟ್ ಗಳಲ್ಲ. ಸಾಮಾನ್ಯವಾದ ಮಿಡಲ್ ಕ್ಲಾಸಿಗರಿಗೆ ಅನುಕೂಲವಾಗುವಂಥ ಶಿಶುವಿಹಾರಗಳು. ಫೀಸು ಕೂಡ ಕೊಡಲು ಶಕ್ತಿಯಿಲ್ಲದವರ ಎಷ್ಟೋ ತಂದೆ ತಾಯಿಯರ ಮಕ್ಕಳಿಗೂ ಸ್ಕೂಲಿಗೆ ಸೇರಿಸಿಕೊಂಡರು ಶರ್ಮ.

ಆಗಿನ ಕಾಲದಲ್ಲಿ ಬಿ.ಎಡ್. ಇನ್ನೂ ಶುರುವಾಗಿರಲಿಲ್ಲ. ನುರಿತ ಮೇಷ್ಟುಗಳ ಸಂಖ್ಯೆಯೂ ಅಷ್ಟಿರಲಿಲ್ಲ. ಪಾಠ ಹೇಳಿಕೊಡಲು, ಅದರಲ್ಲೂ ಮಕ್ಕಳಿಗೆ ಪಾಠ ಹೇಳಿಕೊಡುವ ಅಭಿರುಚಿ ಮತ್ತು ಆಸಕ್ತಿವುಳ್ಳ ಆಗ ತಾನೆ ಪದವೀಧರರಾದ ಹುಡುಗ, ಹುಡುಗಿಯರನ್ನು ಸ್ಕೂಲಿಗೆ ಸೇರಿಸಿಕೊಂಡರು ಶರ್ಮ. ಇದೊಂದು ಆಗಿನ ಕಾಲಕ್ಕೆ ಪವಾಡವೇ ಸರಿ.

ಓದುವ ಬಾಲಕ ಬಾಲಿಕೆಯರ ಸಂಖ್ಯೆ ಬೆಳೆಯುತ್ತ ಬೆಂಗಳೂರಿನಲ್ಲಿ 10 ವಿದ್ಯಾಮಂದಿರಗಳನ್ನು ತೆರೆದ ಕೀರ್ತಿ ಶ್ರೀನಿವಾಸ ಶರ್ಮರದು. ಕೋಲಾರದಲ್ಲೂ ಒಂದು ಶಿಶುವಿಹಾರವನ್ನು ತೆರೆದರು.

In memory of KUSMA founder President GS Sharm

ಒಂದರಿಂದ ಹತ್ತನೇ ತರಗತಿಯ ತನಕ ಓದುವ ಶಾಲೆಯಲ್ಲಿ ಮಕ್ಕಳ ಬೆಳವಣಿಗೆಗೆ ಎಲ್ಲಾ ತರಹದ ಸುಸಜ್ಜತೆಯನ್ನು ಮಾಡಿದ್ದರು. ಮಕ್ಕಳ ಆಟದ ಬಗ್ಗೆಯೂ ವಿಶೇಷ ಮುತುವರ್ಜಿವಹಿಸಿದ್ದರು. ಬ್ಯಾಸ್ಕೆಟ್ ಬಾಲ್, ಫುಟ್ಬಾಲ್, ವಾಲಿಬಾಲ್ ಮತ್ತು ಹೆಣ್ಣು ಮಕ್ಕಳು ಆಡುವ ಥ್ರೋ ಬಾಲ್ ಗಳಿಗೆ ಬೇಕಾದ ಜಾಗ ಮತ್ತು ಯೂನಿಫಾರ್ಮ, ಉಪಕರಣಗಳು ಒದಗಿಸಿದ್ದರು. ಹೋದ ವರ್ಷ ಸ್ಕೂಲಿನ ಮಕ್ಕಳಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತದ ವನ್ ಡೇ ಮ್ಯಾಚನ್ನು ವೀಕ್ಷಿಸಲು ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದರು.

ಬ್ರಹ್ಮಚಾರಿಯಾಗಿದ್ದ ಶರ್ಮ ತಮ್ಮ ಜೀವನವನ್ನೇ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಾಗಿಟ್ಟರು. ಪ್ರತಿ ವರ್ಷ ಶಿಕ್ಷಕ, ಶಿಕ್ಷಕಿಯರನ್ನು ಕರೆದುಕೊಂಡು ದಕ್ಷಿಣ ಮತ್ತು ಉತ್ತರ ಭಾರತದ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಶರ್ಮ ಅವರು ವೃದ್ಧ ತಂದೆ ತಾಯಿಯರನ್ನು ಮರೆಯಲಿಲ್ಲ. ಶ್ರವಣಕುಮಾರನ ತರಹ ಅವರನ್ನು ತಮ್ಮ ಜೊತೆಯಲ್ಲಿ ಇಟ್ಟುಕೊಂಡು ಕೊನೆಯ ತನಕ ಅವರ ಸೇವೆ ಮಾಡಿದರು ಶರ್ಮ.

1980ರಲ್ಲಿ, 1800 ಸ್ಕೂಲ್ ಗಳನ್ನು ಹೊಂದಿರುವ, ಕರ್ನಾಟಕದ ಅನ್ ಯೆಡೆಡ್ ಸ್ಕೂಲ್ಸ್ ಮ್ಯಾನೇಜ್ಮೆಂಟ್ ಅಸೋಶಿಯೇಷನ್ (KUSMA)ದ ಫೌಂಡರ್- ಪ್ರೆಸಿಡೆಂಟ್ ಆಗಿದ್ದರು. ಕೊನೆಯ ತನಕ ಮಕ್ಕಳ ವಿದ್ಯೆಗೆ ವಿಶೇಷವಾಗಿ ದುಡಿದ ತೊಂಬತ್ತು ವರ್ಷದ ಶ್ರೀನಿವಾಸ ಶರ್ಮ ಮೊನ್ನೆ 6 ಮಾರ್ಚಿ ಕಾಲವಾದರು.

ಇವರ ಅನಂತ ಸೇವೆಗೆ ರಾಜ್ಯ ಸರ್ಕಾರ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಿ ಎಂಬುದು ಅಭಿಮಾನಿಗಳ ಆಶಯ. ಹಾಗಿದ್ದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಜೀವನವನ್ನೇ ಮುಡುಪಾಗಿಸಿದ ಧೀಮಂತ ಶ್ರೀನಿವಾಸ ಶರ್ಮರ ಆತ್ಮಕ್ಕೆ ನಾವು ಕೊಡುವ ಅಂತಿಮ ನಮನ.

English summary
G.S. Sharma (90), founder-president of the Karnataka Unaided Schools Management Association (KUSMA), passed away recently in Bangalore after multiple organ failure. KUSMA, which was set up in the early 1980s, has more than 1,800 schools as its members today remembers Citizen Journalist ER Ramachandran
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X