ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ಹಗರಣ: ಪ್ರಭಾವಿಗಳ ಹೆಸರು ಹೊರ ಹಾಕಿದ ಮನ್ಸೂರ್ ಖಾನ್

|
Google Oneindia Kannada News

ಬೆಂಗಳೂರು, ಜುಲೈ 21: ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿರುವ ಎದುರಿಸುತ್ತಿರುವ ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಪ್ರಸ್ತುತ ಎಸ್‌ಐಟಿ ಹಾಗೂ ಇಡಿ ವಶದಲ್ಲಿದ್ದು ವಿಚಾರಣೆ ಒಳಪಡಿಸಲಾಗುತ್ತಿದೆ. ಈ ಹಂತದಲ್ಲಿ ಮನ್ಸೂರ್ ಖಾನ್ ಕೋಟ್ಯಂತರ ರೂಪಾಯಿ ಹಣವನ್ನು ಪ್ರಭಾವಿಗಳಿಗೆ ಲಂಚವಾಗಿ ಕೊಟ್ಟಿದ್ದಾಗಿ ಹೇಳಿದ್ದಾನೆ.

ತನಿಖಾ ಸಂಸ್ಥೆಗಳ ವಿಚಾರಣೆಯನ್ನು ಈ ವಿಷಯ ಬಾಯಿ ಬಿಟ್ಟಿರುವ ಮನ್ಸೂರ್ ಖಾನ್, ಹಲವು ರಾಜಕಾರಣಿಗಳು, ಪ್ರಮುಖ ಅಧಿಕಾರಿಗಳು, ಬಿಬಿಎಂಪಿ ಸದಸ್ಯರು, ಪೊಲೀಸ್ ಅಧಿಕಾರಿಗಳು ಇನ್ನೂ ಹಲವರಿಗೆ ಸುಮಾರು 200 ಕೋಟಿಗೂ ಹೆಚ್ಚು ಹಣವನ್ನು ಲಂಚವಾಗಿ ನೀಡಿರುವುದಾಗಿ ಹೇಳಿದ್ದಾರೆ.

ಐಎಂಎ ಹಗರಣ: ಮನ್ಸೂರ್ ಖಾನ್ ಜುಲೈ 23ರವರೆಗೆ ಇಡಿ ವಶಕ್ಕೆ ಐಎಂಎ ಹಗರಣ: ಮನ್ಸೂರ್ ಖಾನ್ ಜುಲೈ 23ರವರೆಗೆ ಇಡಿ ವಶಕ್ಕೆ

ಯಾರಿಗೆ ಹಣ ಕೊಡಲಾಗಿದೆ? ಎಲ್ಲಿ ಕೊಡಲಾಗಿದೆ, ಎಷ್ಟು ಕೊಡಲಾಗಿದೆ, ಯಾವ ಕಾರಣಕ್ಕೆ ಕೊಡಲಾಗಿದೆ ಎಂಬ ಪೂರ್ಣ ಮಾಹಿತಿ ಮನ್ಸೂರ್ ಖಾನ್‌ನ ಬಳಿ ಇದ್ದು, ಕಂಪ್ಯೂಟರ್‌ನಲ್ಲಿ ನಮೂದಾಗಿದೆ ಅದನ್ನು ತನಿಖಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಐಎಂಎ ವಂಚನೆ ಪ್ರಕರಣ : ಮನ್ಸೂರ್‌ ಖಾನ್‌ ನ್ಯಾಯಾಲಯಕ್ಕೆ ಹಾಜರ್ಐಎಂಎ ವಂಚನೆ ಪ್ರಕರಣ : ಮನ್ಸೂರ್‌ ಖಾನ್‌ ನ್ಯಾಯಾಲಯಕ್ಕೆ ಹಾಜರ್

ಬ್ರೇಕಿಂಗ್: ಐಎಂಎ ಹಗರಣ ಆರೋಪಿ ಮನ್ಸೂರ್ ಖಾನ್ ಬಂಧನಬ್ರೇಕಿಂಗ್: ಐಎಂಎ ಹಗರಣ ಆರೋಪಿ ಮನ್ಸೂರ್ ಖಾನ್ ಬಂಧನ

ಹೊರಬಿದ್ದ ಪ್ರಭಾವಿ ರಾಜಕಾರಣಿಗಳ ಹೆಸರುಗಳು?

