ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಅಕ್ಟೋಬರ್ 4 ರಿಂದ ಪದವಿ,ಸ್ನಾತಕೋತ್ತರ, ಎಂಜಿನಿಯರಿಂಗ್ ತರಗತಿಗಳು ಶುರು

|
Google Oneindia Kannada News

ಬೆಂಗಳೂರು,ಜನವರಿ 20: ಅಕ್ಟೋಬರ್ 4 ರಿಂದ ರಾಜ್ಯ ಎಲ್ಲಾ ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್ ತರಗತಿಗಳು ಶುರುವಾಗಲಿವೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

2021-22ನೇ ಸಾಲಿನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್‌ನ್ನು ಉನ್ನತ ಶಿಕ್ಷಣ ಇಲಾ ಖೆ ಸಿದ್ಧಪಡಿಸಿದ್ದು, ಎಂಜಿನಿಯರಿಂಗ್‌, ಪದವಿ ಮತ್ತು ಸ್ನಾತಕೋತ್ತರ ತರಗತಿಗಳು 2021ರ ಅಕ್ಟೋಬರ್‌ 4ರಿಂದ ಆರಂಭವಾಗಲಿವೆ ಎಂದಿದ್ದಾರೆ.

Ashwath Narayan

2021-22ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್‌ ಹೀಗಿದೆ : ಪದವಿ ತರಗತಿಗಳು : ಪದವಿ ವಿಭಾಗದ 5ನೇ ಸೆಮಿಸ್ಟರ್‌ ತರಗತಿಗಳು ಫೆಬ್ರವರಿ 28ರಂದು ಮುಗಿಯಲಿದ್ದು, ಪರೀಕ್ಷೆಗಳು 2021 ಮಾರ್ಚ್‌ 31ರಂದು ಮುಗಿಯಲಿವೆ.1 ಮತ್ತು 3ನೇ ಸೆಮಿಸ್ಟರ್‌ ತರಗತಿಗಳು 2021ರ ಮಾರ್ಚ್‌ 31ಕ್ಕೆ ಅಂತ್ಯವಾಗಲಿದ್ದು,ಪರೀಕ್ಷೆಗಳು 2021 ಏಪ್ರಿಲ್‌ 30 ರಂದು ಆರಂಭವಾಗಲಿವೆ.

ವಿದ್ಯಾರ್ಥಿಗಳ ಅಂಕಪಟ್ಟಿ ಇನ್ನು ಡಿಜಿ ಲಾಕರ್‌ನಲ್ಲಿ ಸುರಕ್ಷಿತವಿದ್ಯಾರ್ಥಿಗಳ ಅಂಕಪಟ್ಟಿ ಇನ್ನು ಡಿಜಿ ಲಾಕರ್‌ನಲ್ಲಿ ಸುರಕ್ಷಿತ

6ನೇ ಸೆಮಿಸ್ಟರ್‌ ತರಗತಿಗಳು 2021 ಏಪ್ರಿಲ್‌ 1ರಂದು ಶುರುವಾಗಿ,2021ರ ಜುಲೈ 31ಕ್ಕೆ ಮುಗಿಯುತ್ತವೆ.6ನೇ ಸೆಮಿಸ್ಟರ್‌ ಪರೀಕ್ಷೆಗಳು 2021ಅಗಸ್ಟ್‌ 31 ಕ್ಕೆ ಮುಗಿಯುತ್ತವೆ. ಈ ಸೆಮಿಸ್ಟರ್‌ ಪರೀಕ್ಷೆ ಫಲಿತಾಂಶವು 2021 ಸೆಪ್ಟೆಂಬರ್‌ 10ರಂದು ಪ್ರಕಟವಾಗಲಿದೆ.

2 ಮತ್ತು 4ನೇ ಸೆಮಿಸ್ಟರ್‌ ತರಗತಿಗಳು 2021 ಮೇ 2ಕ್ಕೆ ಶುರುವಾಗಿ 2021 ಅಗಸ್ಟ್‌ 31ಕ್ಕೆ ಮುಕ್ತಾಯವಾಗುತ್ತವೆ.ಈ ಸೆಮಿಸ್ಟರ್‌ನ ಪರೀಕ್ಷೆಗಳು 2021 ಸೆಪ್ಟೆಂಬರ್‌ 30ಕ್ಕೆ ಮುಗಿಯುತ್ತವೆ.

Recommended Video

ಬಿಎಂಟಿಸಿ ಬಸ್ ಅಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು!! | Oneindia Kannada

ಕೋವಿಡ್‌ ಕಾರಣದಿಂದ 2021-22ನೇ ಸಾಲಿನ ಶೈಕ್ಷಣಿಕ ಚಟವಟಿಕೆಗಳ ಲ್ಲಿ ವ್ಯತ್ಯಯವಾಗಿದ್ದ ಹಿನ್ನೆಲೆಯಲ್ಲಿ ಆ ಎಲ್ಲ ಅಂಶಗಳನ್ನು ಪರಿಗಣಿಸಿ ಶೈಕ್ಷಣಿಕ ಕ್ಯಾಲೆಂಡರ್‌ ನ ಕರಡು ರೂಪಿ ಸಲಾಗಿದೆ ಎಂದರು.

English summary
Minister Ashwath Narayan Said that In Karnataka Degree,Master Degree and Engineering Classes Are Reopen From October 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X