ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ಹಗರಣ : ಎಸ್‌ಐಟಿ ವಿಚಾರಣೆಗೆ ರೋಷನ್ ಬೇಗ್ ಗೈರು

|
Google Oneindia Kannada News

ಬೆಂಗಳೂರು, ಆಗಸ್ಟ್ 06 : ಮಾಜಿ ಸಚಿವ ರೋಷನ್ ಬೇಗ್ ಎಸ್‌ಐಟಿ ವಿಚಾರಣೆಗೆ ಗೈರಾಗಿದ್ದಾರೆ. ಐಎಂಎ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಆಗಸ್ಟ್ 13ರಂದು ಪುನಃ ಹಾಜರಾಗುವಂತೆ ನೋಟಿಸ್ ನೀಡಿದೆ.

ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ರೋಷನ್ ಬೇಗ್ ಅನಾರೋಗ್ಯದ ನೆಪ ಹೇಳಿ ಸೋಮವಾರ ಎಸ್‌ಐಟಿ ವಿಚಾರಣೆಗೆ ಗೈರಾಗಿದ್ದಾರೆ. ಐಎಂಎ ವ್ಯವಸ್ಥಾಪಕ ನಿರ್ದೇಶಕ ಮಹಮದ್ ಮನ್ಸೂರ್ ಖಾನ್‌ನಿಂದ ದೊಡ್ಡ ಮೊತ್ತದ ಹಣ ಪಡೆದ ಆರೋಪ ರೋಷನ್ ಬೇಗ್ ಮೇಲಿದೆ.

ಐಎಂಎ ಹಗರಣ : ಮನ್ಸೂರ್ ಖಾನ್‌ಗೆ 14 ದಿನ ನ್ಯಾಯಾಂಗ ಬಂಧನಐಎಂಎ ಹಗರಣ : ಮನ್ಸೂರ್ ಖಾನ್‌ಗೆ 14 ದಿನ ನ್ಯಾಯಾಂಗ ಬಂಧನ

ರೋಷನ್ ಬೇಗ್‌ ಒಂದು ಬಾರಿ ಎಸ್‌ಐಟಿ ವಿಚಾರಣೆ ಎದುರಿಸಿದ್ದಾರೆ. ಸೋಮವಾರ ಪುನಃ ವಿಚಾರಣೆಗೆ ಆಗಮಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ, ವಿಚಾರಣೆಗೆ ಗೈರಾಗಿದ್ದಾರೆ. ಆಗಸ್ಟ್ 13ರಂದು ಆಗಮಿಸುವಂತೆ ಮತ್ತೊಂದು ನೋಟಿಸ್ ನೀಡಲಾಗಿದೆ.

ಐಎಂಎ ಪ್ರಕರಣ: ಎಸ್‌ಐಟಿಯಿಂದ 3 ಗಂಟೆ ಜಮೀರ್‌ ವಿಚಾರಣೆಐಎಂಎ ಪ್ರಕರಣ: ಎಸ್‌ಐಟಿಯಿಂದ 3 ಗಂಟೆ ಜಮೀರ್‌ ವಿಚಾರಣೆ

IMA Scam : Roshan Baig Skips SIT Inquiry

ಐಎಂಎ ಹಗರಣದ ರೂವಾರಿ ಮಹಮದ್ ಮನ್ಸೂರ್ ಖಾನ್‌ ನ್ಯಾಯಾಂಗ ಬಂಧನದಲ್ಲಿದ್ದಾನೆ. ಬಂಧನಕ್ಕೆ ಮುನ್ನ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿ ಆತ ರೋಷನ್ ಬೇಗ್ ವಿರುದ್ಧ ಆರೋಪಗಳನ್ನು ಮಾಡಿದ್ದ.

ಹಾಸನ : ಐಎಂಎ ಗ್ರೂಪ್‌ಗೆ ಸೇರಿದ ಸೈಟು ಸರ್ಕಾರದ ವಶಕ್ಕೆಹಾಸನ : ಐಎಂಎ ಗ್ರೂಪ್‌ಗೆ ಸೇರಿದ ಸೈಟು ಸರ್ಕಾರದ ವಶಕ್ಕೆ

"ಶಿವಾಜಿನಗರ ಶಾಸಕರು ತಮ್ಮಿಂದ ಹಣ ಪಡೆದು ವಾಪಸ್ ಕೊಡದೆ ವಂಚಿಸಿದ್ದಾರೆ" ಎಂದು ಮನ್ಸೂರ್ ಖಾನ್ ಹೇಳಿಕೆ ನೀಡಿದ್ದ. ಈ ಆರೋಪದ ಬಗ್ಗೆ ರೋಷನ್ ಬೇಗ್ ವಿಚಾರಣೆಯನ್ನು ಎಸ್‌ಐಟಿ ನಡೆಸುತ್ತಿದೆ.

English summary
Former minister Roshan Baig skipped the SIT inquiry on August 5, 2019. SIT served notice to him to attend on August 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X