ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಜಪ್ತಿಗೆ ಮೂಹೂರ್ತ ಫಿಕ್ಸ್?

|
Google Oneindia Kannada News

ಬೆಂಗಳೂರು, ಜೂ. 11: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಜಪ್ತಿಗೆ ಮುಹೂರ್ತ ಫಿಕ್ಸ್ ಆಗಲಿದೆ. ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ರೋಷನ್ ಬೇಗ್ ಅವರ ಆಸ್ತಿ ಜಪ್ತಿ ಮಾಡದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಗರಂ ಆಗಿದೆ. ನ್ಯಾಯಾಲಯ ಗಡುವಿನ ಪ್ರಕಾರ ಮೀನಾಮೇಷ ಎಣಿಸುತ್ತಿರುವ ಸರ್ಕಾರ ಬೇಗ್ ಆಸ್ತಿ ಜಪ್ತಿ ಮಾಡಿ ಅದರಿಂದ ಬರುವ ಹಣವನ್ನು ಎಂಎಎನಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರಿಗೆ ನೀಡಲು ಕ್ರಮ ಜರುಗಿಸಬೆಕಾಗುತ್ತದೆ.

ಚಿನ್ನದ ಮೇಲಿನ ಹೂಡಿಕೆ ಆಸೆ ತೋರಿಸಿ ಬಡವರಿಂದ ಲಕ್ಷಾಂತರ ಹಣ ಸಂಗ್ರಹಿಸಿದ್ದ ಐಎಂಎ ವಂಚನೆ ಪ್ರಕರಣದಿಂದ ರಾಜ್ಯದಲ್ಲಿ ಸಾವಿರಾರು ಮಂದಿ ಬೀದಿಗೆ ಬಿದ್ದಿದ್ದರು. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿತ್ತು. ಈ ವೇಳೆ ಐಎಂಎ ಸಂಸ್ಥಾಪಕ ಮನ್ಸರ್ ಆಲಿಖಾನ್ ನನ್ನು ಬಂಧಿಸಲಾಗಿತ್ತು. ತನಿಖೆ ವೇಳೆ ಮನ್ಸೂರ್ ಆಲಿಖಾನ್ ಜತೆ ಮಾಜಿ ಸಚಿವ ರೋಷನ್ ಬೇಗ್ ಸಂಬಂಧ ಹೊಂದಿದ್ದ.

ಐಎಂಎ ವಂಚನೆ ಪ್ರಕರಣ: ಹೇಮಂತ್ ನಿಂಬಾಳ್ಕರ್‌ಗೆ ಬಿಗ್ ರಿಲೀಫ್ ಐಎಂಎ ವಂಚನೆ ಪ್ರಕರಣ: ಹೇಮಂತ್ ನಿಂಬಾಳ್ಕರ್‌ಗೆ ಬಿಗ್ ರಿಲೀಫ್

ಮಾತ್ರವಲ್ಲದೇ ಐಎಂಎ ಸಂಸ್ಥೆ ಪ್ರಚಾರ ಮಾಡಿ ಹೂಡಿಕೆ ಮಾಡಲು ಪ್ರೇರಪಣೆ ಮಾಡಿದ್ದ. ಕಟ್ಟಡವೊಂದರ ವಹಿವಾಟು ಮಾಡಿದ್ದ ಸಂಗತಿ ಸಿಬಿಐ ತನಿಖೆಯಲ್ಲಿ ಬಯಲಾಗಿತ್ತು. ಇನ್ನು ಐಎಎಂಎ ವಂಚನೆ ಪ್ರಕರಣ ಸಂಬಂಧ ಆಸ್ತಿ ಜಪ್ತಿ ಮಾಡಲಾಗಿತ್ತು. ಆನಂತಗರ ಐಎಎಂಎ ಸಕ್ಷಮ ಪ್ರಾಧಿಕಾರದಿಂದ ಹರಾಜು ಹಾಕಿ ಹಣವನ್ನು ಮೋಸಹೋದವರ ಖಾತೆಗೆ ಹಾಕಲು ಸರ್ಕಾರ ಆದೇಶಿಸಿತು. ಅದರಂತೆ ಡಾ. ಹರ್ಷ ಗುಪ್ತ ಮುಖಸ್ಥರಾಗಿರುವ ಐಎಂಎ ಸಕ್ಷಮ ಪ್ರಾಧಿಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

