ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಚಾರ ಶೇ.35ರಷ್ಟು ಹೆಚ್ಚಳ

|
Google Oneindia Kannada News

ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಚಾರ ಶೇ.35ರಷ್ಟು ಹೆಚ್ಚಳವಾಗಿದೆ. ಒಂದೆಡೆ ಬೆಂಗಳೂರು ನಗರ ಪೊಲೀಸರು ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಮತ್ತೊಂದೆಡೆ ಖಾಸಗಿ ವಾಹನಗಳ ಬಳಕೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ.

ಬೆಂಗಳೂರು ಪೊಲೀಸರು ನಡೆಸಿರುವ ಸಮೀಕ್ಷೆಯಲ್ಲಿ ಲಾಕ್‌ಡೌನ್ ನಂತರ ರಸ್ತೆಗಳಲ್ಲಿ ಖಾಸಗಿ ವಾಹನಗಳ ಸಂಚಾರ ಶೇ.35ರಷ್ಟು ಹೆಚ್ಚಾಗಿದೆ. ಈಗಾಗಲೇ ವಿವಿಧ ಕಚೇರಿಗಳಲ್ಲಿ ಕೆಲಸ ಶುರುವಾಗಿದೆ, ವಾಹನಗಳ ಸಂಚಾರ ವಿಪರೀತವಾಗಿರುವುದರಿಂದ ಟ್ರಾಫಿಕ್ ಪೊಲೀಸರ ಕೆಲಸ ತೀವ್ರವಾಗಿ ಹೆಚ್ಚಾಗಿದೆ.

ಪೂರ್ವ ಬೆಂಗಳೂರು ಹೊರತುಪಡಿಸಿ, ಎಲ್ಲಾ ವಿಭಾಗಗಳಲ್ಲಿ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳಿದೆ. ಖಾಸಗಿ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ನಗರಾದ್ಯಂತ ಖಾಸಗಿ ವಾಹನಗಳ ಸಂಚಾರ ಶೇ.35ರಷ್ಟು ಹೆಚ್ಚಾಗಿದೆ ಎಂದು ಸಮೀಕ್ಷೆ ಹೇಳಿದೆ.

In Bengaluru Roads Private Vehicles 35 Percent Increased

ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿದಾಗ, ಅನೇಕ ಮಂದಿ ಸಾರ್ವಜನಿಕ ಸಾರಿಗೆಯನ್ನು ಬಳಸುವ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ರವಿಕಾಂತೇಗೌಡ ಹೇಳಿದ್ದಾರೆ. ಸಾಂಕ್ರಾಮಿಕದಿಂದಾಗಿ ಜನರು ಸಾರ್ವಜನಿಕ ಸಾರಿಗೆಯನ್ನು ಬಳಸಲು ಹಿಂಜರಿಯುತ್ತಿದ್ದಾರೆ. ಮೆಟ್ರೋ ಹಾಗೂ ಬಿಎಂಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ.

ಬೆಂಗಳೂರಿನಲ್ಲಿ, ಪ್ರಯಾಣವು ಈಗಾಗಲೇ ಖಾಸಗಿ ಸಾರಿಗೆ ಹೆಚ್ಚಿದೆ. ಕೊರೊನಾ ಸೋಂಕು ತಗುಲುವ ಭಯ ಇರುವ ಕಾರಣ ಜನರು ಎಷ್ಟೇ ಕಷ್ಟವಾಗಲು ಸ್ವಂತ ವಾಹನಗಳಲ್ಲಿ ಹೋಗೋಣ ಎನ್ನುವ ಮನೋಭಾವ ಹೊಂದುತ್ತಿದ್ದಾರೆ.

ಕೊರೊನಾ ಹಾಗೂ ಲಾಕ್‌ಡೌನ್ ಹೊರತಾಗಿಯೂ ಬೆಂಗಳೂರಿನಲ್ಲಿ ನೋಂದಾಯಿಸಲಾದ ಒಟ್ಟು ವಾಹನಗಳ ಸಂಖ್ಯೆ ಜನವರಿ ರ ವೇಳೆಗೆ ಮಿಲಿಯನ್ ಗಡಿ ದಾಟಿತ್ತು.
ಇವುಗಳಲ್ಲಿ 6.4 ಮಿಲಿಯನ್ ದ್ವಿಚಕ್ರ ವಾಹನಗಳು ಮತ್ತು 2.3 ಮಿಲಿಯನ್ ಖಾಸಗಿ ಕಾಡುಗಳು ಸೇರಿವೆ. 2018ರಿಂದ ಪ್ರತಿ ವರ್ಷ ಸುಮಾರು 6000,000 ಹೊಸ ವಾಹನಗಳು ಸೇರ್ಪಡೆಯಾಗಿದೆ.

