ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾರಿತ್ರ್ಯ ಹರಣ, ರಾಜಕೀಯ ಕುತಂತ್ರಕ್ಕೆ ಬಲಿಪಶುವಾಗಲಾರೆ: ಬೇಗ್

|
Google Oneindia Kannada News

ಬಹುಕೋಟಿ ಐ.ಎಂ.ಎ. ಜ್ಯುವೆಲ್ಸ್ ವಂಚನೆ ಪ್ರಕರಣವನ್ನು ವಿಶೇಷ ತನಿಖಾ ತಂಡದ ತನಿಖೆಗೆ ವಹಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.ಈ ನಡುವೆ ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರು ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದು, ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ಕರ್ನಾಟಕ ಸರ್ಕಾರದಲ್ಲಿರುವ ಸಚಿವರೊಬ್ಬರು ಈ ಪ್ರಕರಣದ ರೂವಾರಿ. ಅಂದರೆ ರೋಷನ್ ಬೇಗ್ ರ ಬಾಯಿ ಮುಚ್ಚಿಸುವ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂಬುದು ಹರಿದಾಡುತ್ತಿರುವ ಸುದ್ದಿ. ಈ ಬಗ್ಗೆ ಸತ್ಯಾಸತ್ಯತೆಯನ್ನು ಖಚಿತ ಪಡಿಸಿಕೊಳ್ಳಬೇಕು ಅಂದರೆ ಮನ್ಸೂರ್ ಖಾನ್ ಸಿಕ್ಕಿ ಹಾಕಿಕೊಳ್ಳಬೇಕು.

ಹೂಡಿಕೆದಾರರ ಹಣವನ್ನು ಹಿಂತಿರುಗಿಸಲು ಸಾಧ್ಯವಿದ್ದರೂ 'ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂದು ಮನ್ಸೂರ್ ಆಡಿಯೋ ಮಾಡಿಟ್ಟಿದ್ದು ಏಕೆ? ಒಂದು ವಿಧಾನಸಭಾ ಕ್ಷೇತ್ರದ ಶಾಸಕರಿಗೆ ನಾನೂರು ಕೋಟಿ ರುಪಾಯಿಯನ್ನು ಮನ್ಸೂರ್ ನೀಡಿದ್ದು ಏಕೆ? ಅಷ್ಟು ಹಣಕ್ಕೆ ಪ್ರತಿಯಾಗಿ ಅಡಮಾನ, ದಾಖಲೆಗಳು ಏನನ್ನೂ ಪಡೆದಿರಲಿಲ್ಲವೆ? ಎಂಬ ಸುದ್ದಿಯಿದೆ.

ಪ್ರತಿ ದಿನ ಜಯನಗರ ಸೇರಿದಂತೆ ವಿವಿಧೆಡೆಯಿರುವ 'ಐ ಮಾನಿಟರಿ ಅಡ್ವೈಸರಿ ಜ್ಯೂವೆಲ್ಸ್' (ಐಎಂಎ ಜ್ಯುವೆಲ್ಸ್) ಕಚೇರಿ ಎದುರು ನೂರಾರು ಜನ ಜಮಾಯಿಸುತ್ತಿದ್ದಾರೆ. ಐ.ಎಂ.ಎ ಜ್ಯುವೆಲ್ಸ್ ಹಾಗೂ ಖಾನ್ ವಿರುದ್ಧ ಪೊಲೀಸರಲ್ಲಿ ಸಾವಿರಾರು ದೂರುಗಳು ದಾಖಲಾಗಿವೆ. ಖಾನ್ ಆಡಿಯೋ ಕೇಳಿ ಬರುತ್ತಿದ್ದರೂ ಎಲ್ಲಿದ್ದಾನೆ ಎಂಬುದು ಇನ್ನೂ ಪತ್ತೆಯಾಗಿಲ್ಲ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಐಎಂಎ ಜ್ಯುವೆಲ್ಸ್ ವಂಚನೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿದೆ. ಈ ಬಗ್ಗೆ ಡಿ.ಜಿ.ಪಿ.ಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದೆ.. ರೋಷನ್ ಬೇಗ್ ಅವರ ಟ್ವೀಟ್ ನಲ್ಲಿ ಏನಿದೆ?

