ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 'ವಲಸಿಗರೇ ಕರ್ನಾಟಕ ಬಿಟ್ಟು ತೊಲಗಿ' ಹೋರಾಟ

|
Google Oneindia Kannada News

ಬೆಂಗಳೂರು, ಫೆಬ್ರವರಿ.09: ವಲಸಿಗರೇ ಕರ್ನಾಟಕ ಬಿಟ್ಟು ತೊಲಗಿ ಮತ್ತು Inner Line Permit ನೀತಿಯನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕು ಎಂದಾ ಆಗ್ರಹಿಸಿ ಕನ್ನಡ ಸಂಘಟನೆಗಳು ನಡೆಸಿದ ಎರಡು ದಿನಗಳ ಪ್ರತಿಭಟನೆ ಯಶಸ್ವಿಯಾಗಿದೆ.

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮಿಸಲಾತಿ,‌ ಮಾರ್ವಾಡಿಗಳ ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಬೆಂಗಳೂರಿನ ಟೌನ್ ಹಾಲ್ ಎದುರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ದೇಶದ ಇನ್ನಿತರ ನಗರಗಳಿಂದ ಅನಿಯಂತ್ರಿತವಾಗಿ ರಾಜ್ಯಕ್ಕೆ ಜನರು ಹರಿದು ಬರುತ್ತಿದ್ದಾರೆ.

ಸಿಹಿ ಸುದ್ದಿ: ಕನ್ನಡಿಗರಿಗೆ 75% ಉದ್ಯೋಗ ಮೀಸಲಾತಿಗೆ ಶೀಘ್ರದಲ್ಲೇ ಆದೇಶಸಿಹಿ ಸುದ್ದಿ: ಕನ್ನಡಿಗರಿಗೆ 75% ಉದ್ಯೋಗ ಮೀಸಲಾತಿಗೆ ಶೀಘ್ರದಲ್ಲೇ ಆದೇಶ

ಈ ವಲಸೆಯನ್ನು ನಿಯಂತ್ರಿಸಲು ಆಂತರಿಕ ಗಡಿರೇಖೆ ಪರವಾನಗಿ(ILP) ಅಂತಹ ನಿಯಮವನ್ನ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನ ಒತ್ತಾಯಿಸಿದ್ದಾರೆ. ಈಶಾನ್ಯ ರಾಜ್ಯಗಳಾದ ಮಣಿಪುರ, ಸಿಕ್ಕಿಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ಈಗಾಗಲೇ ಇಂಥದೊಂದು ಗಡಿ ನಿಯಮವು ಜಾರಿಯಲ್ಲಿದೆ.

 Immigrants Quit Karnataka Protest Infront Of Townhall In State Capital Bangalore

ಉತ್ತರ ಭಾರತದಲ್ಲಿ ತಡೆಯಿಲ್ಲದೆ ಜನಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಆ ಭಾಗದ ಜನರು ದಕ್ಷಿಣ ರಾಜ್ಯಗಳಿಗೆ ಅನಿಯಂತ್ರಿತವಾಗಿ ವಲಸೆ ಬರುತ್ತಿದ್ದಾರೆ. ಇದರ ಜೊತೆಗೆ ಉತ್ತರದ ಮಾರ್ವಾಡಿಗಳು ಎಗ್ಗಿಲ್ಲದೆ ರಾಜ್ಯಕ್ಕೆ ನುಗ್ಗಿ ವ್ಯಾಪಾರದ ಸ್ಥರವನ್ನು ಸಂಪೂರ್ಣವಾಗಿ ಅವರ ಹಿಡಿತಕ್ಕೆ ತೆಗೆದುಕೊಂಡಿರುವುದು ನಿಜಕ್ಕೂ ದುರಂತವಾಗಿದೆ.

ಉತ್ತರ ಭಾರತದಲ್ಲಿ ನಿಯಂತ್ರಣವಿಲ್ಲದ ರಾಜಕೀಯ ವ್ಯವಸ್ಥೆ ಜನಸಂಖ್ಯಾ ಸ್ಪೋಟ, ಬಡತನ , ನಿರುದ್ಯೋಗ, ಭ್ರಷ್ಟಾಚಾರದಿಂದ ನಲುಗಿದ ಜನ ಶಾಂತಿಯ ನಾಡಾದ ಕರುನಾಡಿಗೆ ನುಗ್ಗುತ್ತಿರುವುದು ಕನ್ನಡಿಗರ ಭವಿಷ್ಯದ ದೃಷ್ಠಿಯಿಂದ ಒಳ್ಳೆದಲ್ಲ. ಹಿಗಾಗಿ ಈ ಎಲ್ಲ ಸಮಸ್ಯೆಗಳಿಗೆ ಕರ್ನಾಟಕ ಕೇಂದ್ರಿತ ರಾಜಕಾರಣದಿಂದ ಶುರುವಾಗಬೇಕು ಎಂದು ಹಲವಾರು ಕನ್ನಡ ಸಂಘಟನೆಗಳ ರಾಜ್ಯಾದ್ಯಕ್ಷರು ಒಕ್ಕೂರಲಿನಿಂದ ತಿರ್ಮಾನಿಸಿದ್ದಾರೆ.

#ImmigrantsQuitKarnataka ಎಂಬ ಹ್ಯಾಶ್ ಟ್ಯಾಗನಿಂದ ಶುರುವಾಗಿ ಭಾರತದಲ್ಲಿ ಟಾಪ್ ಟ್ರೆಂಡಿಂಗ್ ಆಗಿ ಹಲವಾರು ಸಂಘಟನೆಗಳು ಒಗ್ಗೂಡಿ ಅನಿಯಂತ್ರಿತ ವಲಸೆ ಮತ್ತು ವಲಸಿಗರ ವಿರುದ್ದ ಪ್ರತಿಭಟನೆ ಮಾಡಿದರು.

ಈ ಪ್ರತಿಭಟನೆಯಲ್ಲಿ ಹತ್ತಕ್ಕೂ ಹೆಚ್ಚು ಕನ್ನಡ ಸಂಘಟನೆಗಳು ಪಾಲ್ಗೊಂಡಿದ್ದವು. ಜೊತೆಗೆ ಅನೇಕ ITBT ಕನ್ನಡಿಗರು ಪಾಲ್ಗೊಂಡಿದ್ದು ವಿಶೇಷವಾಗಿತ್ತು, ಮತ್ತು ಈ ಪ್ರತಿಭಟಮೆ ಮುಂದಿನ ದಿನಗಳಲ್ಲಿ ಹಳ್ಳಿಹಳ್ಳಿಗೆ ಒಯ್ದು ದೊಡ್ಡ ಆಂದೋಲನ ಮಾಡುವುದಕ್ಕೆ ಸಂಘಟನೆಗಳು ಒಕ್ಕೂರಲಿನಿಂದ ಪಣ ತೊಟ್ಟಿವೆ.

English summary
Immigrants Quit Karnataka Protest Infront Of Townhall In State Capital Bangalore. Protesters Demand For Job Reservation To Kannadiga's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X