ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ಹಗರಣ : ಸರ್ಕಾರಿ ನೌಕರನನ್ನು ಬಂಧಿಸಿದ ಎಸ್‌ಐಟಿ!

|
Google Oneindia Kannada News

ಬೆಂಗಳೂರು, ಜುಲೈ 05 : ಬಹುಕೋಟಿ ರೂಪಾಯಿ ಐಎಂಎ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಸರ್ಕಾರಿ ಅಧಿಕಾರಿಯೊಬ್ಬರನ್ನು ಬಂಧಿಸಿದೆ. ಐಎಂಎ ಗ್ರೂಪ್ ಮುಖ್ಯಸ್ಥ ಮನ್ಸೂರ್ ಅಲಿ ಖಾನ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ.

ಶುಕ್ರವಾರ ಎಸ್‌ಐಟಿ ಅಧಿಕಾರಿಗಳು ಬೆಂಗಳೂರು ನಗರ ಉತ್ತರ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರನ್ನು ಬಂಧಿಸಿದೆ. ನಾಗರಾಜ್ ಅವರು ಹಣ ಪಡೆದು ಐಎಂಎ ಗ್ರೂಪ್‌ ಪರವಾದ ವರದಿ ನೀಡಿದ್ದರು ಎಂಬುದು ಆರೋಪವಾಗಿದೆ.

ಐಎಂಎ ಹಗರಣ : ಬೆಂಗಳೂರಿನ ವಿವಿಧೆಡೆ ಎಸ್‌ಐಟಿ ದಾಳಿಐಎಂಎ ಹಗರಣ : ಬೆಂಗಳೂರಿನ ವಿವಿಧೆಡೆ ಎಸ್‌ಐಟಿ ದಾಳಿ

ಐಎಂಎ ಸಂಸ್ಥೆಯ ನಿಯಮ ಬಾಹಿರ ಚಟುವಟಿಕೆ ಕುರಿತು ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರಿಗೆ ವರದಿ ನೀಡುವಂತೆ ಸೂಚನೆ ನೀಡಲಾಗಿತ್ತು. 4.5 ಕೋಟಿ ರೂ. ಹಣ ಪಡೆದು ನಾಗರಾಜ್ ಐಎಂಎ ಪರವಾಗಿ ವರದಿ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಐಎಂಎ ಹಗರಣ: ಬಿಡಿಎ ಅಸಿಸ್ಟೆಂಟ್ ಎಂಜಿನಿಯರ್ ಬಂಧನಐಎಂಎ ಹಗರಣ: ಬಿಡಿಎ ಅಸಿಸ್ಟೆಂಟ್ ಎಂಜಿನಿಯರ್ ಬಂಧನ

SIT

ಐಎಂಎ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಬಿಡಿಎ ಎಕ್ಸಿಕ್ಯುಟಿವ್ ಇಂಜಿನಿಯರ್ ಪಿ.ಡಿ.ಕುಮಾರ್ ಅವರನ್ನು ಬಂಧಿಸಿದೆ. ಪ್ರಸ್ತುತ ಅವರು ಪೊಲೀಸ್ ವಶದಲ್ಲಿದ್ದಾರೆ.

ಐಎಂಎ ಸಮೂಹದ 209 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ EDಐಎಂಎ ಸಮೂಹದ 209 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ED

ಬೆಂಗಳೂರು ನಗರದಲ್ಲಿ ಐಎಂಎಗೆ ಸೇರಿದ ಆಸ್ತಿಗಳ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದು, ಹಣ, ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಜುಲೈ 3ರಂದು ನಡೆಸಿದ ದಾಳಿಯಲ್ಲಿ ಸುಮಾರು 40 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

English summary
Special Investigation Team (SIT) probing IMA scam arrested the north divisional officer L.C.Nagaraj. It's alleged that L.C.Nagaraj submitted the report in favor of IMA group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X