IMA Scam : Former Minister Roshan Beg property foreclosure very soon

ಮಾಜಿ ಸಚಿವ ರೋಷನ್ ಬೇಗ್ ಅವರ ಪಾತ್ರ ಐಎಎಂ ವಂಚನೆಯಲ್ಲಿ ಇರುವ ಬಗ್ಗೆ ಉಲ್ಲೇಖಿಸಿ ಒಂದು ವರ್ಷದ ಹಿಂದೆಯೇ ಹಿರಿಯ ಐಎಎಎಸ್ ಅಧಿಕಾರಿ ಡಾ. ಹರ್ಷ ಗುಪ್ತ ಸರ್ಕಾರಕ್ಕೆ ಪತ್ರ ಬರೆದಿದ್ದರು. ಮಾಜಿ ಸಚಿವ ರೋಷನ್ ಬೇಗ್ ಅವರ ಆಸ್ತಿ ಜಪ್ತಿ ಮಾಡುವಂತೆ ಶಿಫಾರಸು ಮಾಡಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಪರೋಕ್ಷವಾಗಿ ಸರ್ಕಾರ ರೋಷನ್ ಬೇಗ್ ರ ರಕ್ಷಣೆ ಮಾಡಿತ್ತು. ಹೀಗಾಗಿ ಬೇಗ್ ಆಸ್ತಿಯನ್ನು ಜಪ್ತಿ ಮಾಡಲು ಯಾರೂ ಮುಂದಾಗಿರಿಲ್ಲ. ಇದೀಗ ಆ ಕಾಲ ಕೂಡಿ ಬಂದಿದೆ.

 ಐಎಂಎ ಬಹುಕೋಟಿ ವಂಚನೆ ಪ್ರಕರಣ: ಕಡಿಮೆ ಹೂಡಿಕೆ ಮಾಡಿದವರಿಗೆ ಲಾಟರಿ ! ಐಎಂಎ ಬಹುಕೋಟಿ ವಂಚನೆ ಪ್ರಕರಣ: ಕಡಿಮೆ ಹೂಡಿಕೆ ಮಾಡಿದವರಿಗೆ ಲಾಟರಿ !

IMA Scam : Former Minister Roshan Beg property foreclosure very soon

Recommended Video

Yeddiyurappa : ನನ್ನ ಕೆಳಗೆ ಇಳಿಸೋದು ಅಷ್ಟು ಸುಲಭ ಅಲ್ಲಾ | Oneindia Kannada

ಹೈಕೋರ್ಟ್ ಗರಂ: ಐಎಂಎ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅವರ ಆಸ್ತಿಯನ್ನು ಜಪ್ತಿ ಮಾಡದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಗರಂ ಆಗಿದೆ. ಸರ್ಕಾರ ಯಾಕೆ ಇಷ್ಟು ದಿನವಾದರೂ ಆಸ್ತಿ ಜಪ್ತಿ ಮಾಡಿಲ್ಲ ಎಂದು ನ್ಯಾಯಾಲಯ ಪ್ರಶ್ನೆ ಮಾಡಿತು. ಇದಕ್ಕೆ ಉತ್ತರ ನೀಡಿದ ಸಿಬಿಐ ವಿಶೇಷ ಅಭಿಯೋಜಕ ಪ್ರಸನ್ನಕುಮಾರ್, ಕೋವಿಡ್ ಲಾಕ್ ಡೌನ್ ಕಾರಣದಿಂದ ಆಸ್ತಿ ಜಪ್ತಿ ಸಾಧ್ಯವಾಗಲಿಲ್ಲ. ಅತಿ ಶೀಘ್ರದಲ್ಲಿಯೇ ಆಸ್ತಿ ಜಪ್ತಿ ಮಾಡುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಗರಂ ಆದ ಹೈಕೋರ್ಟ್, ಲಾಕ್ ಡೌನ್ ಗೂ ಆಸ್ತಿ ಜಪ್ತಿಗೂ ಸಂಬಂಧವಿಲ್ಲ, ಮೊದಲು ಆಸ್ತಿ ಜಪ್ತಿ ಮಾಡಿ ಎಂದು ಹೈಕೋರ್ಟ್ ಖಡಕ್ ನಿರ್ದೇಶನ ನೀಡಿದೆ.

English summary
IMA scam: High court of Karnataka has directed to the state govt to foreclose on the property of Ex minister Roshan baig know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X