ನನ್ನ ಆಸ್ತಿಯನ್ನು ಮಾರಿಯಾದರೂ ಹಣ ಹಿಂತಿರುಗಿಸುವೆ

ನನ್ನ ಆಸ್ತಿಯನ್ನು ಮಾರಿಯಾದರೂ ಹಣ ಹಿಂತಿರುಗಿಸುವೆ

ಖಾನ್ ಆಡಿಯೋ ಪ್ರಕಾರ IMAಗೆ 1050 ಕೋಟಿ ರುಪಾಯಿ ಮೌಲ್ಯದ ಆಸ್ತಿ ನಗರದಲ್ಲಿ ಇದೆ. ಇನ್ನು ಈ ಸಮೂಹಕ್ಕೆ 7 ಸಾವಿರ ಗ್ರಾಹಕರಿದ್ದಾರಂತೆ. ನಾಸಿರ್ ಹುಸೇನ್, ನವೀದ್ ಅಹ್ಮದ್ ನಟ್ಟಮ್ ಕರ್, ನಿಜಾಮುದ್ದೀನ್ ಅಜೀಮುದ್ದೀನ್, ಅಫ್ಷಾನ್ ತಬುಸ್ಸುಮ್, ಅಫ್ಸರ್ ಪಾಷಾ ಹಾಗೂ ಅರ್ಷಾದ್ ಖಾನ್ ಆಡಳಿತ ಮಂಡಳಿಯ ನಿರ್ದೇಶಕರು. ಹಾಗೂ ನನ್ನ ಕುಟುಂಬ ಎಲ್ಲಿಯೂ ಓಡಿ ಹೋಗಿಲ್ಲ. ನನ್ನನ್ನು ಇಲ್ಲಿಂದ ಓಡಿಸಲು ಸಂಚು ರೂಪಿಸಲಾಗುತ್ತಿದೆ ಎಂದಿದ್ದಾರೆ. ನಾನು ತೆಗೆದುಕೊಂಡಿರುವ ನ್ಯಾಯವಾದ ದುಡ್ಡು ಎಲ್ಲರಿಗೂ ವಾಪಸ್ ಸಿಗಲಿದೆ. ಶಾಸಕ ರೋಷನ್ ಬೇಗ್, ಶಕೀಲ್ ಅಹಮದ್ ಹಾಗೂ ರಾಹೀಲ್ ನನ್ನನ್ನು ಇಲ್ಲಿಂದ ಓಡಿಸಲು ಸಂಚು ರೂಪಿಸುತ್ತಿದ್ದಾರೆ.

ವೈರಲಾಗಿರುವ ಆಡಿಯೋ

ವೈರಲಾಗಿರುವ ಆಡಿಯೋ

ಕಂಪನಿಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಆಡಿಯೋ ವೈರಲ್ ಆಗಿತ್ತು. ಈಗ ಮತ್ತೊಂದು ಆಡಿಯೋ ಬಂದಿದೆ. ಎಲ್ಲರಿಗೂ ಹಣ ವಾಪಸ್ ಮಾಡುವ ಭರವಸೆ ಸಿಕ್ಕಿದೆ, ಆದರೆ, ಆಡಿಯೋ ಸತ್ಯಾಸತ್ಯತೆ ಬಗ್ಗೆ ಇನ್ನು ಸ್ಪಷ್ಟವಾಗಿಲ್ಲ. ಹೂಡಿಕೆ ಮಾಡಲಾಗಿರುವ ಎಲ್ಲ ಹಣವನ್ನು ನಾನು ಆಭರಣ, ವಜ್ರ, ಆಸ್ಪತ್ರೆ ಹಾಗೂ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದೇನೆ, ನನ್ನ ಆಸ್ತಿಯನ್ನು ಮಾರಿಯಾದರೂ ಹೂಡಿಕೆದಾರರಿಗೆ ಹಣ ಹಿಂತಿರುಗಿಸುವುದಾಗಿ ಖಾನ್ ಹೇಳಿಕೊಂಡಿದ್ದಾರೆ.

ಶಿವಾಜಿನಗರದ ಶಾಸಕ ರೋಷನ್ ಬೇಗ್

ಶಿವಾಜಿನಗರದ ಶಾಸಕ ರೋಷನ್ ಬೇಗ್

ಬಹುಕೋಟಿ ಐ.ಎಂ.ಎ. ಜ್ಯುವೆಲ್ಸ್ ವಂಚನೆ ಪ್ರಕರಣವನ್ನು ವಿಶೇಷ ತನಿಖಾ ತಂಡದ ತನಿಖೆಗೆ ವಹಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.ಈ ನಡುವೆ ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರು ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದು, ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ಖಾನ್ ವಿರುದ್ಧ ಪೊಲೀಸರಲ್ಲಿ ಸಾವಿರಾರು ದೂರುಗಳು

ಖಾನ್ ವಿರುದ್ಧ ಪೊಲೀಸರಲ್ಲಿ ಸಾವಿರಾರು ದೂರುಗಳು

ಪ್ರತಿ ದಿನ ಜಯನಗರ ಸೇರಿದಂತೆ ವಿವಿಧೆಡೆಯಿರುವ 'ಐ ಮಾನಿಟರಿ ಅಡ್ವೈಸರಿ ಜ್ಯೂವೆಲ್ಸ್' (ಐಎಂಎ ಜ್ಯುವೆಲ್ಸ್) ಕಚೇರಿ ಎದುರು ನೂರಾರು ಜನ ಜಮಾಯಿಸುತ್ತಿದ್ದಾರೆ. ಐ.ಎಂ.ಎ ಜ್ಯುವೆಲ್ಸ್ ಹಾಗೂ ಖಾನ್ ವಿರುದ್ಧ ಪೊಲೀಸರಲ್ಲಿ ಸಾವಿರಾರು ದೂರುಗಳು ದಾಖಲಾಗಿವೆ. ಖಾನ್ ಆಡಿಯೋ ಕೇಳಿ ಬರುತ್ತಿದ್ದರೂ ಎಲ್ಲಿದ್ದಾನೆ ಎಂಬುದು ಇನ್ನೂ ಪತ್ತೆಯಾಗಿಲ್ಲ.

English summary
IMA Scam : Shivajinagar MLA Roshan Baig has reverted back and denied all the allegations through series of tweets. Baig has said all allegations are false and this is political vendetta and pre planned act to defame his political image.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X