ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಇಂದು ಭಾರಿ ಮಳೆ ಮುನ್ಸೂಚನೆ, Yellow ಅಲರ್ಟ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 22 : ಬೆಂಗಳೂರು ನಗರದಲ್ಲಿ ಭಾನುವಾರ ಮುಂಜಾನೆಯೇ ಮಳೆಯಾಗುತ್ತಿದೆ. ಇಂದು ನಗರದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಹವಾಮಾನ ಇಲಾಖೆ Yellow ಅಲರ್ಟ್ ನೀಡಿದೆ.

ಶನಿವಾರ ತಡರಾತ್ರಿಯಿಂದ ಬೆಂಗಳೂರಿನಲ್ಲಿ ತುಂತುರು ಮಳೆಯಾಗುತ್ತಿದೆ. ಭಾನುವಾರ ಬೆಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಧಾನಿಗೆ ಪತ್ರ ಬರೆದು ಪರಿಹಾರ ಕೇಳಿದ ಬಾಗಲಕೋಟೆ ಯುವಕಪ್ರಧಾನಿಗೆ ಪತ್ರ ಬರೆದು ಪರಿಹಾರ ಕೇಳಿದ ಬಾಗಲಕೋಟೆ ಯುವಕ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಈ ಭಾಗದಲ್ಲಿ ಇಂದು Yellow ಅಲರ್ಟ್ ಘೋಷಣೆ ಮಾಡಲಾಗಿದೆ.

ಕೊಡಗಿನಲ್ಲಿ ಗುಡ್ಡ ಕುಸಿತ ತಡೆಗೆ ವೆಟ್ಟಿವೆರ್ ಹುಲ್ಲು ನಾಟಿಕೊಡಗಿನಲ್ಲಿ ಗುಡ್ಡ ಕುಸಿತ ತಡೆಗೆ ವೆಟ್ಟಿವೆರ್ ಹುಲ್ಲು ನಾಟಿ

rain

ಶನಿವಾರವೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಧರ್ಮಸ್ಥಳದಲ್ಲಿ 3, ವಿರಾಜಪೇಟೆಯಲ್ಲಿ 2, ಉಡುಪಿ ಮತ್ತು ಗುಡಿಬಂಡೆಯಲ್ಲಿ 1 ಸೆಂ. ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಹೇಳಿದೆ.

ಪ್ರವಾಹ; ರಾಜ್ಯ ಕೇಳಿದ್ದು ಕೇವಲ 3 ಸಾವಿರ ಕೋಟಿ ಅನುದಾನಪ್ರವಾಹ; ರಾಜ್ಯ ಕೇಳಿದ್ದು ಕೇವಲ 3 ಸಾವಿರ ಕೋಟಿ ಅನುದಾನ

ಸೋಮವಾರವೂ ಮಳೆ : ಹವಾಮಾನ ಇಲಾಖೆ ಸೆಪ್ಟೆಂಬರ್ 23ರ ಸೋಮವಾರ ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ Yellow ಅಲರ್ಟ್ ಘೋಷಣೆ ಮಾಡಿದೆ.

ಕರಾವಳಿ, ಉತ್ತರ ಒಳನಾಡಿನ ವಿವಿಧ ಪ್ರದೇಶಗಳಲ್ಲಿ ಸೋಮವಾರ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.

English summary
The India Meteorological Department (IMD) issued yellow alert in Bengaluru and three other districts of Karnataka on September 22, 2019. Bengaluru witnessed rain till Saturday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X