2020-21ರಲ್ಲಿ ಸುಮಾರು 1.1 ಮಿಲಿಯನ್ ವಾಹನಗಳು ಸೇರ್ಪಡೆಯಾಗಿವೆ ಇದು ಎರಡು ಪಟ್ಟು ಹೆಚ್ಚಾಗಿದೆ. ಕೊರೊನಾ ಅವಧಿಯಲ್ಲಿ ಬಹುತೇಕ ಆರ್ಥಿಕ ಚಟುವಟಿಕೆ ಕುಸಿತ ಕಂಡರೂ ರಾಜಧಾನಿಯಲ್ಲಿ ವಾಹನ ಖರೀದಿ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ಅದರಲ್ಲೂ ಕಾರುಗಳ ಖರೀದಿ ಪ್ರಮಾಣ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ.

ಸಾರಿಗೆ ಇಲಾಖೆ ಅಂಕಿ-ಅಂಶಗಳ ಪ್ರಕಾರ, ನಗರದಲ್ಲಿ ನೋಂದಣಿಯಾದ ವಾಹನಗಳ ಪ್ರಮಾಣ ಸುಮಾರು 1 ಕೋಟಿ ಮುಟ್ಟಿದೆ. ಇದರಲ್ಲಿ 64 ಲಕ್ಷ ದ್ವಿಚಕ್ರ ವಾಹನಗಳು, 20.38 ಲಕ್ಷ ಕಾರುಗಳು ಸೇರಿವೆ. ಶೇ.80ರಷ್ಟು ಜನ ಖಾಸಗಿ ವಾಹನಗಳನ್ನು ಸಂಚಾರಕ್ಕೆ ಬಳಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

2018-19ರಿಂದ ಬೆಂಗಳೂರು ನಗರಕ್ಕೆ 6 ಲಕ್ಷ ವಾಹನಗಳು ಹೊಸದಾಗಿ ಸೇರ್ಪಡೆಯಾಗುತ್ತಿವೆ. 2020-21ರಲ್ಲಿ 12 ಲಕ್ಷ ವಾಹನಗಳು ಸೇರ್ಪಡೆಯಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ ದ್ವಿಚಕ್ರ ವಾಹನಗಳ ನೋಂದಣಿ ಪ್ರಮಾಣ ಸರಿ ಸುಮಾರು ಒಂದೇ ಆಗಿದೆ. ಕೊರೊನಾ ಅವಧಿಗೆ ಮುನ್ನ ಕಾರುಗಳ ನೋಂದಣಿ ಪ್ರತಿ ವರ್ಷ 1 ಲಕ್ಷದಷ್ಟು ಇರುತ್ತಿತ್ತು. ಕೊರೊನಾ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ.

ಸಾರ್ವಜನಿಕ ಸಾರಿಗೆ ಬಲಪಡಿಸುವ ಕಾರ್ಯ ಕ್ಷಿಪ್ರವಾಗಿ ಆಗದ ಕಾರಣ, ಕೋವಿಡ್‌ ಸೋಂಕಿನ ಭೀತಿಯಿಂದಾಗಿ ಜನರು ಖಾಸಗಿ ವಾಹನಗಳ ಮೊರೆ ಹೋಗುವುದು ಹೆಚ್ಚಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಬಸ್ಸುಗಳು ಉತ್ತಮ ಸೇವೆ ಒದಗಿಸುತ್ತಿವೆಯಾದರೂ ಸೇವೆಯನ್ನು ಇನ್ನಷ್ಟು ಉತ್ತಮಪಡಿಸುವ ಅಗತ್ಯವಿದೆ. ಮೆಟ್ರೊ, ಉಪನಗರ ರೈಲು ಯೋಜನೆ ಜಾರಿ ವಿಳಂಬ ಜನರು ಖಾಸಗಿ ವಾಹನದತ್ತ ವಾಲುತ್ತಿದ್ದಾರೆ ಎಂಬುದು ತಜ್ಞರ ಅಭಿಮತ.

Recommended Video

Shardhul Thakur ಬಗ್ಗೆ ಟ್ವಿಟರ್ ಏನು ಹೇಳುತ್ತಿದೆ ಗೊತ್ತಾ | Oneindia Kannada

English summary
The Bengaluru city police is grappling to control vehicular traffic as the city continues to witness a steady rise in the usage of private vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X