ಹೊರಬಿದ್ದ ಪ್ರಭಾವಿ ರಾಜಕಾರಣಿಗಳ ಹೆಸರುಗಳು?

ಕೆಲವು ಅತ್ಯಂತ ಪ್ರಭಾವಿ ರಾಜಕಾರಣಿಗಳ, ಅಧಿಕಾರಿಗಳ ಹೆಸರನ್ನು ಮನ್ಸೂರ್ ಖಾನ್ ಹೇಳಿದ್ದಾನೆ ಎನ್ನಲಾಗಿದೆ. ಈ ಮೊದಲೂ ಆತ ದುಬೈ ನಲ್ಲಿ ಕೂತು ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಸಹ ರೋಷನ್ ಬೇಗ್ ಸೇರಿದಂತೆ ಕೆಲವು ಪ್ರಭಾವಿಗಳ ಹೆಸರು ಹೇಳಿದ್ದ.

ನಾಲ್ಕನೇ ಪತ್ನಿಯ ವಿಚಾರಣೆ ನಡೆಸಿದ ಅಧಿಕಾರಿಗಳು

ನಾಲ್ಕನೇ ಪತ್ನಿಯ ವಿಚಾರಣೆ ನಡೆಸಿದ ಅಧಿಕಾರಿಗಳು

ಮನ್ಸೂರ್ ಖಾನ್‌ನ ನಾಲ್ಕನೇ ಪತ್ನಿ ಇಝ್ನಾ ಅವರನ್ನು ಸಹ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿವೆ. ಅವರ ಮೂರು ಮಕ್ಕಳು ಮತ್ತು ಭಾವ ಜುಬೇದ್ ಅವರನ್ನೂ ವಿಚಾರಣೆಗೆ ಒಳಪಡಿಸಿವೆ. ಇವರೆಲ್ಲಾ ಕೊಲ್ಕತ್ತದಲ್ಲಿ ತಲೆಮರೆಸಿಕೊಂಡಿದ್ದರು, ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ನಾಲ್ಕನೇ ಪತ್ನಿ ಮತ್ತು ಮಕ್ಕಳ ವಿಚಾರಣೆ

ನಾಲ್ಕನೇ ಪತ್ನಿ ಮತ್ತು ಮಕ್ಕಳ ವಿಚಾರಣೆ

ಪತ್ನಿ ಮತ್ತು ಮಕ್ಕಳು ಮನ್ಸೂರ್ ಖಾನ್ ಜೊತೆಗೆ ದುಬೈಗೆ ಹೋಗಿದ್ದರು, ಆದರೆ ಕೆಲವು ದಿನಗಳ ನಂತರ ಅವರು ವಾಪಸ್ ಬೆಂಗಳೂರಿಗೆ ಬಂದು ಮತ್ತೆ ಇಲ್ಲಿಂದ ಕೊಲ್ಕತ್ತಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದರು.

ಜುಲೈ 23ರ ವರೆಗೆ ನ್ಯಾಯಾಂಗ ಬಂಧನ

ಜುಲೈ 23ರ ವರೆಗೆ ನ್ಯಾಯಾಂಗ ಬಂಧನ

ಮನ್ಸೂರ್ ಖಾನ್ ಜುಲೈ 19ರಂದು ನವದೆಹಲಿಗೆ ಬಂದಾಗ ಆತನನ್ನು ಇಡಿ ಮತ್ತು ಎಸ್‌ಐಟಿ ತಂಡವು ಬಂಧಿಸಿತ್ತು. ಮೊದಲಿಗೆ ಇಡಿಯಿಂದ ಪ್ರಾಥಮಿಕ ವಿಚಾರಣೆ ನಡೆಯಿತು ನಂತರ ಮನ್ಸೂರ್ ಖಾನ್‌ನನ್ನು ಬೆಂಗಳೂರಿಗೆ ಕರೆತರಲಾಯಿತು. ಮನ್ಸೂರ್ ಖಾನ್‌ನಿಗೆ ಜುಲೈ 23ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

English summary
IMA scam accused Mansoor Khan has been interrogated by SIT and ED officials. Sources say that, he told big names involved in the scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X