ಎಟಿಎಂ ಕಾರ್ಡ್ ಹಿಂದೆ ಪಿನ್ ಬರೆದು ಹಣ ಕಳೆದುಕೊಂಡ ಕಾನ್ಸ್ಟೇಬಲ್
ಬೆಂಗಳೂರು,ಜನವರಿ 21:ಎಟಿಎಂ ಕಾರ್ಡ್ ಹಿಂದೆ ಪಿನ್ ನಂಬರ್ ಬರೆದು ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅವರ ಖಾತೆಯಿಂದ ಕಳ್ಳನೊಬ್ಬ 40 ಸಾವಿರ ರೂ ಹಣ ವಿತ್ಡ್ರಾ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳಾ ಪೇದೆಯೊಬ್ಬರು ಹಣ ಕಳೆದುಕೊಂಡವರು. ಅವರು ಜನವರಿ 12 ರಂದು ಬಿಎಂಟಿಸಿ ಬಸ್ನಲ್ಲಿ ಅವರು ನಗರಕ್ಕೆ ಬರುತ್ತಿದ್ದರು. ಆಗ ಅವರ ಪರ್ಸ್ ಬ್ಯಾಗಿನಲ್ಲಿ ಇಲ್ಲದಿರುವುದು ತಿಳಿದುಬಂದಿತ್ತು.
ಜತೆಗೆ 10 ಗ್ರಾಂ ಚಿನ್ನದ ಸರವನ್ನು ಪರ್ಸಿನಲ್ಲಿ ಇಟ್ಟಿದ್ದರು, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡೆಬಿಟ್ ಕಾರ್ಡ್ ಇತ್ತು, ಎಟಿಎಂ ಕಾರ್ಡ್ ಹಿಂದೆ ಪಿನ್ ಕೂಡ ಬರೆದಿದ್ದರು.
Uddhav Thackerayಹೇಳಿಕೆ ಖಂಡಿಸಿ ರಾಜ್ಯದ ಗಡಿಯಲ್ಲಿ Vatal Nagaraj Protest | Oneindia Kannada
ಪರ್ಸ್ ಕದ್ದವನು ನಾಲ್ಕು ಇನ್ಸ್ಟಾಲ್ಮೆಂಟ್ನಂತೆ ಖಾತೆಯಿಂದ 40 ಸಾವಿರ ವಿತ್ಡ್ರಾ ಮಾಡಿದ್ದಾನೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.