ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 10 ದಿನದಲ್ಲಿ 27 ಪೊಲೀಸರಿಗೆ ಸೋಂಕು

|
Google Oneindia Kannada News

ಬೆಂಗಳೂರು, ಜುಲೈ 08 : ಕಳೆದ 10 ದಿನಗಳಲ್ಲಿ ಬೆಂಗಳೂರು ನಗರದಲ್ಲಿ 27 ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ನಗರದಲ್ಲಿನ ಸೋಂಕಿತರ ಸಂಖ್ಯೆ 11,361ಕ್ಕೆ ಏರಿಕೆಯಾಗಿದೆ.

Recommended Video

INDO-CHINA : We stand with India : Mark Meadows | USA | Oneindia Kannada

ವೈಟ್ ಫೀಲ್ಡ್‌ ವಿಭಾಗದ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಎಚ್‌ಎಎಲ್ ಪೊಲೀಸ್ ಠಾಣೆಯ 12 ಸಿಬ್ಬಂದಿಗಳಿಗೆ ಸೋಂಕು ತಗುಲಿದೆ. ಒಟ್ಟು 13 ಠಾಣೆಯ ಸಿಬ್ಬಂದಿಗಳಿಗೆ ಹೊಸದಾಗಿ ಸೋಂಕು ತಗುಲಿದೆ.

ಪೊಲೀಸ್ ಠಾಣೆಯಲ್ಲಿ ಅಪ್ಪ-ಮಗ ಸಾವು; 3 ಪೊಲೀಸರ ಬಂಧನ ಪೊಲೀಸ್ ಠಾಣೆಯಲ್ಲಿ ಅಪ್ಪ-ಮಗ ಸಾವು; 3 ಪೊಲೀಸರ ಬಂಧನ

ಆರೋಪಿಯೊಬ್ಬನಿಂದಾಗಿ ಎಚ್‌ಎಎಲ್ ಠಾಣೆಯ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂಬ ಆರೋಪವನ್ನು ವೈಟ್‌ ಫೀಲ್ಡ್ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ತಳ್ಳಿ ಹಾಕಿದ್ದಾರೆ.

ಬೆಳಗಾವಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಪೇದೆ ಬಂಧನಬೆಳಗಾವಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಪೇದೆ ಬಂಧನ

In 10 Days 27 Police Personnel Tested Posotive For COVID 19

ವೈಟ್ ಫೀಲ್ಡ್ ವಿಭಾಗದಲ್ಲಿ ಇದುವರೆಗೂ 27 ಪೊಲೀಸ್ ಸಿಬ್ಭಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 5 ಜನರು ಗುಣಮುಖರಾಗಿದ್ದಾರೆ. ಜೂನ್ 27ರಂದು ಈ ವಿಭಾಗದಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಮ್ಮೆ ನೋಡಿಕೊಳ್ಳಲು ರಜೆ ಬೇಕು; ಪೊಲೀಸ್ ಕಾನ್ಸ್‌ಟೇಬಲ್ ರಜೆ ಪತ್ರ ವೈರಲ್ ಎಮ್ಮೆ ನೋಡಿಕೊಳ್ಳಲು ರಜೆ ಬೇಕು; ಪೊಲೀಸ್ ಕಾನ್ಸ್‌ಟೇಬಲ್ ರಜೆ ಪತ್ರ ವೈರಲ್

ಆರೋಪಿಯಿಂದ ಪೊಲೀಸ್ ಸಿಬ್ಬಂದಿಗೆ ಸೋಂಕು ಹರಡಿಲ್ಲ. ಈ ವಿಭಾಗದಲ್ಲಿ ಜೂನ್ 15ರಂದು ಆರೋಪಿಯೊಬ್ಬನನ್ನು ಬಂಧಿಸಲಾಗಿತ್ತು. ಆದರೆ, ಆತನಿಗೆ ಕೊರೊನಾ ವೈರಸ್ ಸೋಂಕು ತಗುಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

English summary
27 police personnel have tested positive for Coronavirus in Bengaluru city in the last ten days. More cases found in Whitefield division. Five police discharged after treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X