ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ಹಗರಣ: ಫಾರ್ಮಾ ಮಳಿಗೆ ಮೇಲೆ ದಾಳಿ ವೇಳೆ ಸಿಕ್ಕಿದ್ದೇನು?

|
Google Oneindia Kannada News

ಬೆಂಗಳೂರು, ಜುಲೈ 03: ಐ.ಎಂ.ಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್ ಐಟಿ)ವು ತನ್ನ ತನಿಖೆಯನ್ನು ಮುಂದುವರೆಸಿದ್ದು, ಐಎಂಎ ಒಡೆತನದ ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ.

ಎಸ್‍ಐಟಿ ತಂಡದಿಂದ ಐಎಂಎ ಸಂಸ್ಥೆ ಒಡೆತನದ ಫ್ರಂಟ್ ಲೈನ್ ಫಾರ್ಮಾದ ಮೂರು ಮಳಿಗೆಗಳ ಮೇಲೆ ದಾಳಿ - 2.22 ಲಕ್ಷ ನಗದು ಸೇರಿದಂತೆ 55.22 ಲಕ್ಷ ರೂ ಬೆಲೆಯ ಫಾರ್ಮಸಿ & ವಿದ್ಯುನ್ಮಾನ ವಸ್ತುಗಳು ವಶ ಪಡೆಸಿಕೊಳ್ಳಲಾಗಿದೆ.

ಐಎಂಎ ವಂಚನೆ : 101 ಬ್ಯಾಂಕ್ ಖಾತೆಯಿಂದ 116 ಕೋಟಿ ರು ವಶಐಎಂಎ ವಂಚನೆ : 101 ಬ್ಯಾಂಕ್ ಖಾತೆಯಿಂದ 116 ಕೋಟಿ ರು ವಶ

ಐ.ಎಂ.ಎ ಸಮೂಹ ಸಂಸ್ಥೆಗಳ ಒಡೆತನದ ಮಳಿಗೆಗಳ ಮೇಲೆ ಶೋಧನಾ ಕಾರ್ಯ ಮುಂದುವರೆಸಿದ ವಿಶೇಷ ತನಿಖಾ ತಂಡವು ಮಂಗಳವಾರದಂದು ಮಲ್ಲೇಶ್ವರಂ, ಯಶವಂತಪುರ ಮತ್ತು ವಿಜಯನಗರಗಳಲ್ಲಿದ್ದ 3 ಮಳಿಗೆಗಳ ಮೇಲೆ ದಾಳಿ ನಡೆಸಿತು.

IMA Scam : SIT police seize Frontline pharma company

ಡಿವೈಎಸ್‍ಪಿ ಅನಿಲ್ ಭೂಮಿ ರೆಡ್ಡಿ ರವರ ನೇತೃತ್ವದ ತಂಡ ದಾಳಿ ನಡೆಸಿದ್ದು, ಈ ಪೈಕಿ ಮಲ್ಲೇಶ್ವರಂನಲ್ಲಿರುವ ಫ್ರಂಟ್‍ಲೈನ್ ಫಾರ್ಮಾ ಮಳಿಗೆಯಲ್ಲಿ ದಾಸ್ತಾನು ಮಾಡಲಾಗಿದ್ದ 53 ಲಕ್ಷ ರೂ ಮೌಲ್ಯದ ಫಾರ್ಮಸಿ ಮತ್ತು ವಿದ್ಯುನ್ಮಾನ ಉಪಕರಣ ಹಾಗೂ 2.22 ಲಕ್ಷ ನಗದುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶ್ವಸಿಯಾಗಿದ್ದಾರೆ. ಉಳಿದಂತೆ ಯಶವಂತಪುರ ಹಾಗೂ ವಿಜಯನಗರದಲ್ಲಿರುವ ಮಳಿಗೆಗಳ ಶೋಧನಾ ಕಾರ್ಯವು ಮುಂದುವರೆದಿರುತ್ತದೆ.

ಈ ಕಾರ್ಯಾಚರಣೆಯನ್ನು ಐ.ಎಂ.ಎ ಪ್ರಕರಣದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಬಿ.ಆರ್.ರವಿಕಾಂತೇಗೌಡ, ಐಪಿಎಸ್, ಡಿಐಜಿ & ಜಂಟಿ ಪೊಲೀಸ್ ಆಯುಕ್ತರು, ಅಪರಾಧ, ಬೆಂಗಳೂರು ನಗರ ರವರ ಮತ್ತು ಗಿರೀಶ್.ಎಸ್, ಐಪಿಎಸ್, ಡಿಸಿಪಿ, ಅಪರಾಧ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಅನಿಲ್ ಭೂಮಿ ರೆಡ್ಡಿ ರವರ ನೇತೃತ್ವದ ತಂಡ ನಿರ್ವಹಿಸಿರುತ್ತದೆ.

ಇದಕ್ಕೂ ಮುನ್ನ ಜೂನ್ 30ರಂದು ಬಿಬಿಎಂಪಿ ನಾಮಿನೇಟಡ್ ಸದಸ್ಯ ಸೈಯದ್ ಮುಜಾಹೀದ್ ಎಂಬಾತನನ್ನು ಬಂಧಿಸಿ, ಆತನ ಮನೆ ಮೇಲೆ ದಾಳಿ ನಡೆಸಿದ್ದರು. ತನಿಖಾ ಸಂದರ್ಭದಲ್ಲಿ ಐ.ಎಂ.ಎ ಒಡೆತನದ ವಿವಿಧ ಕಂಪನಿಗಳ ಹೆಸರಿನಲ್ಲಿದ್ದ ಒಟ್ಟು 101 ವಿವಿಧ ಬ್ಯಾಂಕ್ ಖಾತೆಗಳನ್ನು ಪತ್ತೆ ಹಚ್ಚಿದ ಎಸ್.ಐ.ಟಿ ತಂಡವು ಈ ಖಾತೆಗಳಲ್ಲಿ ರೂ. 1,16,94,307 ಹಣ ಇರುವುದನ್ನು ತಿಳಿದು ಈ ಎಲ್ಲಾ ಖಾತೆಗಳ ಮುಂದಿನ ವ್ಯವಹಾರವನ್ನು ಸ್ಥಗಿತಗೊಳಿಸುವ ಕ್ರಮ ತೆಗೆದುಕೊಂಡಿರುತ್ತದೆ.

English summary
IMA Scam: IMA Scam : Bengaluru SIT police sleuth and raid on Frontline pharma company owned by IMA jewels and seized Rs 55.22 Lakh worth materials and electronic goods.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X