ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಖಾಲಿ ಉಳಿದ 105 ವೈದ್ಯಕೀಯ ಸೀಟುಗಳು

|
Google Oneindia Kannada News

ಬೆಂಗಳೂರು,ಜನವರಿ 18: ಕರ್ನಾಟಕದ ವೈದ್ಯಕೀಯ ಕಾಲೇಜುಗಳಲ್ಲಿ 105 ಎಂಬಿಬಿಎಸ್ ಸೀಟುಗಳು ಆಶ್ಚರ್ಯ ರೀತಿಯಲ್ಲಿ ಖಾಲಿ ಉಳಿದಿವೆ.

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯ ಸೀಟು ಹಂಚಿಕೆ ಪ್ರಕ್ರಿಯೆ ಡಿಸೆಂಬರ್ 31ರವರೆಗೂ ನಡೆದಿತ್ತು. ಬಳಿಕ ಜನವರಿ 15ರವರೆಗೂ ಮುಂದೂಡಲಾಗಿತ್ತು. ಆದರೆ ರಾಜ್ಯದ 105 ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯ ಸೀಟುಗಳುಗಳು ಖಾಲಿ ಉಳಿದಿರುವುದು ಆಶ್ಚರ್ಯ ತರಿಸಿದೆ. ಸಾಮಾನ್ಯವಾಗಿ ರಾಜ್ಯದಲ್ಲಿ ಎಂಬಿಬಿಎಸ್ ಸೀಟುಗಳು ಖಾಲಿ ಉಳಿಯುವುದಿಲ್ಲ.

10 ನೇ ತರಗತಿ ಮಕ್ಕಳ ಪಠ್ಯ ಕಡಿತ: ಸಿಲಬಸ್ ಕಾಪಿ ಇಲ್ಲಿದೆ10 ನೇ ತರಗತಿ ಮಕ್ಕಳ ಪಠ್ಯ ಕಡಿತ: ಸಿಲಬಸ್ ಕಾಪಿ ಇಲ್ಲಿದೆ

ಏಕೆಂದರೆ ಈ ಎಂಬಿಬಿಎಸ್ ಕೋರ್ಸ್ ಹಾಗೂ ಸೀಟುಗಳಿಗೆ ಭಾರಿ ಪ್ರಮಾಣದ ಬೇಡಿಕೆ ಇದೆ. ಒಟ್ಟು 7500 ಎಂಬಿಬಿಎಸ್ ಸೀಟುಗಳಿದ್ದು, ಇವುಗಳಲ್ಲಿ ದೇವನಹಳ್ಳಿ ಕಾಲೇಜಿನ 30, ಆನೇಕಲ್ ಕಾಲೇಜಿನ 22, ಬಿದರಳ್ಳಿ ಕಾಲೇಜಿನ 14 ಹಾಗೂ ಬೆಂಗಳೂರಿನ ವೈದ್ಯಕೀಯ ಕಾಲೇಜಿನ 10 ಸೀಟುಗಳು ಖಾಲಿ ಉಳಿದಿವೆ ಎಂದು ಆರ್‌ಜಿಯುಎಚ್‌ನ ಮೂಲಗಳು ತಿಳಿಸಿವೆ.

In Karnataka 105 MBBS Management Quota Seats Are Vacant

ಖಾಲಿ ಉಳಿದಿರುವ ಸೀಟುಗಳ ಬ್ಗಗೆ ಈಗ ಆರ್‌ಜಿಯುಎಚ್‌ಎಸ್‌ ಹಾಗೂ ವೈದ್ಯಕೀಯ ಕಾಲೇಜುಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಪ್ರವೇಶ ಪ್ರಕ್ರಿಯೆ ದಿನಾಂಕವನ್ನು ಡಿಸೆಂಬರ್ 31 ರಿಂದ ಜನವರಿ 15ರವರೆಗೆ ಮುಂದೂಡಿರುವುದು ಕಾಲೇಜುಗಳಿಗೆ ವಿಶ್ವವಿದ್ಯಾಲಯ ತಿಳಿಸಿಲ್ಲ, ಇದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಸೀಟುಗಳು ಖಾಲಿ ಉಳಿದಿವೆ ಎಂದು ಕಾಲೇಜುಗಳು ಆರೋಪಿಸಿದ್ದರೆ.

ಈ ಸಂಬಂಧ ಎಲ್ಲಾ ಮಾಹಿತಿಗಳನ್ನು ನೀಡಲಾಗಿದೆ ಆದರೆ ಕಾಲೇಜುಹಗಳಲ್ಲಿನ ಗೊಂದಲ ಹಾಗೂ ನಿರ್ಲಕ್ಷ್ಯದಿಂದ ಇಷ್ಟೊಂದು ಸೀಟುಗಳು ಖಾಲಿ ಉಳಿದಿವೆ ಎಂದು ಆರ್‌ಜಿಯುಎಸ್‌ಎಸ್ ಕುಲಪತಿ ಡಾ. ಸಚ್ಚಿದಾನಂದ ತಿಳಿಸಿದ್ದಾರೆ.

English summary
As many as 105 MBBS seats under the management quota in Karnataka have remained unfilled with admission to undergraduate medical seats ending on January 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X